AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಸಮುದ್ರದಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ಬೋಟ್ : ಪ್ರಾಣಾಪಾಯದಿಂದ ಪಾರಾದ ಮೀನುಗಾರರು.”

1 min read

ಸಮುದ್ರದಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ಬೋಟೊಂದು ಮುಳುಗಿದ ಘಟನೆ ದಿನಾಂಕ 02/02/2024ರ ಶುಕ್ರವಾರ ಬೆಳಗಿನ ಜಾವ ನಡೆದಿದ್ದು, ಬೋಟಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಳ್ಳಾಲದ ನಯನಾ ಪಿ. ಸುವರ್ಣ ಎಂಬುವವರಿಗೆ ಸೇರಿದ್ದ ಬೋಟ್ ಉಳ್ಳಾಲದಿಂದ ಮೀನುಗಾರಿಕೆಗೆ ತೆರಳಿತ್ತು.ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ಉಳ್ಳಾಲ ತೀರದ ಮೂಲಕ ದಡಕ್ಕೆ ಬೋಟ್ ಆಗಮಿಸುತ್ತಿತ್ತು. ಈ ವೇಳೆ ಬೋಟಿನ ಪ್ರೊಫೈಲರ್ ಗೆ ಯಾವುದೋ ವಸ್ತು ತಾಗಿ ಸ್ಥಗಿತಗೊಂಡಿದೆ. ಹೀಗಾಗಿ ಬೋಟ್ ಕಲ್ಲಿಗೆ ಬಡಿದಿದ್ದು,ಇದರಿಂದ ತೀವ್ರ ಹಾನಿಗೊಂಡು ಬೋಟ್ ಮುಳುಗಿದೆ.


ಘಟನೆ ವೇಳೆ ಬೋಟಿನಲ್ಲಿ ನಯನಾ ಅವರ ಪತಿ ಪ್ರವೀಣ್ ಸುವರ್ಣ,ಉತ್ತರ ಪ್ರದೇಶ ಮೂಲದ ಮೀನುಗಾರರಾದ ಸಮರ ಬಹಾದ್ದೂರ್,ರಾಮ್ ಮನೋಜ್,ರೋಹಿತ್,ಪ್ರಕಾಶ್ ಮತ್ತು ವಾಸು ಎಂಬುವವರಿದ್ದರು.ಇವರನ್ನು ದುರ್ಗಾ ಲಕ್ಷ್ಮೀ ಮತ್ತು ಶ್ರೀಗೌರಿ ಬೋಟಿನವರು ರಕ್ಷಿಸಿದ್ದಾರೆ.
ಮುಳುಗಡೆಯಾಗಿರುವ ಬೋಟಿನಲ್ಲಿದ್ದ ಮೀನು,ಬಲೆ ಸಮುದ್ರ ಪಾಲಾಗಿದ್ದು,ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿ ಸಂಭವಿಸಿದೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *