ಎಸ್ ಎಸ್ ಎಲ್ ಸಿ ಪರೀಕ್ಷೆ, ವಾಸವಿ ವಿದ್ಯಾ ಸಂಸ್ಥೆಗೆ ಶೇ 100 ಫಲಿತಾಂಶ…
1 min read
ಅವಿನ್ ಟಿವಿ ಸುದ್ದಿಜಾಲ ✍️: ಎಸ್ ಎಸ್ ಎಲ್ ಸಿ ಪರೀಕ್ಷೆ, ವಾಸವಿ ವಿದ್ಯಾ ಸಂಸ್ಥೆಗೆ ಶೇ 100 ಫಲಿತಾಂಶ.
ಚಿಕ್ಕಮಗಳೂರು ಏ ೨೩, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಗರದ ವಾಸವಿ ವಿದ್ಯಾಸಂಸ್ಥೆಯ ಶ್ರೀಮತಿ ಶಾರದಮ್ಮ ಎಂ.ಜೆ.ಪಟ್ಟಾಭಿರಾಮ ಶೆಟ್ಟಿ ಪ್ರೌಢಶಾಲೆ ಶೇ 100 ಫಲಿತಾಂಶ ಗಳಿಸಿದೆ.
ಪರೀಕ್ಷೆ ಎದುರಿಸಿದ ಎಲ್ಲಾ 44 ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದು, 25 ವಿದ್ಯಾರ್ಥಿಗಳು ಅತ್ಯುನ್ನತ, 18 ವಿದ್ಯಾರ್ಥಿಗಳು ಉನ್ನತ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿ ಸಿ.ಸಿ.ದೇವರಾಜ್ 625ಕ್ಕೆ 620 ಅಂಕಗಳಿಸಿ ತೇರ್ಗಡೆಯಾಗಿರುವುದು ಮತ್ತು ಪರೀಕ್ಷೆಗೆ ಕುಳಿತ ಎಲ್ಲಾ 44 ವಿದ್ಯಾರ್ಥಿಗಳೂ ಕೂಡ ಉತ್ತೀರ್ಣರಾಗಿರುವುದು ವಾಸವಿ ವಿದ್ಯಾ ಸಂಸ್ಥೆಗೆ ಸಂತಸ ತಂದಿದೆ,ಉತ್ತೀರ್ಣರಾದ ಇತರೆ ಎಲ್ಲ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ಸೂಚಿಸಿ ಬೋಧಕ ವರ್ಗವು ಸೇರಿದಂತೆ ಈ ಸಾಧನೆಗೆ ಕಾರಣಕರ್ತರಾದ ಎಲ್ಲರಿಗೂ ಶಾಲೆಯ ಪ್ರಾಂಶುಪಾಲ ಬಿ ಆರ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
•••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

