AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ರೋಟರಿ ಸಂಸ್ಥೆಯಿಂದ ಮಾನಸಿಕ ಆರೋಗ್ಯ ಮತ್ತು ಶಿಕ್ಷಣ ಅರಿವು ಕಾರ್ಯಕ್ರಮ.”

1 min read

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಬಿದರಹಳ್ಳಿ ಮೋರಾರ್ಜಿ ವಸತಿ ಶಾಲೆಯಲ್ಲಿ ರೋಟರಿ ಸಂಸ್ಥೆ ವತಿಯಿಂದ ದಿನಾಂಕ 22/12/2023ರ ಶುಕ್ರವಾರದಂದು ಇತ್ತೀಚೆಗೆ ಮಾನಸಿಕ ಆರೋಗ್ಯ ಮತ್ತು ಶಿಕ್ಷಣ ಅರಿವು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಮಾನಸಿಕ ತಜ್ಞ ಡಾ. ವಿನಯ್‌ಕುಮಾರ್ ಅವರು,ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಿಸುವ ಬಗ್ಗೆ,ಪರೀಕ್ಷೆ ಸಮಯದ ಆತಂಕ ನಿವಾರಿಸುವ ಬಗ್ಗೆ ಹಾಗೂ ಮನಸ್ಸಿನ ಸ್ಥಿತಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಿದರು.ನಂತರ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ ಮಕ್ಕಳೊಂದಿಗೆ ಸಂವಾಂದ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಕೆ.ಎಲ್.ಎಸ್.ತೇಜಸ್ವಿ ವಹಿಸಿದ್ದರು.ಅಸಿಸ್ಟಂಟ್ ಗವರ್ನರ್ ವಿನೋದ್ ಕುಮಾರ್ ಶೆಟ್ಟಿ,ರೋಟರಿ ಪೂರ್ವಾಧ್ಯಕ್ಷರಾದ ಬಿ.ಆರ್.ಯತೀಶ್,ಮಂಜುನಾಥ್,ಪ್ರದೀಪ್ ಕುಮಾರ್,ಪ್ರಸಾದ್,ದಿನೇಶ್,ಹಾಸ್ಟೆಲ್ ವಾರ್ಡನ್ ಪ್ರಸನ್ನ ಕುಮಾರ್,ಪ್ರದೀಪ್ ಹಾಗೂ ಮೋರಾರ್ಜಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *