AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಾವಳಗಿ:ಗ್ರಾಮದ ಮಾದರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಅಂದಾಜು 12 ಲಕ್ಷ ವೆಚ್ಚದ ಶಾಲಾ ಕೊಠಡಿ ನಿರ್ಮಾಣ#avintvcom

1 min read
Featured Video Play Icon

ಸಾವಳಗಿ : 28-1

12 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ

ಸಾವಳಗಿ : ಗ್ರಾಮದ ಮಾದರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಅಂದಾಜು 12 ಲಕ್ಷ ವೆಚ್ಚದ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ಆನಂದ ನ್ಯಾಮಗೌಡ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕಳೆದ ಸಾಲಿನಲ್ಲಿ ನಬಾರ್ಡ ಸಹಯೋಗದೊಂದಿಗೆ ಆರ್.ಆಯ್.ಡಿ.ಎಫ್. 25ರ ಯೋಜನೆಯಡಿಯಲ್ಲಿ ಪ್ರವಾಹ ಪೀಡಿತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಡ ಶಾಲೆಯ ಕೊಠಡಿ ನಿರ್ಮಿಸಲಾಗುತ್ತಿದ್ದು. ಇಲ್ಲಿ 3 ಕೊಠಡಿಗಳು ಸಂಪೂರ್ಣ ಶೀಥಿಲಾವಸ್ಥೆಗೊಂಡಿದ್ದು ಇದರಲ್ಲಿ ಒಂದು ಕೊಠಡಿ ಈ ಯೋಜನೆಯಲ್ಲಿ ಪ್ರಾರಂಭಗೊಳ್ಳುತ್ತದೆ. ಶಾಲಾ ಕೊಠಡಿ ಕಟ್ಟಡ ಕಾಮಗಾರಿ ಉತ್ತಮವಾಗಿರಬೇಕೆಂದು ಸಂಬಂದಿಸಿದ ಇಂಜೀನಿಯರ ಹಾಗು ಗುತ್ತಿಗೆದಾರರಿಗೆ ತಿಳಿಸಿದರು.

ನಂತರ ಸಾವಳಗಿ ಭಾಗದ ಸುಮಾರು 20ಕ್ಕೂ ಹೆಚ್ಚು ಶಿಕ್ಷಕರು ದಿ.ಸಿದ್ದು ನ್ಯಾಮಗೌಡ ಅವರ ಹೆಸರಿನಲ್ಲಿ ಸಾವಳಗಿ ಹೋಬಳಿಯ ಶಿಕ್ಷಕರ ಅನುಕೂಲಕ್ಕಾಗಿ ಬಸವ ಭವನ ನಿರ್ಮಿಸಿಕೊಡಬೇಕೆಂದು ಮನವಿ ಸಲ್ಲಿಸಿದರು. ಎಲ್ಲ ಸಾವಳಗಿ ಭಾಗದ ಶಿಕ್ಷಕರು ಸೇರಿ ಹಾಳುಬಿದ್ದ ಸಂಪನ್ಮೂಲ ಕೇಂದ್ರಕ್ಕೆ ಜೀವ ತುಂಬಿರುವದು ಬಹಳ ಸಂತಸದ ಸಂಗತಿ. ಸಿ.ಆರ್.ಪಿ.ಗಳವೆ ಅವರ ಕಾರ್ಯ ಬಹಳ ಶ್ಲಾಘನೀಯ. ಇಂತಹ ನಿಸ್ವಾರ್ಥ ಸೇವೆಯಿಂದ ಶೈಕ್ಷಣಿಕ ಪ್ರಗತಿ ಹೆಚ್ಚಾಗುತ್ತದೆ. ವೇತನಕ್ಕಾಗಿ ಕೆಲಸ ಮಾಡದೇ ಮಕ್ಕಳ ಅಭಿವೃದ್ದಿಗಾಗಿ ಕೆಲಸ ಮಾಡಬೇಕು. ಗಳವೆ ಅವರು ಜಿಲ್ಲೆಯಲ್ಲಿಯೇ ಮಾದರಿ ಸಂಪನ್ಮೂಲ ಕೇಂದ್ರ ನಿರ್ಮಿಸಿರುವದು ಹೆವ್ಮ್ಮೆಯ ಸಂಗತಿ. ಶೀಘ್ರದಲ್ಲಿಯೇ ಭವನ ನಿರ್ಮಿಸುವ ಕಾರ್ಯ ಪ್ರಾರಂಭಿಸುತ್ತೆವೆ ಎಂದು ಶಿಕ್ಷಕರಿಗೆ ಬರವಸೆ ನೀಡಿದರು.

ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಬಸವರಾಜ ಮಾಳಿ, ಕಾಂಗ್ರೇಸ ಕಾರ್ಮಿಕ ಘಟಕದ ರಾಜ್ಯ ಉಪಾದ್ಯಕ್ಷ ಆಧಿನಾಥ ಸಕಳೆ, ಮಾಜಿ ಗ್ರಾ.ಪಂ. ಅದ್ಯಕ್ಷ ಸುಭಾಷ ಪಾಟೋಳಿ, ಲೇನಿನ ನಾಂದ್ರೇಕರ, ಕ್ಷೇತ್ರ ಶೀಕ್ಷಣಾಧಿಕಾರಿ ಸಿ.ಎಮ್.ನೇಮಗೌಡ, ಸಮೂಹ ಸಂಪನ್ಮೂಲ ವ್ಯಕ್ತಿ ಗಿರೀಶ ಗಳವೆ, ಶಿಕ್ಷಕರ ಸೋಸೈಟಿಯ ನಿರ್ಧೇಶಕ ಎಸ್.ಬಿ.ಸಂಗಾಪೂರ, ಎಸ್.ಎಸ್.ಬಂಗೆನ್ನವರ, ವಿಜಯ ಹಲಗಿಮನಿ, ಪ್ರಶಾಂತ ಜಂಬಗಿ, ರಾಜಕುಮಾರ ತಳಕೇರಿ, ಮಲ್ಲಿಕಾರ್ಜುನ ಸೂರ್ಯವಂಶಿ ಸೇರಿದಂತೆ ಹಲವರು ಇದ್ದರು.

ಪೋಟೊ ವಿವರ :ಸಾವಳಗಿ ಗಂಡು ಮಕ್ಕಳ ಮಾದರಿ ಶಾಲೆಯ ಕೊಠಡಿ ನಿರ್ಮಾಣಕ್ಕೆ ಶಾಸಕ ಆನಂದ ನ್ಯಾಮಗೌಡ ಗುದ್ದಲಿ ಪ್ರಜೆ ನೇರವೆರಿಸಿದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author