AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ತಂಗಿಯಿಂದ ಅಕ್ಕನಿಗೆ ಲಿವರ್ ದಾನ : ಆದರೂ ಹೃದಯಾಘಾತದಿಂದ ಬದುಕುಳಿಯದ ಅಕ್ಕ.”

1 min read

ಲಿವರ್‌ ವೈಫಲ್ಯದಿಂದ ಆಸ್ಪತ್ರೆಯಲ್ಲಿದ್ದ ನೆಹರೂ ನಗರದ ದಿ|ಆನಂದ ನಾಯ್ಕ ಅವರ ಪುತ್ರಿ ಐಶ್ವರ್ಯ(29) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಅಕ್ಕನಿಗೆ ತಂಗಿ ಲಿವರ್‌ ದಾನ ಮಾಡಿದರೂ ಅಕ್ಕನ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಲಿವರ್ ಹಾನಿಗೀಡಾಗಿ ಬದುಕುಳಿಸುವ ಎಲ್ಲ ಪ್ರಯತ್ನದ ನಡುವೆಯೂ ಅವರು ಮೃತರಾಗಿದ್ದಾರೆ.
ಜಾಂಡೀಸ್‌ ಜ್ವರ ಬಾಧಿಸಿದ್ದ ಐಶ್ವರ್ಯ ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರ ಲಿವರ್‌ ಹಾನಿಯಾಗಿದ್ದು,ಲಿವರ್‌ ಟ್ರಾನ್ಸ್‌ಪ್ಲಾಂಟ್‌ ಮಾಡಬೇಕೆಂದು ತಿಳಿಸಿದ್ದರು.ಐಶ್ವರ್ಯ ಅವರ ತಾಯಿ ಮಗಳಿಗಾಗಿ ಲಿವರ್‌ ದಾನ ಮಾಡಲು ಮುಂದಾಗಿದ್ದರು.ಆದರೆ ಅಕ್ಕನ ಮೇಲೆ ಅಪಾರ ಪ್ರೀತಿ, ಅಕ್ಕರೆ ಹೊಂದಿದ್ದ ಬ್ಯಾಂಕ್‌ ಉದ್ಯೋಗಿಯಾಗಿರುವ ಅನುಷಾ ತಾನೇ ಲಿವರ್‌ ದಾನ ಮಾಡಲು ಮುಂದಾಗಿದ್ದರು.ಅಲ್ಲದೆ ಚಿಕಿತ್ಸೆಯ ಮುಂದುವರಿದ ಭಾಗವಾಗಿ ಐಶ್ವರ್ಯ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅನುಷಾ ಅದೇ ಆಸ್ಪತ್ರೆಯಲ್ಲಿ ಲಿವರ್‌ ದಾನ ಮಾಡಿದ್ದರು.ಆದರೆ ಐಶ್ವರ್ಯ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಲಿವರ್‌ ದಾನ ಮಾಡಿದ ತಂಗಿ ಅನುಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಂಜಿನಿಯರಿಂಗ್‌ ಪದವೀಧರೆಯಾಗಿದ್ದ ಐಶ್ವರ್ಯಳ ಚಿಕಿತ್ಸೆಗಾಗಿ 40 ಲಕ್ಷ ರೂ.ಖರ್ಚಾಗಿದ್ದು, ಜಾಲತಾಣಗಳಲ್ಲಿಯೂ ನೆರವು ಯಾಚಿಸಲಾಗಿತ್ತು.

✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *