AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವರುಣನ ಆರ್ಭಟಕ್ಕೆ ದಾರೆಗುರುಳಿದ ಮನೆ ಸಂತ್ರಸ್ಥೆಯ ಗೊಳು ಕೇಳುವರಿಲ್ಲ..!!!!????

1 min read

ವರುಣನ ಆರ್ಭಟಕ್ಕೆ ದಾರೆಗುರುಳಿದ ಮನೆ
ಸಂತ್ರಸ್ಥೆಯ ಗೊಳು ಕೇಳುವರಿಲ್ಲ..!!!!????

ಮೂಡಿಗೆರೆ ತಾಲೂಕಿನ ಬಕ್ಕಿ ಗ್ರಾಮದ ಸರಿತಾ ಎಂಬುವರ ಮನೆಯು ನಿನ್ನೆ ಸುರಿದ ಭಾರಿ ಮಳೆಗೆ ಬೆಳಗಿನ ಜಾವ ಸುಮಾರು 5 ಗಂಟೆಗೆ ನೆಲಕ್ಕುರಿಳಿದೆ ಅದೃಷ್ಟಾವಶತ್ ಪ್ರಾಣಪಾಯದಿಂದ ಸರಿತಾ ಮತ್ತು ಅವರ 17 ವರ್ಷದ ಮಗ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಯನ್ನು ಹೊರತುಪಡಿಸಿ ಯಾವ ಜನಪ್ರತಿನಿಧಿಗಳು ಅಧಿಕಾರಿಗಳು ಆಗಮಿಸದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಿಗೆರೆಯಿಂದ ಕೇವಲ 8.ಕಿಲೊಮೀಟರ್ ದೂರದಲ್ಲಿರುವ ಸ್ಥಳಕ್ಕೆ ತಾಲೂಕು ಆಡಳಿತ ಬಾಗವಹಿಸದೆ ಇರುವುದು ತಾಲೂಕು ಆಡಳಿತದ ನಿರ್ಲಕ್ಷ್ಯವನ್ನು ಎತ್ತಿ ತೊರಿಸುತ್ತಿದೆ.
ಕೂಲಿ ಮಾಡಿ ಜೀವನವನ್ನು ಸಾಗಿಸುತ್ತಿರುವ ಸರಿತಳಿಗೆ ವಾಸಕ್ಕೆ ಮನೆ ಇಲ್ಲದಂತಾಗಿದೆ.
ಕೂಡಲೆ ತಾಲೂಕು ಅಡಳಿತ ಸಂತ್ರಸ್ಥೆಗೆ ವಾಸಿಸಲು ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

About Author

Leave a Reply

Your email address will not be published. Required fields are marked *