AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅನುಕಂಪದ ಆಧಾರದಲ್ಲಿ ಕೆಲಸಕ್ಕೆ ಶೀಫಾರಸ್ಸು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೋರ್ವರ ಬಳಿ ಬಿ.ಇ.ಒ ಹೇಮಂತರಾಜ್ ಅವರು ತಮ್ಮ ಕಚೇರಿಯಲ್ಲಿ 10 ಸಾವಿರ ರೂ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ದಿನಾಂಕ 27/12/2023ರ ಬುಧವಾರದಂದು ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಹೊಯ್ಸಳಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ರಜನಿಕಾಂತ್ ಎಂಬುವರು ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ  ಹೃದಯಘಾತದಿಂದ ನಿಧನರಾಗಿದ್ದರು. ಅನುಕಂಪದ ಆಧಾರದ ಕೆಲಸ ಮಾಡಿಸಿಕೊಡಲು ರಜನಿಕಾಂತ್ ಅವರ ಪತ್ನಿ ಲತಾಮಣಿ ಅವರು ಮೂಡಿಗೆರೆ ಬಿ.ಇ.ಒ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.ಅನೇಕ ಬಾರಿ ಕಚೇರಿಗೆ ಅಲೆದು ಸುಸ್ತಾಗಿ ದ್ವಿತೀಯ ದರ್ಜೆ ಗುಮಾಸ್ತ ಬಶೀರ್ ಅಹಮ್ಮದ್ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ,ಬಿ.ಇ.ಒ ಅವರಿಗೆ 15 ಸಾವಿರ ರೂ ಕೊಡಬೇಕು,ಇಲ್ಲವಾದರೆ ಕೆಲಸ ಆಗುವುದಿಲ್ಲವೆಂದು ತಿಳಿಸಿದ್ದಾರೆ.ಬಳಿಕ ಲತಾಮಣಿ ಅವರು ಬಿ.ಇ.ಒ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ 10 ಸಾವಿರ ರೂ ನೀಡುವುದಾಗಿ ತಿಳಿಸಿ ರೆಕಾರ್ಡ್ ಮಾಡಿ,ಲೋಕಾಯಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 9:30 ಗಂಟೆಗೆ ಬಿ.ಇ.ಒ ಹೇಮಂತರಾಜ್ ಅವರಿಗೆ 10 ಸಾವಿರ ಹಣ ನೀಡುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಿ.ಇ.ಒ ಅವರನ್ನು ವಶಕ್ಕೆ ಪಡೆದಿದ್ದಾರೆ.ದ್ವಿತೀಯ ದರ್ಜೆ ಗುಮಾಸ್ತ ಬಶೀರ್ ಅಹಮ್ಮದ್ ತಲೆ ಮರೆಸಿಕೊಂಡಿದ್ದು, ಆವರನ್ನು ಬಂಧಿಸಲು ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದಾರೆ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *