ಆಲ್ದೂರು ವೀರಶೈವ ಲಿಂಗಾಯತ ಸಮಾಜದ ನೂತನ ಆಡಳಿತ ಮಂಡಳಿ ರಚನೆ..
1 min read
ಆಲ್ದೂರು ವೀರಶೈವ ಲಿಂಗಾಯತ ಸಮಾಜದ
ನೂತನ ಆಡಳಿತ ಮಂಡಳಿ ರಚನೆ..
ಆಲ್ದೂರು:ಮುಂದಿನ ಮೂರು ವರ್ಷದ ಅವಧಿಗೆ ಆಲ್ದೂರು ಹೋಬಳಿ ವೀರಶೈವ ಲಿಂಗಾಯತ ಸಮಾಜದ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ವೈ,ಎಂ, ತೀರ್ಥಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಯಲಗುಡಿಗೆ ಆಯ್ಕೆ ಯಾಗಿದ್ದಾರೆ.
ಬೇರುಗಂಡಿ ಸಮುದಾಯ ಭವನದಲ್ಲಿ ಗುರುವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ಮುಂದಿನ ಮೂರು ವರ್ಷದ ಅವಧಿಗೆ 21 ಜನರ ಆಡಳಿತ ಮಂಡಳಿ ರಚನೆಯಾಗಿದೆ.
ಕೆ ಎಸ್ ಮಹೇಶ್ ಗೌರವಾಧ್ಯಕ್ಷರಾಗಿ,
ಗಂಗಾಧರಯ್ಯ, ಬಿಎಸ್ ರಾಜೀವ್, ಚಂದ್ರ ಮೌಳಿ ಉಪಾಧ್ಯಕ್ಷರುಗಳಾಗಿ, ಇಸಿ, ಕುಮಾರ್ ಖಜಾಂಚಿ, ಹೆಚ್ ಸಿ, ವಸಂತ ಸಂಘಟನಾ ಕಾರ್ಯದರ್ಶಿ, ಬಿಕೆ, ಪುಟ್ಟಸ್ವಾಮಿ, ಎಂಆರ್, ದರ್ಮೇಶ್, ಪ್ರಶಾಂತ್,ಎ ಎಚ್ ಶಂಕರೇಗೌಡ, ಬಿಪಿ ಉಮೇಶ್, ಹೆಚ್ ಬಿ ಭಗತ್, ಸಿದ್ದಾರ್ಥ್ ಶಂಕರ್, ಚಂದ್ರಶೇಖರ್, ಬಿ ಆರ್, ಪ್ರಕಾಶ್, ಜಯಪ್ರಕಾಶ್, ರಾಜೇಶ್, ಕೆಎಚ್ ಶಿವಕುಮಾರ್, ರತನ್,ಇ,ವೈ, ನವೀನ್ ಹೊಸಮಠ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ
ಸಮಾಜದ ಸಂಘಟನೆಗೆ ಒತ್ತು ನೀಡುವುದರ ಜೊತೆಗೆ, ಸಮಾಜಮುಖಿ ಕಾರ್ಯ ಚಟುವಟಿಕೆಗಳು, ಸಮಾಜವು ಎಲ್ಲಾ ರಂಗದಲ್ಲಿ ಮುಂಚೂಣಿ ಹಾಗೂ ಪ್ರತಿಭಾನ್ವಿತರಿಗೆ ಅವಕಾಶ ನೀಡುವುದು, ಹಾಗೂ ಬಾಂಧವರು ಮತ್ತು ನಿರ್ದೇಶಕರನ್ನು ವಿಶ್ವಾಸಕ್ಕೆ ಪಡೆದು, ವಹಿಸಿಕೊಂಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಎಲ್ಲರ ಸಹಕಾರವನ್ನು ನೀಡಬೇಕೆಂದು ಅಧ್ಯಕ್ಷರು ಮತ್ತು ಕಾರ್ಯದರ್ಶಿ ವಿನಂತಿಸಿದರು.

