AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಜಮಖಂಡಿ ನಗರದಲ್ಲಿ ಆಶಾ.ಅಂಗವಾಡಿ. #avintvcom

1 min read
Featured Video Play Icon

ಬಾಗಲಕೋಟ ಜಿಲ್ಲೆಯ    ಜಮಖಂಡಿ  ತಾಲೂಕಿನಲ್ಲಿ   ಜಮಖಂಡಿ ನಗರದಲ್ಲಿ ಆಶಾ.ಅಂಗವಾಡಿ. ಬಿಸಿಯೂಟ ಕಾರ್ಯಕರ್ತರು ಎ.ಜಿ.ದೇಸಾಯಿ ಸರ್ಕಲದಿಂದ ಮಿನಿ ವಿಧಾನಸೌಧವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆಯ ನಡೆಸಿ ತಹಸೀಲ್ದಾರ ಸಂಜಯ ಇಂಗಳೆ ಅವರಿಗೆ ಮನವಿಯನ್ನು ಸಲಿಸಿದರು.

ಪ್ರತಿಭಟನಾಕಾರರು ಮಿನಿ ವಿಧಾನಸೌಧವನ್ನು ತಲುಪಿದ ನಂತರ ಮಾತನಾಡಿದ ಅವರು. ಎಲ್ಲ ರೈತ ವಿರೋಧಿ ಕಾನೂನುಗಳನ್ನು ಹಾಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರವು ಹೊರಡಿಸಿರುವ ಸುಗ್ರೀವಾಜ್ಣೆಗಳನ್ನು ವಾಪಸ ಪಡೆಯಬೇಕು.

ಆಶಾ.ಅಂಗವಾಡಿ.ಬಿಸಿಯೂಟ ಸ್ಕಿಮ್ ಕಾರ್ಯಕರ್ತೆಯರಿಗೆ ಕಾರ್ಮಿಕ ಸ್ಥಾನ ನೀಡಬೇಕು. 21.000.ರೂಪಾಯಿ ಕನಿಷ್ಟ ವೇತನ ನಿಗದಿಯಾಗಬೇಕು. ಎಲ್ಲರಿಗೂ ಪಿಂಚಣಿ ಒದಗಿಸಿ ಎನ್.ಪಿ.ಎಸ್. ರದ್ದು ಮಾಡಿ ಹಿಂದಿನ ಪಿಂಚಣಿ ಯೋಜನೆಯನ್ನು ಪುನಃ ಸ್ಥಾಪಿಸಿ ಇಪಿಎಸ್ -95 ಸುಧಾರಿಸಬೇಕು.

ಕೋವಿಡ್-19 ದಿಂದ ವಸತಿ ರನಿಲಯ. ವಸತಿ ಶಾಲೆ. ಗುತ್ತಿಗೆ. ಹೊರಗುತ್ತಿಗೆ ಕಾರ್ಮಿಕರು. ವೈದ್ಯರು. ಅರೋಗ್ಯ ಸಿಬ್ಬಂಗಳು.ಪೌರಕಾರ್ಮಿಕರು.ಆಶಾ ಕಾರ್ಯಕರ್ತರು. ಅಂಗನವಾಡಿ. ಬಿಸಿಯೂಟದ ಕಾರ್ಮಿಕರ ಬದುಕಿಗೆ ರಕ್ಷಣೆ ನಿಲ್ಲದೆ ಸರ್ಕಾರ ಭಾರಿ ಶ್ರೀಮಂತರ ಹಿತ ಕಾಪಾಡಲು ಮುಂದಾಗಿರುವದು ಖಂಡಿನಿಯ ಎಂದರು.

ಇದೇ ಸಂದರ್ಭದಲ್ಲಿ ಅಂಗವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ಕಸ್ತೂರಿ ಜೈನಾಪೂರ(ಅಂಗಡಿ) ಎಸ್.ಎ.ಪೂಜಾರಿ. ರೋಹಿಣಿ ಮನಗೂಳಿ. ಅಂಜನಾ ಕುಂಬಾರ.ಬಿ.ಪಿ.ಬಿರಾದರ.ಬಿ.ಆರ್.ತಬಿ. ಜಿ.ಎಮ್.ಲಗಳಿ.ಎಮ್.ಎಸ್.ಬಳೊಲಗಿಡದ. ಸಿ.ಎಮ್.ಹಿರೇಮಠ ಹಾಗೂ ಅನೇಕರು ಇದ್ದರು.

ವರದಿ. ಪರಶುರಾಮ್. ಕಾಂಬಳೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author