ಕೆಳಗೂರಿನಲ್ಲಿ ಜಾವಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಂಪನ್ನ….
1 min read
ಕೆಳಗೂರಿನಲ್ಲಿ ಜಾವಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಂಪನ್ನ
ಮೂಡಿಗೆರೆ ತಾ: ಕೆಳಗೂರಿನ ಸ.ಹಿ.ಪ್ರಾ ಶಾಲೆಯಲ್ಲಿ
ಜಾವಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಉಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಾವಳಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರದೀಪ್ ಎಂ.ಪಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಾವಳಿ ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಕೆ. ಪ್ರಾಸ್ತಾವಿಕ ನುಡಿಯನ್ನು ಮಾತನಾಡಿದರು
ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರಾದ ಸುರೇಶ್, ನಂದಿನಿ, ಮಮತ, ಸುನಂದ, ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಶಿಕ್ಷಕರಾದ ರವಿಕುಮಾರ್, ಸವಿತಾ ವೀರನಗೌಡ. ಶಂಕರ್, ನಿಕಿತಾ ಭಂಡಾರಿ, ಅಡುಗೆ ಸಿಬ್ಬಂದಿ ತಾರಾ, ವೀಣಾ, ಹಳೆಯ ವಿದ್ಯಾರ್ಥಿಗಳು, ಮಕ್ಕಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನು ಗೌರವಿಸಲಾಯಿತು. ಜಾವಳಿ ಕ್ಲಸ್ಟರ್ನ ಒಟ್ಟು 10 ಶಾಲೆಗಳ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜಪ್ಪ ಹೆಚ್, ಉಪಾಧ್ಯಕ್ಷೆ ನಿರಂಜನ, ಸಿ.ಆರ್.ಪಿ ಗಳಾದ ವೆಂಕಟೇಶಮೂರ್ತಿ, ಗಣೇಶ್, ಸೋಮಶೇಖರ್, ಸಾವಿತ್ರಿ, ದಾನಿಗಳಾದ ನಾಗೇಶ್ ಸಂಪ್ಲಿ, ಪ್ರವೀಣ್ ಪೂಜಿತ, ಸಂದೀಪ್, ಹಳೆಯ ವಿದ್ಯಾರ್ಥಿ ಪೆರಿಯಸ್ವಾಮಿ, ಅತಿಥಿಗಳಾದ ಪರೀಕ್ಷಿತ್ ಜಾವಳಿ, ಪೂರ್ಣೇಶ್ ಮಲೆಮನೆ, ಸಚಿನ್ ಮರ್ಕಲ್, ಜಾವಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮನೋಹರ್, ಮುಖ್ಯ ಶಿಕ್ಷಕ ಶಂಕರ್ ಮುಂತಾದವರು ಇದರು.

