AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳೆ ಶ್ರೀರಕ್ಷೆ” #avintvcom

1 min read
Featured Video Play Icon

ಶಿರಗುಪ್ಪಿ

“ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳೆ ಶ್ರೀರಕ್ಷೆ”

ಶಿರಗುಪ್ಪಿಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಗ್ರಾಮ ಸ್ವರಾಜ್ಯ’ ಸಮಾವೇಶವನ್ನು ಪಕ್ಷದ ಮುಖಂಡರ ನೇತೃತ್ವದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾಮೀಣ ಭಾಗಗಳಲ್ಲೂ ಬಿಜೆಪಿ ಮತ್ತಷ್ಟು ಸಮರ್ಥವಾಗಿ, ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೂ ಪಕ್ಷವನ್ನು ಅಧಿಕಾರಕ್ಕೆ ತಂದು, ಜನರಿಗೆ ಸುಭದ್ರ ಆಡಳಿತ ನೀಡುವುದೇ ನಮ್ಮ ಉದ್ದೇಶವಾಗಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಸಮಾವೇಶ ನಡೆಸಿ, ಕಾರ್ಯಕರ್ತರಿಗೆ ಮತ್ತಷ್ಟು ಆತ್ಮವಿಶ್ವಾಸ ತುಂಬುವ ಏಕೈಕ ಪಕ್ಷ ಬಿಜೆಪಿ. ಈ ಚುನಾವಣೆಗೆ ನಾವೆಲ್ಲರೂ ಸಿದ್ಧರಾಗಿದ್ದು, ಚುನಾವಣೆಯನ್ನು ನಾವು ಸವಾಲಾಗಿ ಸ್ವೀಕರಿಸಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ  ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಲಿದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ  ಸಚಿವರಾದ ಶ್ರೀ ಜಗದೀಶ ಶೆಟ್ಟರ್ ಜಿ,  ಶ್ರೀ ಸಿ.ಸಿ. ಪಾಟೀಲ್ ಜಿ,  ಶಾಸಕರಾದ ಶ್ರೀ ಮಹೇಶ ಕುಮಠಳ್ಳಿ ಜಿ, ಶ್ರೀ ಪಿ. ರಾಜೀವ್ ಜಿ, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಶ್ರೀ ಮಹಾಂತೇಶ್ ಕವಟಗಿಮಠ ಜಿ, ರಾಜ್ಯ ಯುವಮೋರ್ಚಾದ ಅಧ್ಯಕ್ಷರಾದ ಡಾ.ಸಂದೀಪ ಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಎಂ ರಾಜೇಂದ್ರ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ಎಂ. ಸಿದ್ಧರಾಜು, ಬಿಜೆಪಿ ಜಿಲ್ಲಾಧ್ಯಕ್ಷರಾದ ಡಾ. ರಾಜೇಶ್ ನೇರ್ಲಿ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಗಣ್ಯರು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

“ग्रामपंचायत निवडणुकीत केंद्र, राज्य सरकाराचे योजनाच श्रीरक्षा”

शिरगुप्पी येथे भाजपा पक्षाच्या वतीने आयोजित ‘ग्राम स्वराज्य’  समावेश मान्यवरांच्या नेतृत्वात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी उद्घाटन करून, कार्यक्रमास उद्देशून संबोधित केले.

ग्रामीण भागातही भाजपा अधिक कार्यक्षमतेने पंचायतपासून संसदेपर्यंत पक्ष सत्तेवर आणून, लोकांना सुरक्षित प्रशासन प्रधान करणे हेच आमचा ध्येय आहे. ग्रामपंचायत निवडणुकीसाठी बैठक घेऊन, कार्यकर्त्यांना अधिक आत्मविश्वास वाढवणारा एकमेव पक्ष भाजपा आहे. या निवडणुकीसाठी सर्वजण सज्ज झाले असून आव्हान म्हणून निवडणूक स्वीकारली आहे. केंद्र आणि राज्य सरकारच्या जनपर कामेच आम्हा श्रीरक्षा होईल असे सांगितले.

यावेळी श्री. जगदीश शेट्टर जी, श्री सी.सी. पाटील जी, आमदार श्री महेश कुमठळ्ळी जी, श्री पी. राजीव जी, विधान परिषदेचे मुख्य सचेतक श्री महांतेश कवटगीमठ जी, प्रदेशाध्यक्ष युवमोर्चाचे डॉ. संदीप कुमार, प्रदेश उपाध्यक्ष श्री. एम. राजेंद्र, प्रदेश सरचिटणीस श्री सिद्धराजु, भाजपा जिल्हाध्यक्ष श्री. राजेश नेर्ली, प्रदेश पदाधिकारी, जिल्हा सरचिटणीस, मान्यवर पक्षाचे स्थानिक नेते व कार्यकर्ते उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author