लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಟೀಕೆ”ಗಳಿಗೆ ತಲೆಬಾಗಲಿಲ್ಲ ಧರ್ಮದ ಹೆಸರಿನಲ್ಲಿ ಗಡಿ ಕಟ್ಟಿಕೊಳ್ಳಲಿಲ್ಲ ಸೌಹಾರ್ದತೆಯ ಸೇತುವೆಯಾದ “ಜುಬೇದ”…

1 min read

” ಟೀಕೆ”ಗಳಿಗೆ ತಲೆಬಾಗಲಿಲ್ಲ ಧರ್ಮದ ಹೆಸರಿನಲ್ಲಿ ಗಡಿ ಕಟ್ಟಿಕೊಳ್ಳಲಿಲ್ಲ
ಸೌಹಾರ್ದತೆಯ ಸೇತುವೆಯಾದ “ಜುಬೇದ”
ಭಾವೈಕ್ಯತೆ ಮತ್ತು ಮಾನವೀಯತೆಯ ಬದುಕಿಗೆ ಮಾದರಿಯಾದ ಮಹಿಳೆ
“ಮುಸ್ಲಿಂ” ಕುಟುಂಬದಲ್ಲಿ ಹುಟ್ಟಿದರೂ ಧರ್ಮದ ಗಡಿಗಳನ್ನು ಮೀರಿ ಮಾನವೀಯತೆ, ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂದೇಶವನ್ನು ಸಾರುತ್ತಾ ಸಮಾಜದಲ್ಲಿ ಮುನ್ನಡೆಯುತ್ತಿರುವ ‘ಜುಬೇದ” ಅವರು, ನರಸಿಂಹರಾಜಪುರ ಪಟ್ಟಣದ “ಹೆಮ್ಮೆ”ಯ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ
ಸಾಮಾಜಿಕ ಜೀವನದಲ್ಲಿ ಮುನ್ನಡೆಯುವ ಸಂದರ್ಭದಲ್ಲಿ ಅದೆಷ್ಟೋ ನೋವುಗಳನ್ನು ಕಂಡಿದ್ದಾರೆ ಅದೆಷ್ಟೋ ಟೀಕೆ,ಟಿಪ್ಪಣಿಗಳು, ಕಂಡಿದ್ದಾರೆ ಆದರೂ ಸವಾಲುಗಳನ್ನು ಮೀರಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ “ಜುಬೇದ” ಅವರು ಯಾವುದಕ್ಕೂ “ಎದೆ”ಗುಂದದೆ, “ಕುಗ್ಗ”ಲಿಲ್ಲ “ಕರಗಿ” ಹೋಗಲಿಲ್ಲ ಎಲ್ಲರನ್ನೂ ಒಂದಾಗಿ ಕರೆದೊಯ್ಯುವ ಮನೋಭಾವದೊಂದಿಗೆ ತಮ್ಮ ಸಾಮಾಜಿಕ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅವರ ಬದುಕಿನ ಧ್ಯೇಯವೇ “ಸರ್ವೇ ಜನಾಃ ಸುಖಿನೋ ಭವಂತು”,ಎಲ್ಲರೂ ಸುಖವಾಗಿರಲಿ ಎಂಬ ವಿಶಾಲ ಮಾನವೀಯ ಸಂದೇಶ.
ನರಸಿಂಹರಾಜಪುರ ಪಟ್ಟಣದ ರಾಜೀವ್ ನಗರದಲ್ಲಿ ಕಳೆದ ಸುಮಾರು 17 ವರ್ಷಗಳಿಂದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದು ಅವರ ಸೌಹಾರ್ದ ಮನೋಭಾವಕ್ಕೆ ಸಾಕ್ಷಿಯಾಗಿದೆ. ಪ್ರತಿಯೊಂದುಕ್ಕೂ ಧರ್ಮದ ಅಮಲು ನಲ್ಲಿ ನೋಡುವ ಕೆಲವು ‘ಮತಾಂಧ” ಶಕ್ತಿಗಳು ಹೊಟ್ಟೆಯಲ್ಲಿ
“ಉರಿ”ಯನ್ನು ತಾಳಲಾರದೆ ಸಂಕಷ್ಟದಲ್ಲಿದ್ದಾರೆ ಧರ್ಮ ಬೇರೆ, ನಂಬಿಕೆಗಳು ಬೇರೆ ಎಂಬ ಭೇದವಿಲ್ಲದೆ ಎಲ್ಲರೊಂದಿಗೆ ಬೆರೆತು ಹಬ್ಬ,ಹರಿದಿನಗಳಲ್ಲಿ ಭಾಗವಹಿಸುವ ಅವರ ನಡೆ ಸಮಾಜಕ್ಕೆ ಉತ್ತಮ “ಸಂದೇಶ” ನೀಡುತ್ತಿದೆ.
ಅದೇ ರೀತಿ ನಾಗರಕಟ್ಟೆಯ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡು ಕಾರ್ಯನಿರ್ವಹಿಸಿರುವುದು ಕೂಡ ಅವರ ಭಾವೈಕ್ಯತೆಯ ಮನೋಭಾವವನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ. ಇಂತಹ ನಡೆಗಳು ಸಮಾಜದಲ್ಲಿ ಪರಸ್ಪರ ಗೌರವ, ವಿಶ್ವಾಸ ಮತ್ತು ಸಹಬಾಳ್ವೆಯನ್ನು “ಗಟ್ಟಿ”ಗೊಳಿಸುವ ಸೇತುವೆಗಳಾಗುತ್ತವೆ.
“ಜುಬೇದ” ಅವರು ಕೇವಲ ಸಾಮಾಜಿಕ ಕ್ಷೇತ್ರದಲ್ಲಷ್ಟೇ ಅಲ್ಲ, ಸ್ಥಳೀಯ ಆಡಳಿತದಲ್ಲಿಯೂ ತಮ್ಮದೇ ಆದ “ಛಾಪು” ಮೂಡಿಸಿದ್ದಾರೆ.
ಎನ್,ಆರ್, ಪುರ ಪಟ್ಟಣ ಪಂಚಾಯಿತಿ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ ಅವಧಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.
ಒಬ್ಬ ಮಹಿಳೆ, ಅದರಲ್ಲೂ “ಅಲ್ಪಸಂಖ್ಯಾತ” ಸಮುದಾಯದ ಕುಟುಂಬದಿಂದ ಬಂದವರು ಎಂಬ ಕಾರಣಕ್ಕೆ ಎದುರಾದ “ಕಠಿಣ” ಸವಾಲುಗಳನ್ನು ಮೆಟ್ಟಿನಿಂತು, ಎಲ್ಲ ಸಮುದಾಯಗಳೊಂದಿಗೆ ಸ್ನೇಹ,ಸೌಹಾರ್ದತೆಯಿಂದ ‘ಬೆರೆತು” ಜನಸೇವೆಯ ಹಾದಿಯಲ್ಲಿ ಸಾಗುತ್ತಿರುವ “ಜುಬೇದ” ಅವರ ನಡೆ ನಿಜಕ್ಕೂ ಪ್ರಶಂಸನೀಯ.
ಧರ್ಮಕ್ಕಿಂತ ಮಾನವೀಯತೆ ದೊಡ್ಡದು, ಭಿನ್ನತೆಗಿಂತ ಭಾವೈಕ್ಯತೆ ದೊಡ್ಡದು, ವೈಮನಸ್ಸಿಗಿಂತ ಸೌಹಾರ್ದತೆ ದೊಡ್ಡದು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸುತ್ತಿರುವ “ಜುಬೇದ” ಅವರು, ನರಸಿಂಹರಾಜಪುರದ ಸಾಮಾಜಿಕ ಬದುಕಿನಲ್ಲಿ ಭಾವೈಕ್ಯತೆಯ ಪ್ರತೀಕವಾಗಿ ಕಾಣಿಸಿಕೊಳ್ಳುತ್ತಾರೆ.
ಇಂತಹ ವ್ಯಕ್ತಿತ್ವಗಳು ಸಮಾಜಕ್ಕೆ ಅಗತ್ಯ. ಒಬ್ಬರ ಧರ್ಮವನ್ನು ಮತ್ತೊಬ್ಬರು ಗೌರವಿಸುವ, ಎಲ್ಲರೂ ಒಗ್ಗಟ್ಟಿನಿಂದ ಬದುಕುವ, ಪರಸ್ಪರ ಸಹಕಾರದಿಂದ ಮುನ್ನಡೆಯುವ ಸಮಾಜ ನಿರ್ಮಾಣಕ್ಕೆ “ಜುಬೇದ” ಅವರಂತಹವರ ಕೊಡುಗೆ ಸದಾ ಸ್ಮರಣೀಯ.

About Author

Leave a Reply

Your email address will not be published. Required fields are marked *

You may have missed