“ಸಾಮಾನ್ಯ ಪುರುಷ ಅಭ್ಯರ್ಥಿಗೂ ಮೀಸಲಾತಿ ಕಲ್ಪಿಸಿ.”
1 min read
ಸಾಮಾನ್ಯ ಪುರುಷ ಅಭ್ಯರ್ಥಿಗೂ ಸತ್ತಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಚಗೊಂಡನ ಹಳ್ಳಿ ವಾರ್ಡ್ ಗೆ ಮೀಸಲಾತಿ ಕಲ್ಪಿಸಬೇಕು ಎಂದು ಮುಖಂಡರು ಹಾಗೂ ಹೋರಾಟಗಾರ ಅಹಮದ್ ಅವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು ಸತ್ತಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಂದಿ ವಾರ್ಡ್ ಗೆ ಈ ಮುಂದಿನ ಚುನಾವಣೆ ಗೆ ಮೀಸಲಾತಿ ಪ್ರಕಟಿಸಿದ್ದು ಎಸ್ಸಿ ಪುರುಷ ಅಭ್ಯರ್ಥಿ,ಎಸ್ಸಿ ಮಹಿಳೆ,ಎಸ್ಟಿ ಮಹಿಳೆ ಹಾಗೂ ಸಾಮಾನ್ಯ ಮಹಿಳೆ ಮೀಸಲಾತಿ ನೀಡಿದ್ದು ಬಹುತೇಕ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ.

ಸತ್ತಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಹಳಷ್ಟು ಸಮಸ್ಯೆಗಳಿದ್ದು ಇವುಗಳನ್ನು ಪರಿಹರಿಸಲು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಜೊತೆಗೆ ಶಾಸಕರ ಕಛೇರಿ ಹಾಗೂ ಇತರೆ ಇಲಾಖೆಗಳಿಗೆ ಓಡಾಟ ಮಾಡಲು ಮಹಿಳೆಯರಿಗೆ ಕಷ್ಟ ವಾಗಬಹುದು, ಜೊತೆಗೆ ರಾತ್ರಿ ಹಗಲು ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗುತ್ತದೆ. ಇವರ ಜೊತೆಗೆ ಸಾಮಾನ್ಯ ಪುರುಷ ಅಭ್ಯರ್ಥಿಗೂ ಅವಕಾಶ ಕಲ್ಪಿಸಿದರೆ ಸಮಾನತೆ ಕಲ್ಪಿಸಿದಂತಾಗುತ್ತದೆ.ಒಟ್ಟಾಗಿ ಗ್ರಾಮದ ಅಭಿವೃದ್ಧಿ ಗೆ ಶ್ರಮಿಸಲು ಅನುಕೂಲ ವಾಗುತ್ತದೆ. ಆದ್ದರಿಂದ ಮಾಚಗೊಂಡನಹಳ್ಳಿ ವಾರ್ಡ್ ನ ಮೀಸಲಾತಿಯಲ್ಲಿ ಸಾಮಾನ್ಯ ಪುರುಷ ಅಭ್ಯರ್ಥಿಗೂ ಮೀಸಲಾತಿ ಕಲ್ಪಿಸಿಕೊಡಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಈ ವೇಳೆ,ಉಮೇಶ,ಗೋಪಾಲ,ವಿಶ್ವ,ರಾಮಚಂದ್ರ ಮತ್ತಿತರರು ಇದ್ದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

