AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಿನಾಂಕ 03/01/2024ರ ಬುಧವಾರದಂದು ಜೆಸಿಐ ಮೂಡಿಗೆರೆ ವತಿಯಿಂದ ಬಿಳುಗುಳದ ಬಿ.ಜಿ.ಎಸ್.ಕಾಲೇಜಿನಲ್ಲಿ ಅಂಗಾಂಗ ದಾನದ ಬಗ್ಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಅಧ್ಯಕ್ಷತೆಯನ್ನು ಜೆಸಿಐ ಅಧ್ಯಕ್ಷರಾದ ಸುಪ್ರಿತ್ ಕಾರಬೈಲ್ ವಹಿಸಿದ್ದರು.

ಡಾ.ರಾಮಚರಣ ಅಡ್ಯಂತಾಯ ಹಾಗೂ ಪ್ರಾರ್ಥನ ನಾಗೇಶ್ ಅವರು ಅಂಗಾಂಗ ದಾನದ ಕುರಿತು ಯಾರಿಗೆ ಯಾವ ರೀತಿಯಲ್ಲಿ ಸಹಾಯವಾಗುತ್ತದೆ,ಅದರಿಂದ ಆಗುವ ಉಪಯೋಗಗಳು,ಅದರಿಂದ ಆಗುವ ಜೀವದಾನದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಸಂದೇಶ್,ವೆಂಕಟೇಶ್ ಕೆ.ಹೆಚ್,ಜೆ.ಸಿ.ಐ ಕಾರ್ಯದರ್ಶಿ ದೀಕ್ಷಿತ್ ಕಣಚೂರು,ಲೇಡಿ ಜೇಸಿ ಕಾರ್ಯದರ್ಶಿ ಶೃತಿ ದೀಕ್ಷಿತ್ ಹಾಗೂ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *