ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಸತ್ಯನಾರಾಯಣ ಮತ್ತು ಲಕ್ಷ್ಮಿ ಪೂಜೆ….
1 min read
ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಸತ್ಯನಾರಾಯಣ ಮತ್ತು ಲಕ್ಷ್ಮಿ ಪೂಜೆ
ಆಲ್ದೂರು: ಪಟ್ಟಣದ ಕೆಳ ಬಸ್ ನಿಲ್ದಾಣದ ಬಳಿ ಇರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ವಲಯ ಕಚೇರಿಯಲ್ಲಿ ಶುಕ್ರವಾರ ಸತ್ಯನಾರಾಯಣ ಮತ್ತು ಲಕ್ಷ್ಮಿ ಪೂಜೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮ ಅಭಿವೃದ್ಧಿ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಗ್ರಾಮ ಅಭಿವೃದ್ಧಿಯ ಯೋಜನೆಗಳನ್ನು ಸಾಕಾರಗೊಳಿಸಲು ಮತ್ತು ಸಂಘವನ್ನು ಬಲವರ್ಧನೆ ಮಾಡಿ, ಸದಸ್ಯರಿಗೆ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಲು ಪದಾಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಮೇಲ್ವಿಚಾರಕಿ ಭಾರತಿ ,ಸೇವಾ ಪ್ರತಿನಿಧಿಗಳಾದ ಮಾನಸ, ಜಯಶ್ರೀ,ಭಾಗ್ಯ,ಉಷಾ, ವಿಎಲ್ಇ ರಮ್ಯಾ, ವೀರಭದ್ರೇಶ್ವರ ಮುಕ್ತಿಧಾಮ ಸಮಿತಿಯ ಪದಾಧಿಕಾರಿ ನಾಗೇಶ್ ಗಾಳಿಗಂಡಿ, ಶೌರ್ಯ ಘಟಕದ ಸದಸ್ಯರಾದ ನಂದಕುಮಾರ್,ಇತರರು ಇದ್ದರು.

