लाइव कैलेंडर

October 2026
M T W T F S S
 1234
567891011
12131415161718
19202122232425
262728293031  
20/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಹುಜನ ಸಮಾಜ ಪಾರ್ಟಿ ತರೀಕೆರೆ ವಿಧಾನಸಭಾ ಕ್ಷೇತ್ರ …

1 min read

🐘ಬಹುಜನ ಸಮಾಜ ಪಾರ್ಟಿ ತರೀಕೆರೆ
ವಿಧಾನಸಭಾ ಕ್ಷೇತ್ರ 🐘
🐘🐘🐘
ಬಂಧುಗಳೇ 🌷

ಇವತ್ತು ತರೀಕೆರೆ ವಿಧಾನ ಸಭಾ ಕ್ಷೇತ್ರ ಸಮಿತಿಯ ಸಭೆ ನಡೆಯಿತು.ಈ ಸಭೆಯ ಅಧ್ಯಕ್ಷತೆಯನ್ನು ಎಸ್ ಆನಂದ್ ರವರು ವಹಿಸಿದ್ದರು.ಈ ಸಭೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಟಿ ರಾಧಾಕೃಷ್ಣ. ರಾಜ್ಯ ಕಾರ್ಯದರ್ಶಿ.ಕೆ,ಬಿ ಸುಧಾ. ಜಿಲ್ಲಾ ಉಪಾಧ್ಯಕ್ಷರು ಆದ ಕೆ.ಎಸ್. ಮಂಜುಳಾ.ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಪಿ.ಕೆ ಮಂಜುನಾಥ. ಮುಖ್ಯ ಅತಿಯಾಗಿ ಭಾಗವಹಿಸಿದ್ದರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ.ಕೆ.ಟಿ ರಾಧಾಕೃಷ್ಣರವರು ಈ ಕ್ಷೇತ್ರದಲ್ಲಿ ಬಹುಜನ ಚಳುವಳಿಯನ್ನು ಗಟ್ಟಿ ಗೊಳಿಸಿ. ಬಾ.ಬಾ ಸಾಹೇಬ್ ಅಂಬೇಡ್ಕರ್ ಹಾಕಿ ಕೊಟ್ಟ ಮಾರ್ಗದಲ್ಲಿ ಶೋಷಿತ ಸಮಾಜವನ್ನ ತರೀಕೆರೆಯಲ್ಲಿ ರಾಜಕೀಯ ಶಕ್ತಿಯಾಗಿ ಮಾಡಬೇಕಾದ ಕರ್ತವ್ಯಾ ನಮ್ಮದಿದೆ.ಇಂದು ಓಟನ್ನ ಮಾರಾಟದ ವಸ್ತು ವಾಗಿ ಮನುವಾದಿ ಪಕ್ಷಗಳು ಮಾಡಿದ್ದಾರೆ.ಅದೇ ಸಮಾಜವನ್ನ ನಾವು ಸಂಘಟಿಸಿ ಆಳುವ ಸಮಾಜವನ್ನಾಗಿ ಮಾಡಿ ಈ ತಾಲೂಕಿನಲ್ಲಿ ಮುಂಬರುವ ತಾಲೋಕು /ಜಿಲ್ಲಾ ಪಂಚಾಯಿತಿ, ಚುನಾವಣೆಯಲ್ಲಿ. ಬಹುಜನ ಸಮಾಜ ಪಕ್ಷದಿಂದ ಅಭ್ಯರ್ಥಿಗಳನ್ನು ಹಾಕಿ ಗೆಲ್ಲಿಸಲು ತಾವೆಲ್ಲರೂ ಶ್ರಮ ಪಡಬೇಕು ಎಂದು ಹೇಳಿದರು.
ಕೆ.ಬಿ ಸುಧಾ, ರವರು ಮಾತನಾಡುತ ಬಹುಜನ ಸಮಾಜ ಪಾರ್ಟಿ ಇವತ್ತು sc ಗಳ ಪಕ್ಷ ಎಂದು ಮನುವಾದಿ ಪಕ್ಷಗಳು ಹೇಳುತಿವೆ. ಆದರೆ ಇಲ್ಲಿ ಅಧಿಕಾರ ಹೀನ ಸಮಾಜ ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರಿಗೂ ಇಲ್ಲಿ ನಾಯಕತ್ವ ಕೊಟ್ಟು ನಮ್ಮಂಥ ಹಿಂದುಳಿದ ಸಮಾಜ ಮಹಿಳೆ ನಾಯಕರಗಳು ಬೆಳೆಯಲು ಅವಕಾಶ ಕೊಟ್ಟಿದೆ ಮತ್ತು ಸ್ವಾಭಿಮಾನ ಆತ್ಮ ಗೌರವ ತಂದು ಕೊಟ್ಟಿದೆ ಹಾಗೇನೇ ಮನ್ಯಾವಾರು ಕಾನ್ಷಿರಾಂ ರವರ ತ್ಯಾಗದಿಂದ ಇಂದು ನಮ್ಮ ಪಕ್ಷ 3ನೇ ರಾಷ್ಟ್ರೀಯ ಪಕ್ಷ ವಾಗಿದೇ ಈ ಪಕ್ಷದಲ್ಲಿ sc /st /obc ಹಾಗು ಧಾರ್ಮಿಕ ಅಲ್ಪಸಂಖ್ಯಾತರನ್ನ ಒಳಗೊಂಡು ಇದು ಬಹುಜನ ಸಮಾಜ ಒಟ್ಟಿಗೆ ಸೇರಿಸುವುದರಿಂದ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸ ಬಹುದು ಎಂದರು.
ಪಿ.ಕೆ.ಮಂಜುನಾಥ,ರವರು
ಹೊಸದಾಗಿ ಆಯ್ಕೆಯಾದ ವಿಧಾನ ಸಭಾ ಕ್ಷೆತ್ರ ಸಮಿತಿ
ಪದಾಧಿಕಾರಿಗಳನ್ನ ಕಾರ್ಯವೈಖರಿ ಹೇಗೆ ಇರಬೇಕು. ಮಹಾತ್ಮಾ ಜ್ಯೋತಿಭಾ ಪುಲೆ,ಶಾಹು ಮಹಾರಾಜ್, ನಾರಾಯಣ ಗುರು, ಪೆರಿಯಾರ್, ನಾಲ್ವಡಿ ಕೃಷ್ಣ ರಾಜ ಒಡೆಯರು.ಬಾ ಬಾ ಸಾಹೇಬ್ ಅಂಬೇಡ್ಕರ್ ಮುಂತಾದ ಮಹನೀಯರು ಹೋರಾಟದ ಆದಿಯಲ್ಲಿ ಕಾನ್ಷಿರಾಂ ರವರ ಬಹುಜನ ಸಮಾಜ ಪಕ್ಷದಲ್ಲಿ ತೊಡಗಿಸಿ ಕೊಂಡು ಮುಂಬರುವ ಚುನಾವಣೆಯಲ್ಲಿ ತಾಲೋಕಿನಿಂದಲೇ ಗೆಲುವು ಸಾದಿಸಲು ನೀವೆಲ್ಲರೂ ಕಾರ್ಯ ಪ್ರವೃತ್ತರಾಗ ಬೇಕೆಂದರು. ಕೆ ಎಸ್ ಮಂಜುಳಾ ರವರು ನೂತನ ಪದಾಧಿಕಾರಿಗಳಿಗೆ ಪಕ್ಷದ ನೀತಿ ನಿಯಮಗಳ ವಿಚಾರವನ್ನ ತಿಳಿಸಿದರು.
ನೂತನವಾಗಿ ತರೀಕೆರೆ ವಿಧಾನ ಸಭಾ ಕ್ಷೇತ್ರವನ್ನು ರಚಿಸಲಾಯಿತು
ವಿಧಾನ ಸಭಾ ಕ್ಷೇತ್ರದ ಉಸ್ತುವಾರಿಗಳಾಗಿ
1)ಕೆ ಟಿ ರಮೇಶ್ 2)ಪದ್ಮಮ್ಮ

ಅಧ್ಯಕ್ಷರು -ಎಸ್ ಆನಂದ್

ಉಪಾಧ್ಯಕ್ಷರು :-1)ಶಿವುಕುಮಾರ್ 2)ಗಂಗಮ್ಮ 3)ಲೋಕೇಶ್

ಪ್ರಧಾನ ಕಾರ್ಯದರ್ಶಿ :-ಕುಮರ್

ಕಚೇರಿ ಕಾರ್ಯದರ್ಶಿ :-ತಿಮ್ಮಶ್ ಲಕ್ಕವಳ್ಳಿ
ಖಜಾಂಚಿ :-ಅಲ್ತಾಪ್

Bvf 1)ಆದರ್ಶ್ 2)ವಿನೋದ್ ರಾಜ್
ನೇಮಕ ಮಾಡಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷರಾದ ಎಸ್, ಆನಂದ್,ರವರು ಮಾತನಾಡುತ್ತಾ ಮುಂಬರುವ ಚುನಾವಣೆಯಲ್ಲೂ ಇಡೀ ಕ್ಷೇತ್ರದಲ್ಲಿ ಎಲ್ಲ ತಾಲೋಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಅಭ್ಯರ್ಥಿಗಳನ್ನ ಹಾಕಿ ಸಮ ಸಮಾಜದ ವಿರೋಧಿಯಾದ ಬಿಜೆಪಿ,ಕಾಂಗ್ರೆಸ್, ಜೆಡಿಎಸ್, ಮನುವಾದಿ ಪಕ್ಷಗಳನ್ನುಹಿಂದಿಕ್ಕಿ ನಮ್ಮ ಕ್ಷೇತ್ರದಲ್ಲಿ ಅಭ್ಯರ್ಥಿ ಗಳನ್ನ ಗೆಲ್ಲಿಸಲು ಶ್ರಮ ಹಾಕುತ್ತೆವೆ ಎಂದರು. ಸಭೆಯಲ್ಲಿ ಕುಮಾರ್. ಬಸವರಾಜ್. ರಘು.ಲೋಕೇಶ್. ಇನ್ನು ಮುಂತಾದವರು ಇದ್ದರು ಕುಮಾರ್ ಸ್ವಾಗತಿಸಿದರು
ರಮೇಶ್ ಕೆ ಟಿ ವಂದಿಸಿದರು
🐘🐘🐘🐘🐘
ಜೈಭೀಮ್….. ಜೈ ಭಾರತ್

About Author

More Stories

Leave a Reply

Your email address will not be published. Required fields are marked *

You may have missed