ಅ.25 ರಂದು ಮ್ಯಾರಥಾನ್-ಸೈಕ್ಲಿಂಗ್. ಕ್ರೀಡಾಕೂಟ ನಡುವೆ ಓಟ ಚಿಕ್ಕಮಗಳೂರು:…..
1 min read
ಅ.25 ರಂದು ಮ್ಯಾರಥಾನ್-ಸೈಕ್ಲಿಂಗ್.
ಕ್ರೀಡಾಕೂಟ ನಡುವೆ ಓಟ ಚಿಕ್ಕಮಗಳೂರು:



ಕಾಫಿನಾಡಿನ ಪ್ರಕೃತಿ ಸೌಂದರ್ಯದ ಮತ್ತು ಸೈಕ್ಲಿಂಗ್ ಕ್ರೀಡೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ವತಿಯಿಂದ ಅ.25ರಂದು ಮೂಡಿಗೆರೆಯ ಕಾಫಿ ಕೋರ್ಟ್ನಲ್ಲಿ ಮುದ್ರೆಮನೆ ಕಾಫ಼ಿ ಮತ್ತು ಸೈಸಸ್.. ಚಿಕ್ಕಮಗಳೂರು ವೈಲ್ಡರ್ಸ್ 2026 ಮ್ಯಾರಥಾನ್ ಮತ್ತು ಸೈಕ್ಲಿಂಗ್ ಕ್ರೀಡಾಕೂಟ ಆಯೋಜಿಸಲಾಗಿದೆ. ಈಗಾಗಲೇ 1,200ಕ್ಕೂ ಹೆಚ್ಚು ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದು, ಕ್ರೀಡಾಕೂಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕ್ಲಬ್ಬಿನ ಕಾರ್ಯದರ್ಶಿ ಡಾ. ಕೌಶಿಕ್ ತಿಳಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡೆ, ಪ್ರಕೃತಿ ಮತ್ತು ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದರ ಜತೆಗೆ, ಮಲೆನಾಡಿನ ನೈಸರ್ಗಿಕ ಸೌಂದರ್ಯ ಮತ್ತು ಕಾಫಿ ಸಂಸ್ಕೃತಿಯನ್ನು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದರು.
ವರ್ಷದ ಕ್ರೀಡಾಕೂಟದ ಪ್ರಮುಖ ವಿಶೇಷವೆಂದರೆ ಮ್ಯಾರಥಾನ್ ಮಾರ್ಗಕ್ಕೆ ಅಸೋಸಿಯೇಷನ್ ಆಫ್ ಇಂಟರ್ ನ್ಯಾಷನಲ್ ಮ್ಯಾರಥಾನ್ಸ್ ಅಂಡ್ ಡಿಸ್ಟೆನ್ಸ್ ರೇಸಸ್ ಸಂಸ್ಥೆಯ ಪ್ರಮಾಣೀಕರಣ ದೊರೆತಿರುವುದು. ಈ ಮಾನ್ಯತೆಯು ಮಾರ್ಗದ ಅಳತೆ ಮತ್ತು ಸ್ಪರ್ಧೆಯ ಗುಣಮಟ್ಟಕ್ಕೆ ಮಹತ್ವದ
ಸೇರ್ಪಡೆಯಾಗಲಿದೆ. ಪ್ರಮಾಣೀಕರಣಕ್ಕೆ (ITT) ಒಳಪಟ್ಟಿರುವ ನಿರ್ದಿಷ್ಟ ಮಾರ್ಗ ಹಾಗೂ ದೂರದ ವಿವರಗಳನ್ನು ಅಧಿಕೃತವಾಗಿ ದೃಢೀಕರಿಸಿ ಪ್ರಕಟಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಮ್ಯಾರಥಾನ್ನಲ್ಲಿ 5 ಕಿ.ಮೀ., 10 ಕಿ.ಮೀ., 21 ಕಿ.ಮೀ. ಮತ್ತು 42 ಕಿ.ಮೀ. ವಿಭಾಗಗಳನ್ನು ಆಯೋಜಿಸಲಾಗಿದೆ. ಆರಂಭಿಕ ಓಟಗಾರರಿಂದ ಹಿಡಿದು ಅನುಭವಿ ಮ್ಯಾರಥಾನ್ ಸ್ಪರ್ಧಿಗಳವರೆಗೆ ಎಲ್ಲರಿಗೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ನೋಂದಾಯಿಸಿಕೊಂಡಿರುವ ಹಿನ್ನೆಲೆಯಲ್ಲಿ 5ಏ ಮತ್ತು 10ಏ ವಿಭಾಗಗಳ ನೋಂದಣಿ ಮುಕ್ತಾಯಗೊಂಡಿದೆ. 21ಏ ಹಾಫ್ ಮ್ಯಾರಥಾನ್ ಹಾಗೂ 42ಏ ಪೂರ್ಣ ಮ್ಯಾರಥಾನ್ ವಿಭಾಗಗಳಿಗೆ ನೋಂದಣಿ ಮುಂದುವರಿದಿದೆ. ಆಸಕ್ತರು 8073052332 ಸಂಖ್ಯೆಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯ ಬಹುದು.
ಮ್ಯಾರಥಾನ್ನೊಂದಿಗೆ ಸೈಕ್ಲಿಂಗ್ ಸ್ಪರ್ಧೆಗಳಿಗೂ ಆದ್ಯತೆ ನೀಡಲಾಗಿದೆ. ಇಂಡಿವಿಜುವಲ್ ಟೈಮ್ ಟ್ರಯಲ್ ವಿಭಾಗದಲ್ಲಿ ನಿಗದಿತ ಮಾರ್ಗವನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯದ ಆಧಾರದಲ್ಲಿ ಸೈಕ್ಲಿಸ್ಟ್ಗಳ ಸಾಮರ್ಥವನ್ನು ರೈಡ್ ಫನ್ ಅಳೆಯಲಾಗುತ್ತದೆ. ವಿಭಾಗದಲ್ಲಿ ಸ್ಪರ್ಧಾತ್ಮಕ ಒತ್ತಡವಿಲ್ಲದೆ ಸೈಕ್ಲಿಂಗ್ನ ಆನಂದವನ್ನು ಅನುಭವಿಸುತ್ತಾ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಅವಕಾಶವಿದೆ.ಕ್ರೀಡಾಕೂಟವು ಕೇವಲ ಸ್ಪರ್ಧೆಗೆ ಸೀಮಿತವಾಗದೆ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೂ ಸಹಕಾರಿಯಾಗಲಿದೆ. ಸ್ಪರ್ಧಿಗಳು ಮತ್ತು ಅವರ ಕುಟುಂಬ ಸದಸ್ಯರು ಆಗಮಿಸುವುದರಿಂದ ಸ್ಥಳೀಯ ಹೋಂಸ್ಟೇಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಸಾರಿಗೆ ಸೇವೆಗಳು ಮತ್ತು ಇತರ ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.
ಸುದ್ದಿಗೋಷ್ಠಿಯಲ್ಲಿ ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ನ ಅಧ್ಯಕ್ಷ ಸಂಜಿತ್, ಉಪಾಧ್ಯಕ್ಷ ಜಾವೀದ್, ಖಜಾಂಚಿ ನಂದನ್, ಸುರೇಂದ್ರ, ಸಂದೇಶ್, ಹಾರದವಳ್ಳಿ ಪ್ರಕಾಶ್ ಉಪಸ್ಥಿತರಿದ್ದರು.
ಸಂಪರ್ಕಿಸಿ…8073052332

