AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಿಲ್ಲಾ ಸಮಿತಿಯಿಂದ. ಮೀಸಲಾತಿ ಜನಕ. “ಛತ್ರಪತಿ ಶಾಹು ಮಹಾರಾಜ್” ರವರ,ಜನ್ಮದಿನವನ್ನು ಆಚರಿಸಲಾಯಿತು…

1 min read

ಬಹುಜನ ಸಮಾಜ ಪಾರ್ಟಿ ಚಿಕ್ಕಮಗಳೂರು
🐘🐘🐘🐘🐘
ಜಿಲ್ಲಾ ಸಮಿತಿಯಿಂದ. ಮೀಸಲಾತಿ ಜನಕ. “ಛತ್ರಪತಿ ಶಾಹು ಮಹಾರಾಜ್” ರವರ,ಜನ್ಮದಿನವನ್ನು ಆಚರಿಸಲಾಯಿತು.ಶಾಹು ಮಹಾರಾಜರ ಪೋಟೊಕ್ಕೆ ಪುಷ್ಪಗಳನ್ನ ಅರ್ಪಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷರಾದ ಜಾಕಿರ್ ಹುಸೇನ್ ರವರು. 1902ಜುಲೈ 26ರಂದು ಮೊಟ್ಟ ಮೊದಲ ಬಾರಿಗೆ ತಮ್ಮ ಸಂಸ್ಥಾನದಲ್ಲಿ ಇತರೆ ಹಿಂದುಳಿದ ಜಾತಿಗಳಿಗೆ. ಶೇ 50%ಮೀಸಲಾತಿ ಜಾರಿ ಮಾಡಿ ಮೀಸಲಾತಿ ಜನಕ ಎನೆಸಿಕೊಂಡರು 1920ರಲ್ಲಿ ತಮ್ಮ ಸಂಸ್ಥಾನದಲ್ಲಿ ಒಂದು ದೊಡ್ಡ ಸಭೆಯನ್ನ ಮಾಡಿ ಆ ಸಭೆಯಲ್ಲಿ ಡಾ.ಬಿ.ಆರ್. “ಅಂಬೇಡ್ಕರ್ “ರವರನ್ನ ಪರಿಚಯಿಸುತ್ತ ಇದುವರೆಗೂ ಜ್ಯೋತಿಭಾ ಪುಲೆ ಮತ್ತು ನಾನು ಮುನ್ನಡೆಸಿದ ಚಳುವಳಿಯನ್ನು ಇನ್ನು ಮುಂದೆ ರಾಷ್ಟ ಮಟ್ಟದಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರು ಮುಂದುವರಿಸಲಿದ್ದಾರೆ,
ಎಂದು ಶಾಹು ಮಹಾರಾಜರು ಆ ಸಭೆಯಲ್ಲಿ ಬಾ ಬಾ ಸಾಹೇಬ್ ಅಂಬೇಡ್ಕರ್ ರವರನ್ನ ಪರಿಚಯಿಸಿದರು ಎಂದು ನುಡಿದರು.

K.T.ರಾಧಾಕೃಷ್ಣ. ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡುತ್ತಾ.ಒಂದು ಸಂಸ್ಥಾನದ ರಾಜ ತೆಗೆದುಕೊಂಡ ಮೀಸಲಾತಿಯ ನಿರ್ಣಯ ಅದು ಮುಂದೆ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣ ರಾಜ ಒಡೆಯರು ಸಹಮೀಸಲಾತಿಯನ್ನು ಶೇ 75%ಜಾರಿಯಾಗಲು ಕಾರಣವಾಯಿತು.ಮುಂದುವರಿದು ಬಾ. ಬಾ.ಸಾಹೇಬ್ ಅಂಬೇಡ್ಕರ್. ರವರ ಮುಕಾಂತರ ಭಾರತದ ಸಂವಿದಾನದಲ್ಲಿ ಅಳವಡಿಸುವುದರ ಮುಕಾಂತರ ಅದು ಅಖಿಲ ಭಾರತ ಮಟ್ಟದಲ್ಲಿ ಜಾರಿಗೆ ಬರಲು ಕಾರಣವಾಹಿತು.

K.B.ಸುಧಾ.ರಾಜ್ಯ ಕಾರ್ಯದರ್ಶಿ ಗಳು ಮಾತನಾಡುತ್ತಾ. ಮಹಾರಾಜರು ಶೂದ್ರ ಜಾತಿಯವರು ಆದ ಕಾರಣ ಮಹಾರಾಜರ ಪಟ್ಟಭಿಷೇಕಕ್ಕೆ ಬ್ರಹ್ಮಣ ಪುರೋಹಿತರು ಪಟ್ಟಬಿಷೇ ಕ ನಡೆಸಬೇಕಾದ್ರೆ ತಪ್ಪು ಸ್ಲೋಕ ಗಳನ್ನ ಹೇಳೇ ಮಹಾರಾಜಾರಿಗೆ ಅವಮಾನ ಮಾಡಿದರ ಪರಿಣಾಮದಿಂದ ಮತ್ತೆ ಶೂದ್ರ ಪುರೋಹಿತ ರಿಂದ ಮತೊಮ್ಮೆ ಪಟ್ಟಭಿಷೇಕ ಕಾರ್ಯಕ್ರಮ ಮಾಡಿಸಿಕೊಂಡರು ಮಹಾರಾಜರನ್ನು ಅಡುಗೆ ಮನೆಯಲ್ಲಿ ಒಳ ಪ್ರವೇಶಕ್ಕೆ ಬಿಡದಲೇ ಅವಮಾನ ಮಾಡಿಸಿದರು, ಮಹಾರಾಜರು ಇದೆಲ್ಲದರ ಪರಿಣಾಮವಾಗಿ ತಮ್ಮ ಸಂಸ್ಥಾನದಲ್ಲಿ ಮೀಸಲಾತಿ ಜಾರಿಮಾಡಿದರು. ಮತ್ತು “ಸತಿ ಸಹಗಮನ “ಪದ್ದತಿ ವಿರೋಧಿಸಿದರು ಮತ್ತು “ವಿದುವಾ ವಿವಾಹಕ್ಕೆ “ಎಚ್ಚಿನ ಪ್ರೊಸ್ತಾಹ ನೀಡಿ ಸಸ್ಥಾನದಲ್ಲಿ ಜಾರಿಮಾಡಿದರು ಇವರ ಮೇಲೆ ಮೇಲ್ವರಗದರಿಂದ ಇವರ ಮೇಲೆ ಕೊಲೆ ಪ್ರಯತ್ನ ನಡೆಯಿತು ಮಹಾರಾಜರು ಯಾವುದಕ್ಕೂ ಜಗ್ಗದೆ ತಮ್ಮಸಂಸ್ಥಾನದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡುವುದರಲ್ಲಿ ಭಾರತದ ಮೇರು ಶಿಖರವಾದರು.

P.ವೇಲಾಯುದನ್ ರಾಜ್ಯ ಕಾರ್ಯದರ್ಶಿ ಮಾತನಾಡುತ್ತಾ :ಮೀಸಲಾತಿ ಮಹಾರಾಷ್ಟದ ಒಂದು ಸಂಸ್ಥಾನದಲ್ಲಿ ಪ್ರಾರಂಬಗೊಂಡು ಅದು ಅಖಿಲ ಭಾರತದಮಟ್ಟದಲ್ಲಿ ಸಾಮಾಜಿಕ ಪರಿವರ್ತನೆಯ ನಾಯಕರ ಹೋರಾಟದ ಪರಿಣಾಮವಾಗಿ ಭಾರತದ ಸಂವಿದಾನದಲ್ಲಿ ಅಳವಡಿಸಿದರ ಪರಿಣಾಮವಾಗಿ ಇವಾಗ ಇತರೆ ಹಿಂದುಳಿದ ಜಾತಿಗಳಿಗೆ ಭಾರತದಲ್ಲಿ ಶೇ 27%ಮೀಸಲಾತಿ ಜಾರಿಯಲ್ಲಿ ಇದೆ ಆದರೆ ಸರ್ಕಾರಗಳು ಪರಿಣಾಮಕಾರಿಯಾಗಿ ಜಾರಿಮಾಡಿ. ಹಿಂದುಳಿದವರನ್ನ ಮೇಲೆತ್ತುವ ಕೆಲಸ ಹಾಗಬೇಕಾಗಿದೆ.

P. ಪರಮೇಶ್ವರ್ ಜಿಲ್ಲಾ ಅಧ್ಯಕ್ಷರು ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡುತಾ ಬಹುಜನ ಸಮಾಜ ಪಕ್ಷವು ಸಮಾಜ ಪರಿವರ್ತನ ನಾಯಕರ ಎಲ್ಲರ ತ್ಯಾಗ, ಕೊಡುಗೆಗಳನ್ನ ಮತ್ತು ಅವರ ಹೋರಾಟದ ವಿಚಾರವನ್ನ ಯುವ ಜನರಲ್ಲಿ ಬಿತುತ್ತಾ ಬಂದಿದೆ ಎಲ್ಲ ಮಹಾನ್ ನಾಯಕರ ಮುಚ್ಚಲ್ಪಟ್ಟ ವಿಚಾರವನ್ನ ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಾನ್ಯಾವರು “ಕಾನ್ಷಿರಾಂ “ಸಾಹೇಬರಿಗೆ ಸಲ್ಲ ಬೇಕು ಬಹುಜನ ಸಮಾಜ ಇವರೆಲ್ಲರ ಹೋರಾಟದ ಆಶಯ ಇಟ್ಟುಕೊಂಡು sc /st /obc ಅಲ್ಪಸಂಖ್ಯಾತರನ್ನ ಒಳಗೊಂಡು ಈ ದೇಶವನ್ನು ಆಳ ಬೇಕೆಂಬ ಇಚ್ಛೆ ಹೊಂದಿದೆ ಎಂದರು
ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಯಾದ. ಜಾಕಿರ್ ಅಲಿಕನ್. ಲೋಕಸಭಾ ಉಸ್ತುವಾರಿಯಾದ.ಬಿ.ಎಂ.ಶಂಕರ್, K.R.ಗಂಗಾಧರ್ ಜಿಲ್ಲಾ ಸಂಯೋಜಕರಾದ.ಯು.ಬಿ.ಮಂಜಯ್ಯ, ಜಿಲ್ಲಾ ಉಪಾಧ್ಯಕ್ಷ ರಾದ.ಎಂ, ಬಾಬು,K. S ಮಂಜುಳಾ, ಜಿಲ್ಲಾ ಕಾರ್ಯದರ್ಶಿ ಪುಟ್ಟಸ್ವಾಮಿ. ಕಡೂರು ತಾಲೋಕು ಅಧ್ಯಕ್ಷ ಚಂದ್ರಶೇಖರ , ಮೂಡಿಗೆರೆ ತಾಲೋಕು ಪ್ರಧಾನ ಕಾರ್ಯದರ್ಶಿ ಮಹೇಶ್, ಚಿಕ್ಕಮಗಳೂರು ತಾಲೋಕು ಪ್ರಧಾನ ಕಾರ್ಯದರ್ಶಿ ವಸಂತ.ಸವಿತಾ ಮನೋಜ್ ಅಲ್ದೂರು  ಮುಂತಾದವರು ಇದ್ದರು. ಸಭೆಯು ಬಿ ಎಸ್ ಪಿ ಜಿಲ್ಲಾಕಚೇರಿಯಲ್ಲಿ ನಡೆಸಲಾಯಿತು.ನಿರ್ವಹಣೆ P k ಮಂಜುನಾಥ್ ಪ್ರಧಾನ ಕಾರ್ಯದರ್ಶಿ ಮಾಡಿದರು.ಸ್ವಾಗತವನ್ನು K S ಮಂಜುಳಾ, ವಂದನೆಯನ್ನು ಪುಟ್ಟಸ್ವಾಮಿ ಭಕ್ತರಳ್ಳಿ, ಮಾಡಿದರು.

 

ವರದಿ…..
P K ಮಂಜುನಾಥ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಗಳೂರು 🙏

About Author

Leave a Reply

Your email address will not be published. Required fields are marked *

You may have missed