ತರುವೆ ಗ್ರಾಮದ ನರ್ಸಿಂಗ್ ವಿದ್ಯಾರ್ಥಿ ನಾಪತ್ತೆ…
1 min read
ತರುವೆ ಗ್ರಾಮದ ನರ್ಸಿಂಗ್ ವಿದ್ಯಾರ್ಥಿ ನಾಪತ್ತೆ
ತಾಲ್ಲೂಕಿನ ಮೂಡಿಗೆರೆ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಚಿಕ್ಕಮಗಳೂರಿನಲ್ಲಿ ನಾಪತ್ತೆ ಯಾಗಿದ್ದು, ಕುಟುಂಬದವರು ಆತಂಕಗೊಂಡಿದ್ದಾರೆ.
ತರುವೆ ಗ್ರಾಮದ ಶೇಖರ್ ಅವರ ಪುತ್ರ ರಕ್ಷಿತ ಟಿ.ಎಸ್.(19) ನಾಪತ್ತೆಯಾದ ವಿದ್ಯಾರ್ಥಿ. ಚಿಕ್ಕಮಗಳೂರಿನ ಸಿಐಎಂಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎಸ್ಸಿ. ನರ್ಸಿಂಗ್ (ಎಎಚ್ಎಸ್) ವ್ಯಾಸಂಗ ಮಾಡುತ್ತಿದ್ದ ಈತ, ಹೌಸಿಂಗ್ ಬೋರ್ಡ್ನ ಸರ್ಕಾರಿ ವೃತ್ತಿಪರ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ ವಾಸವಾಗಿದ್ದನು.
ನ.7.ರಂದು ಮಧ್ಯಾಹ್ನ 12.30.ರ ಸುಮಾರಿಗೆ ಹಾಸ್ಟೆಲ್ನಿಂದ ಹೊರಗೆ ಹೋದ ರಕ್ಷಿತ ಮತ್ತೆ ವಾಪಸಾಗಿಲ್ಲ. ಹಾಸ್ಟೆಲ್ನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆತ ಹೊರಗೆ ಹೋಗಿರುವುದು ದೃಢಪಟ್ಟಿದೆ. ಅದೇ ದಿನ ರಾತ್ರಿ 9 ಗಂಟೆಗೆ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿರುವುದಾಗಿ ಸ್ನೇಹಿತರಿಗೆ ತಿಳಿಸಿದ್ದ ಎನ್ನಲಾಗಿದೆ. ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕುಟುಂಬದವರ ಸಂಪರ್ಕಕ್ಕೂ ಸಿಕ್ಕಿಲ್ಲ. ಸಂಬಂಧಿಕರು, ಸ್ನೇಹಿತರು ಹಾಗೂ ಹಾಸನದ ಹಿಮ್ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ಕುರಿತು ರಕ್ಷಿತನ ಸಹೋದರ ರಂಜಿತ್ ಟಿ.ಎಸ್. ಅವರು ನ.11.ರಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಚಹರೆ: ಸುಮಾರು 5.4 ಅಡಿ ಎತ್ತರ, ನೀಳಕಾಯದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾನೆ. ನಾಪತ್ತೆಯಾದಾಗ ಕಪ್ಪು ಪ್ಯಾಂಟ್, ಬೂದು ಬಣ್ಣದ ಜಾಕೆಟ್ ಹಾಗೂ ಕಪ್ಪು ಬಣ್ಣದ ಬ್ಯಾಗ್ ಧರಿಸಿದ್ದನು. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ’ 9480805145.@ತಿಳಿಸುವಂತೆ ಮನವಿ ಮಾಡಲಾಗಿದೆ.

