लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ವಿದ್ಯುತ್ ಶಾಕ್ ಹೊಡೆದು ಬೃಹತ್ ಗಾತ್ರದ ಕಾಡಾನೆ ಸಾವು: ಸ್ಥಳೀಯರಲ್ಲಿ ಆತಂಕ…

1 min read

‎ವಿದ್ಯುತ್ ಶಾಕ್ ಹೊಡೆದು ಬೃಹತ್ ಗಾತ್ರದ ಕಾಡಾನೆ ಸಾವು: ಸ್ಥಳೀಯರಲ್ಲಿ ಆತಂಕ
ಮೂಡಿಗೆರೆ : ಕರೆಂಟ್ ಶಾಕ್ ನಿಂದ ಬೃಹತ್ ಗಾತ್ರದ ಕಾಡಾನೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲಿ ಸಂಭವಿಸಿದೆ.ಕುಂದೂರು ಬಟ್ಟರ ಗದ್ದೆಯಲ್ಲಿ ಈ ಘಟನೆ ಸಂಬವಿಸಿದೆ.
‎
‎ಕಾಡಲ್ಲಿ ದಂತ ಹೊಂದಿದ್ದ ಬೃಹತ್ ಗಾತ್ರದ ಗಂಡಾನೆ ಮೃತದೇಹ ಪತ್ತೆಯಾಗಿದ್ದು ಮೀಸಲು ಅರಣ್ಯದಲ್ಲಿ ವಿದ್ಯುತ್‌ ಹೇಗೆ ಬಂತು ಎಂಬ ಅನುಮಾನ ಈಗ ಎಲ್ಲರಲ್ಲೂ ಮೂಡಿದೆ.
‎
‎ಹಾಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದು ಕಾಡಾನೆ ಸತ್ತ ಜಾಗದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಆನೆ ಸಾವಿಗೆ ವಿದ್ಯುತ್ ಶಾಕ್ ಕಾರಣ ಎಂದು ಪ್ರಾಥಮಿಕ ಶಂಕೆ ವ್ಯಕ್ತಪಡಿಸಲಾಗಿದೆ.
‎ಸ್ಥಳದಲ್ಲಿ ಪಂಚನಾಮೆ ಹಾಗೂ ಮುಂದಿನ ತನಿಖೆ ಆರ೦ಭಿಸಿದ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಹೇಗೆ ಎಂದು ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ.ಬೃಹತ್ ಗಾತ್ರದ ಕಾಡಾನೆ ಸಾವಿನಿಂದ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
‎
‎ಕಾಡಾನೆ ಸಾವಿಗೆ ಕಾರಣವಾದ ವಿದ್ಯುತ್ ಬೇಲಿ ಅಕ್ರಮವಾಗಿ ಅಳವಡಿಸಲಾಗಿತ್ತೇ ಎಂಬುದರ ಕುರಿತೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
‎
‎ಅಕ್ರಮ ವಿದ್ಯುತ್ ಸಂಪರ್ಕ ಮತ್ತು ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇಂತಹ ದುರ್ಘಟನೆಗಳು ನಡೆಯುತ್ತಿದ್ದು, ಇದರಿಂದ ವನ್ಯಜೀವಿಗಳ ಜೀವಕ್ಕೆ ಸಂಚಕಾರ ಬರುತ್ತಿದೆ.

About Author

Leave a Reply

Your email address will not be published. Required fields are marked *

You may have missed