AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ : ಶ್ರೀ ರಂಭಾಪುರಿ ಜಗದ್ಗುರುಗಳು….

1 min read

ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ : ಶ್ರೀ ರಂಭಾಪುರಿ ಜಗದ್ಗುರುಗಳು.

‎ತರಿಕೆರೆ: ಶಾಂತಿ ಸಮೃದ್ಧಿಯ ಬದುಕಿಗೆ ಧರ್ಮ ಬೇಕು. ಸಂತೃಪ್ತಿ ಸಮೃದ್ಧಿಗಾಗಿ ಧರ್ಮಾಚರಣೆ ಬೇಕು. ಅರಿವುಳ್ಳ ಮಾನವ ಜನ್ಮದಲ್ಲಿ ಅರಿತು ಬಾಳಿದರೆ ಬದುಕು ಬಂಗಾರ. ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ ಬರುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

‎ಅವರು ಶುಕ್ರವಾರ ತಾಲೂಕಿನ ಮುಂಡ್ರೆ ಗ್ರಾಮದಲ್ಲಿ ಜರುಗಿದ ಶ್ರದ್ದಾಂಜಲಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮನುಷ್ಯನ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೇ ಮಾರಕವಾಗಬಾರದು. ಸದಾಚಾರ ಸದ್ವರ್ತನೆ ಸೌಹಾರ್ದತೆ ಶಾಂತಿ ಸಮೃದ್ಧಿಗಳ ಸಫಲತೆಗೆ ಸೋಪಾನ. ಬಾಲ್ಯದಲ್ಲಿ ಜ್ಞಾನ ಯೌವನದಲ್ಲಿ ಸಂಪತ್ತು ಮತ್ತು ವೃದ್ಧಾಪ್ಯದಲ್ಲಿ ಪುಣ್ಯ `ಸಂಪಾದಿಸಿಕೊಂಡು ಬಾಳಬೇಕು ಎಂದರು

‎ಬಾಳಿನಲ್ಲಿ ಸಂಪತ್ತು ಗಳಿಸದಿದ್ದರೂ ಚಿಂತೆಯಿಲ್ಲ. ಸದ್ಗುಣವಂತನಾಗಿ ಬಾಳಬೇಕು. ಅಸತ್ಯದಿಂದ ಸತ್ಯಸಾಕ್ಷಾತ್ಕಾರದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾವಿನಿಂದ ಸಾವಿ ಸಾವಿಲ್ಲದೆಡೆಗೆ ಮುನ್ನಡೆಯುವುದೇ ಮನುಷ್ಯನ ಗುರಿಯಾಗಿರಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದು ಹೇಳಿದರು.

‎ಭಾರತೀಯ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರ. ಶೀಲ ಮತ್ತು ಚಾರಿತ್ರ್ಯ ಬಹಳ ಬೆಲೆಯುಳ್ಳದ್ದು. ಸುಸಂಸ್ಕೃತ ಮಹಿಳೆ ಕುಟುಂಬವನ್ನು ಬೆಳಗಬಲ್ಲಳು. ಎಂ.ಬಿ.ಗಿರಿರಾಜ್ ಅವರ ಧರ್ಮಪತ್ನಿ ಶ್ರೀಮತಿ ಬಿ.ಎಂ.ರತ್ನಮ್ಮನವರು ಆದರ್ಶ ಗೃಹಸ್ಥ ಜೀವನ ಹೊಂದಿ ಮಹಿಳಾ ಸಂಕುಲಕ್ಕೆ ಮಾದರಿಯಾಗಿದ್ದರು. ಹುಟ್ಟು ಎಷ್ಟು ಸಹಜವೋ ಹುಟ್ಟಿದವನಿಗೆ ಮರಣ ಅಷ್ಟೇ ನಿಶ್ಚಿತ. ಹುಟ್ಟು ಸಾವುಗಳ ಮಧ್ಯದ ಬದುಕನ್ನು ಆದರ್ಶಮಯವಾಗಿ ಕಟ್ಟಿಕೊಂಡಿದ್ದರು ಎಂದರು.

‎ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್. ಎಂ.ಲೋಕೇಶ್ ಸಮಾರಂಭವನ್ನು ಉದ್ಘಾಟಿಸಿ ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯರು, ಎಡೆಯೂರು ರೇಣುಕ ಶಿವಾಚಾರ್ಯರು, ತರೀಕೆರೆ ಜಗದೀಶ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ಚಿಕ್ಕಮಗಳೂರು ಚಂದ್ರಶೇಖರ ಶಿವಾಚಾರ್ಯರು,  ಹಣ್ಣೆ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು, ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯರು, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯರು ಪಾಲ್ಗೊಂಡು ಶ್ರದ್ದಾಂಜಲಿ ಸಮರ್ಪಿಸಿದರು. ಸಮಾರಂಭದಲ್ಲಿ ಹಲವಾರು ರಾಜಕೀಯ ಗಣ್ಯರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು. ಪ್ರಭುಲಿಂಗ ಶಾಸ್ತ್ರಿಗಳು ಸರ್ವರನ್ನು ಸ್ವಾಗತಿಸಿದರು.

‎ಎಂ.ಬಿ.ಗಿರಿರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಸಿ.ಟಿ.ರವಿ, ಜಿ.ಎಚ್.ಶ್ರೀನಿವಾಸ, ಶ್ರೀಮತಿ ವನಮಾಲಾ ಮೃತ್ಯುಂಜಯ, ಶ್ರೀಮತಿ ಸವಿತಾ ರಮೇಶ್, ಮಾಜಿ ಶಾಸಕ ಶಿವಶಂಕರಪ್ಪ, ಮೂಡಿಗೆರೆ ಪೂರ್ಣೇಶ, ಮುಂಡ್ರೆ ಗಂಗಾಧರಗೌಡ್ರು, ಕೆ.ಹೊಸಳ್ಳಿ ಗಿರೀಶ, ದೊರನಾಳ ಚಿತ್ರಶೇಖರಪ್ಪ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಸಮಾರಂಭದ ನಂತರ ಗಣಾರಾಧನೆ ಜರುಗಿತು.

ವರದಿ……

ರತ್ನನಾಗೇಶ್.  ಚಿಕ್ಕಮಗಳೂರು.

About Author

Leave a Reply

Your email address will not be published. Required fields are marked *