AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಫೆಬ್ರವರಿ 02 ಮತ್ತು 03 ರಂದು ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್.”

1 min read

ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಕನ್ನಡ
ಸಾಹಿತ್ಯ ಪರಿಷತ್ತಿನಿಂದ ಫೆಬ್ರವರಿ 02 ಮತ್ತು 03 ರಂದು ಚಿತ್ರದುರ್ಗ ಜಿಲ್ಲೆಯ,ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಅಂತರ್ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮೇಳನದ ಅಧ್ಯಕ್ಷತೆ ವಹಿಸುವರು ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್‌ ಹೇಳಿದರು.
ಫೆಬ್ರವರಿ 02 ರಂದು ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮೆರವಣಿಗೆ ಉದ್ಘಾಟಿಸುವರು. ತಹಸೀಲ್ದಾರ್ ತಿರುಪತಿ ಪಾಟೀಲ್ ರಾಷ್ಟ್ರ ಧ್ವಜಾರೋಹಣ,ಮಾಜಿ ಸಂಸದ ಚಂದ್ರಪ್ಪ ನಾಡಧ್ವಜ ಹಾಗೂ ಆರ್.ಮಲ್ಲಿಕಾರ್ಜುನಯ್ಯ ಪರಿಷತ್ ಧ್ವಜಾರೋಹಣ ನೆರವೇರಿಸುವರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗ ವಹಿಸಲಿವೆ ಎಂದು 23/01/2024ರ ಮಂಗಳವಾರದಂದು ವಾಹಿನಿಯೊಂದಿಗೆ ಮಾತನಾಡುತ್ತಾ ತಿಳಿಸಿದರು.
ಸಮ್ಮೇಳನವನ್ನು ಕಸಾಪ ಮಾಜಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಉದ್ಘಾಟಿಸಲಿದ್ದು ,ಸಚಿವ ಡಿ.ಸುಧಾಕರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.


ಬಿ.ಜಿ.ಗೋವಿಂದಪ್ಪ,ಬಿ.ಎನ್.ಚಂದ್ರಪ್ಪ,ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್,ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್‌ ಜೋಶಿ,ಕೆ.ಎಂ.ಶಿವಸ್ವಾಮಿ,ಚಿಕ್ಕಮಗಳೂರು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಉಪಸ್ಥಿತರಿರುವರು.
ಎರಡೂ ಜಿಲ್ಲೆಗಳ ಇತಿಹಾಸ ಹಾಗೂ ಸಾಹಿತ್ಯ,ಮಠಗಳ ಕೊಡುಗೆ ಹಾಗೂ ರಂಗಭೂಮಿ ಗೋಷ್ಠಿ ನಡೆಯಲಿದೆ.ನಂತರ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ‌ ಏರ್ಪಡಿಸಲಾಗಿದೆ.

ಫೆಬ್ರವರಿ 03 ರಂದು ವೀರಗಾಸೆ, ಚೌಡಿಕೆ,ಸೋಬಾನೆ,ಲಂಬಾಣಿ ನೃತ್ಯ ವಿಚಾರಗೋಷ್ಠಿ, ಸಾಂಸ್ಕೃತಿಕ ರಾಜಕಾರಣ,ಮಾನವೀಯ ಸಮಾಜ
ನಿರ್ಮಾಣ,ವಚನ ಸಾಹಿತ್ಯ,ಪುಸ್ತಕ ಸಂಸ್ಕೃತಿ ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿ,ಸಂಜೆ ಸಮ್ಮೇಳನಾಧ್ಯಕ್ಷರ ಜತೆ ಸಂವಾದ,ಬಹಿರಂಗ ಅಧಿವೇಶನ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸಾಹಿತ್ಯ ಸಿರಿ ಹಾಗೂ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಪ್ಪ,ಸೋಮಶೇಖರ್,ಜಿ.ಬಿ.ಪವನ್,ಗುರುವೇಶ್,ಎಚ್.ಆರ್.ಚಂದ್ರಪ್ಪ ಉಪಸ್ಥಿತರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *