ದಲಿತ ಸಂಘಟನೆಗಳಿಂದ ನೀಟ್ ಅಕ್ರಮ ಖಂಡಿಸಿ ಪಂಜಿನ ಮೆರವಣಿಗೆ…
1 min read
oplus_2097152
ದಲಿತ ಸಂಘಟನೆಗಳಿಂದ ನೀಟ್ ಅಕ್ರಮ ಖಂಡಿಸಿ ಪಂಜಿನ ಮೆರವಣಿಗೆ

ಆಲ್ದೂರು: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮ ವ್ಯವಸ್ಥೆಯನ್ನು ಖಂಡಿಸಿ ಶನಿವಾರ ದಲಿತ ಸಂಘಟನೆಗಳ ಸಹಭಾಗಿತ್ವದೊಂದಿಗೆ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ಕೆಂಪೇಗೌಡ ವೃತ್ತದ ವರೆಗೆ ಸಾಗಿ ಬಳಿಕ ಪಕ್ಕದ ರಸ್ತೆ ಬದಿಯಲ್ಲಿ ಪ್ರತಿಭಟನೆ ಮುಂದುವರೆಯಿತು.
ಪ್ರಸ್ತಾವಿಕವಾಗಿ ಮಾತನಾಡಿದ ಮುಖಂಡ ಹೆಡದಾಳು ಕುಮಾರ್, ಕಳೆದ 24 ದಿನಗಳಿಂದ ನೀಟ್ ಅಕ್ರಮ ಖಂಡಿಸಿ ಪ್ರಶ್ನೆ ಪತ್ರಿಕೆ ಸೋರಿಕೆ ವ್ಯವಸ್ಥೆ ವಿರುದ್ಧ ನಡೆದ ಪ್ರತಿಭಟನೆ ನಡೆಸಿದ್ದು, ಅಯೋಗ್ಯ ಕೇಂದ್ರ ಶಿಕ್ಷಣ ಮಂತ್ರಿ ರಾಜೀನಾಮೆಗೆ ಒತ್ತಾಯಿಸಿದರು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ,ನಕಲಿ ಪೊಲೀಸರನ್ನು ನಿಯೋಜಿಸಿ ವಿದ್ಯಾರ್ಥಿಗಳ ಮೇಲೆ ಗೂಂಡಾ ವರ್ತನೆಯನ್ನು ಮಾಡಿದ್ದು, ಇಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿದ್ದು, 22 ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪರಿಹಾರವೇನು ಇಂತಹ ಸರ್ಕಾರದ ವಿರುದ್ಧ ರೈತರು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಎಲ್ಲರೂ ಒಗ್ಗಟ್ಟಾಗಿದ್ದು ಸರ್ಕಾರಕ್ಕೆ ತಕ್ಕ ಪಾಠ ಮುಂಬರುವ ದಿನಗಳಲ್ಲಿ ಕಲಿಸಲಿದ್ದಾರೆ ಎಂದು ತಿಳಿಸಿದರು.
ಡಿಎಸ್ಎಸ್ ಮುಖಂಡ ಕೂದುವಳ್ಳಿ ಮಂಜುನಾಥ್, ವಿದ್ಯಾರ್ಥಿಗಳು ದೆಹಲಿಯಲ್ಲಿ ಇಟ್ಟ ಬೇಡಿಕೆ ನೀಟ್ ಹಗರಣದ ನಿಷ್ಪಕ್ಷಪಾತ ತನಿಖೆ ಮಾತ್ರ, ಧರ್ಮಾಧಾರಿತ ಸಿದ್ಧಾಂತದ ಮೂಲಕ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರ ಈ ದೇಶಕ್ಕೆ ಅವಶ್ಯಕತೆ ಇದೆಯೇ ಎಂಬುದನ್ನು ಯುವಜನರು ಪ್ರತಿಯೊಬ್ಬ ನಾಗರಿಕರು ತಮಗೆ ತಾವೇ ಪ್ರಶ್ನಿಸಿಕೊಂಡು ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಎಸ್ಎಸ್ ಜಿಲ್ಲಾ ಮುಖಂಡ ತುಡುಕೂರು ಯೋಗೇಶ್ ಮೃತಪಟ್ಟಂತಹ ವಿದ್ಯಾರ್ಥಿಗಳ ಕುಟುಂಬಗಳಿಗೆ ಒಂದು ಕೋಟಿ ಪರಿಹಾರ ಧನವನ್ನು ಶೀಘ್ರವಾಗಿ ಒದಗಿಸಬೇಕು ಎಂದು ಆಗ್ರಹಿಸಿದರು.
ಅಂಬೇಡ್ಕರ್ ಹೋರಾಟ ವೇದಿಕೆಯ ಅಧ್ಯಕ್ಷರಾದ ನವರಾಜು ಎಚ್, ಶಾಂತಿಯುತ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಲ್ಲದೆ ಲಾಠಿಗಳಲ್ಲಿ ಮೊಳೆಯನ್ನು ಸಿಕ್ಕಿಸಿ ತೀವ್ರವಾಗಿ ಗಾಯಗೊಳ್ಳುವಂತೆ ಲಾಟಿಚಾರ್ಜ್ ನಡೆಸಿ ಪೊಲೀಸರ ಸೋಗಿನಲ್ಲಿ ಗೂಂಡಾಗಳನ್ನು ಪ್ರತಿಭಟನೆಯಲ್ಲಿ ನುಸುಳ್ಳುವಂತೆ ಮಾಡಿದ 56 ಇಂಚಿನ ಎದೆಯ ಅಳತೆ ಉಳ್ಳ ಪ್ರಧಾನಿಯ ಕುಲಗೆಟ್ಟ
ಸರಕಾರ ವಿದ್ಯಾರ್ಥಿಗಳ ಮೇಲೆ ನಡೆಸಿದ ದೌರ್ಜನ್ಯ ಇತಿಹಾಸದ ಕ್ರೌರ್ಯದ ಪುಟಗಳಲ್ಲಿ ಸೇರಿದ್ದು, ಸೋನಂ ಒಂಗ್ಚುಂಗ್ ಎಂಬ ವಿಜ್ಞಾನಿ 26 ದಿನಗಳ ಕಾಲ ಅಮರಣಾಂತ ಉಪವಾಸ ಕೈಗೊಂಡಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಹೋರಾಟಕ್ಕಿಂದು ಜಯವಾಗಿದ್ದು, ಬಿಜೆಪಿ ಆಡಳಿತ ರೂಢ ಸರ್ಕಾರ ಶಿಕ್ಷಣ ಮಂತ್ರಿಯನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ವಿಫಲವಾಗಿದ್ದು ಕೊನೆಗೂ ವಿದ್ಯಾರ್ಥಿಗಳು ಪೋಷಕರು ದೇಶದ ನಾಗರೀಕರ ಪ್ರತಿಭಟನೆ ಅರ್ಧದಷ್ಟು ಮಾತ್ರ ನ್ಯಾಯ ಸಿಕ್ಕಿದ್ದು, ಶಿಕ್ಷಣವನ್ನು ಕೀಲಿಗೈಯನ್ನು ಇಂದು ಖಾಸಗಿ ಯವರ ಕೈಗಳಲ್ಲಿ ಅಡವಿಟ್ಟು, ವಿದ್ಯಾರ್ಥಿಗಳ ಭವಿಷ್ಯವನ್ನು
ಅತಂತ್ರ ಮಾಡಿರುವಂತಹವರು ಇಂಥವರನ್ನು ಅಧಿಕಾರದ ಗದ್ದುಗೆಗೆ ಏರಿಸಿದ ಪ್ರತಿಯೊಬ್ಬ ಮತದಾರರು ತಮ್ಮ ಮಕ್ಕಳ ಭವಿಷ್ಯವನ್ನು ಕುರಿತು ಚಿಂತಿಸಿ ಯೋಚಿಸಿ ತಮ್ಮ ನಿರ್ಧಾರಗಳನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಬೇಕು ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯ ಪೀಠದ ನ್ಯಾಯಾಧೀಶ ಸೂರ್ಯಕಾಂತ್ ವಿದ್ಯಾರ್ಥಿಗಳ ಪ್ರತಿಭಟನೆಯ ಪ್ರಕರಣ ಕುರಿತು ಕೋರ್ಟ್ ನಲ್ಲಿ ಸಮಯ ವ್ಯರ್ಥ ಮಾಡಬೇಡಿ ಎಂದು ತಿಳಿಸಿದ್ದರು ಆದರೆ ವಿದ್ಯಾರ್ಥಿ ಶಕ್ತಿಯನ್ನು ಕಂಡ ಬಳಿಕ ಪ್ರಕರಣದ ಮುಂದಿನ ವಿಚಾರಣಾ ದಿನಾಂಕವನ್ನು ಯಾವಾಗ ಎಂಬುದನ್ನು ತಿಳಿಸಿರುವುದು ಯುವಶಕ್ತಿಗೆ ಒಗ್ಗಟ್ಟಿಗೆ ಸಿಕ್ಕ ಸಫಲತೆ ಎಂದರು.
ಮುಖಂಡ ಶಂಕರ್ ಮಾತನಾಡಿದರು.
ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಗಣೇಶ್ ಕಠಾರದಹಳ್ಳಿ, ಪುಟ್ಟರಾಜು ಹೆಡೆದಾಳು,ಗಾಳಿ ಗಂಡಿ ಸುಂದರ್,ಯೋಗೇಶ್ ಸತ್ತಿಹಳ್ಳಿ, ಮನು ರೈಸ್ ಮಿಲ್, ಮಾಜಿ ಪಂಚಾಯತ್ ಸದಸ್ಯೆ ಲಕ್ಷ್ಮಿ, ಸುರೇಶ್, ಭದ್ರಯ್ಯ, ದೇವರಾಜು, ಸಂಘಟನೆಗಳ ಪದಾಧಿಕಾರಿಗಳು ಮುಖಂಡರುಗಳು ಭಾಗವಹಿಸಿದ್ದರು.

