ಬೇಸಿಗೆ ಬೆಸುಗೆ ಶಿಬಿರದಲ್ಲಿ ಫೋಟೋಗ್ರಫಿ ಕಾರ್ಯಗಾರ….
1 min read
ಅವಿನ್ ಟಿವಿ ಸುದ್ದಿಜಾಲ ✍️:
ಬೇಸಿಗೆ ಬೆಸುಗೆ ಶಿಬಿರದಲ್ಲಿ ಫೋಟೋಗ್ರಫಿ ಕಾರ್ಯಗಾರ
ಆಲ್ದೂರು: ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಬೇಸಿಗೆ ಬೆಸುಗೆ ಶಿಬಿರದಲ್ಲಿ ಫೋಟೋಗ್ರಫಿ ಕುರಿತ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಂಶೂನ್ ನಹರ್ ಶುಭ ಹಾರೈಸಿದರು.
ಕ್ಯಾನನ್ ಕಂಪನಿ ವತಿಯಿಂದ ಭಾಗವಹಿಸಿದ್ದ ಬೆಂಗಳೂರು ಮೂಲದ ವನ್ಯಜೀವಿ ಛಾಯಾಗ್ರಹಕ ಮ್ಯಾಥ್ಯೂ ಫೋಟೋಗ್ರಾಫಿ ತೆಗೆಯುವಾಗ ಬಳಸಬೇಕಾದ ಪ್ರಾಥಮಿಕ ಸೂಚನೆಗಳು,ಫೋನ್ ಗಳಲ್ಲಿ ಫೋಟೋ ತೆಗೆಯುವ ವಿಧಾನ ಮತ್ತು ಅತಿ ಹೆಚ್ಚಿನ ತಾಂತ್ರಿಕತೆ ಹೊಂದಿರುವ ಕ್ಯಾಮರಗಳ ಮಾಹಿತಿ, ತಾಂತ್ರಿಕವಾಗಿ ಹೇಗೆ ಕ್ಯಾಮರಾ ಗಳಲ್ಲಿ ಇರುವಂತಹ ಸೆಟ್ಟಿಂಗ್ಸ್ ಗಳನ್ನು ಒಗ್ಗೂಡಿಸಿ ಗುಣಮಟ್ಟದ ಛಾಯಾಚಿತ್ರಗಳನ್ನು ತೆಗೆಯುವ ರೀತಿ ನೀತಿಯನ್ನು ತಿಳಿಸಿದರು.ವನ್ಯಜೀವಿ ಮತ್ತು ಪುಟಾಣಿ ಮಕ್ಕಳ ಛಾಯಾಚಿತ್ರ ತೆಗೆಯುವಾಗ ಫ್ಲ್ಯಾಶ್ ಲೈಟ್ ತಡೆಹಿಡಿಯಬೇಕು ಎಂಬುದನ್ನು ಹಂಚಿಕೊಂಡ
ಬಳಿಕ ತಾವು ತಂದಿದ್ದ ವಿವಿಧ ಬಗೆಯ ಬೇರೆ ಬೇರೆ ಬೆಲೆಯುಳ್ಳ ಕ್ಯಾಮರಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಪ್ರಾಯೋಗಿಕವಾಗಿ ಛಾಯಾಚಿತ್ರ ತೆಗೆಯಲು ಅವಕಾಶ ಕಲ್ಪಿಸಿಕೊಟ್ಟರು.
ಕಾರ್ಯಗಾರದಲ್ಲಿ ಬಸರವಳ್ಳಿ ಆಲ್ದೂರು ಸತ್ತಿಹಳ್ಳಿ ದೊಡ್ಡ ಮಾಗರವಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಂದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಛಾಯಾಗ್ರಾಹಕ ಮ್ಯಾಥ್ಯೂ ರವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ಗ್ರಂಥಪಾಲಕರಾದ ಕೆಂಚಯ್ಯ ಆಲ್ದೂರು, ಪೂರ್ಣೇಶ್ ಬೈಗೂರು, ರಾಗಿಣಿ ಡಿಪಿ ದೊಡ್ಡ ಮಾಗರವಳ್ಳಿ, ಶಬ್ನಂ ಸತ್ತಿಹಳ್ಳಿ, ಗೀತಾ ಬಸರವಳ್ಳಿ, ಮತ್ತು ಮಾಜಿ ಪಂಚಾಯಿತಿ ಸದಸ್ಯರಾದ ಪ್ರತಿಭಾ ನವೀನ್, ಬಿಲ್ ಕಲೆಕ್ಟರ್ ಮಂಜುನಾಥ್, ಡಿಇಓ ವಾಣಿ, ಸಿಬ್ಬಂದಿ ಪೂರ್ಣೇಶ್ ಭಾಗವಹಿಸಿದ್ದರು.
✍🏻ಬರಹ ಕೃಪೆ.✍🏻
ಸಿದ್ದಿಕ್ ಚಕ್ಕಮಕ್ಕಿ.
ಅವಿನ್ ಟಿವಿ.

