लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ವಿಶ್ವ ಭೂಮಿ ದಿನ ಏಪ್ರಿಲ್ 22 ‎ World Earth Day April 22 ‎•••••••••••••••••••••••••••••••••• ‎ ವಿಚಿತ್ರವಾದರೂ ಸತ್ಯ……

1 min read

‎ವಿಶ್ವ ಭೂಮಿ ದಿನ ಏಪ್ರಿಲ್ 22
‎ World Earth Day April 22
‎••••••••••••••••••••••••••••••••••
‎ ವಿಚಿತ್ರವಾದರೂ ಸತ್ಯ……
‎
‎ಪರಿಸರ ನಾಶದಿಂದ ಬರಗಾಲ ತಾಂಡವವಾಡುತ್ತಿದೆ,
‎
‎ಕೆರೆ ಕಟ್ಟೆ ನಾಶದಿಂದ ಅಂತರ್ಜಲ ಕುಸಿಯುತ್ತಿದೆ,
‎
‎ಮಳೆ ನೀರಿನ ಅಸಮರ್ಪಕ ನಿರ್ವಹಣೆಯಿಂದ ಕುಡಿಯುವ ನೀರಿಗೆ ಹಾಹಾಕಾರವಾಗುತ್ತಿದೆ,
‎
‎ಗಿಡಮರಗಳ ನಾಶದಿಂದ ಗಾಳಿ ವಿಷಯುಕ್ತವಾಗುತ್ತಿದೆ,
‎
‎ಅವೈಜ್ಞಾನಿಕ  ರಸ್ತೆಗಳಿಂದ ಭೀಕರ ಅಪಘಾತಗಳಾಗುತ್ತಿವೆ,
‎
‎ದೊಡ್ಡ ರಸ್ತೆಗಳಲ್ಲೇ ಟ್ರಾಫಿಕ್ ಜಾಮ್  ಗಳಾಗುತ್ತಿವೆ,
‎
‎ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ,
‎
‎ಯುವಜನರಲ್ಲಿ ನಿರುದ್ಯೋಗ ಸಾಮಾನ್ಯವಾಗುತ್ತಿದೆ,
‎
‎ರೈತರ ಕೃಷಿಭೂಮಿ ಕಂಡವರ ಪಾಲಾಗುತ್ತಿದೆ,
‎
‎ಬೆಳೆಗಳು ಪ್ರಕೃತಿಯ ಮುನಿಸಿಗೆ ತುತ್ತಾಗುತ್ತಿವೆ,
‎
‎ಬೆಳೆದರೂ ಬೆಲೆಗಳಿಲ್ಲದೆ ಮಾರುಕಟ್ಟೆ ಕುಸಿಯುತ್ತಿದೆ,
‎
‎ರೈತರ ಆತ್ಮಹತ್ಯೆಗಳು ಸಹಜವಾಗುತ್ತಿವೆ,
‎
‎ಕೊಲೆ, ಸುಲಿಗೆ, ಅತ್ಯಾಚಾರಗಳು ಹೆಚ್ಚಾಗುತ್ತಿವೆ,
‎
‎ಚುನಾವಣೆಗಳು ಹಣ, ಹೆಂಡ ಹಂಚುವ ಹಬ್ಬಗಳಾಗುತ್ತಿವೆ,
‎
‎ಬಹಳಷ್ಟು ಜನರಲ್ಲಿ ಹತಾಶೆ, ಆಕ್ರೋಶ ಹೆಚ್ಚಾಗುತ್ತಿದೆ,
‎
‎ಬಡತನ, ಅಸಮಾನತೆ, ಜಾಗೃತ ಮನಸ್ಥಿತಿಯವರಲ್ಲಿ ಅಸಹನೀಯತೆ ಬೆಳೆಸುತ್ತಿದೆ,
‎
‎ಹೆಜ್ಜೆ ಹೆಜ್ಜೆಗೂ ಭಿನ್ನಾಭಿಪ್ರಾಯ,
‎ಮಾತು ಮಾತಿಗೂ ವಾದ ವಿವಾದ,
‎ಪ್ರತಿವಿಷಯಕ್ಕೂ ಅನಾವಶ್ಯಕ ಚರ್ಚೆಗಳು,
‎ಪ್ರತಿಯೊಂದಕ್ಕೂ ವಿರೋಧ – ಧಿಕ್ಕಾರ,
‎ಎಲ್ಲದಕ್ಕೂ ಗಲಾಟೆ – ಗಲಭೆಗಳು,
‎ಎಲ್ಲದರಲ್ಲೂ ಗೊಂದಲ,
‎ಸ್ಪಷ್ಟತೆ ಎಂಬುದನ್ನೇ ಮರೆಮಾಚಲಾಗಿದೆ.
‎
‎ಹಾಗಾದರೆ ಇಷ್ಟು ವರ್ಷಗಳ ಮಾನವ ಬದುಕಿನ ಇತಿಹಾಸದಿಂದ
‎ತಿಳಿದಿದ್ದೇನು, ಗಳಿಸಿದ್ದೇನು, ಪಡೆದದ್ದೇನು.
‎
‎ನೆಮ್ಮದಿ ಕಳೆದುಕೊಳ್ಳುವುದು – ಯೋಗ ಧ್ಯಾನ ಮಾಡುವುದು,
‎
‎ಆರೋಗ್ಯ ಕಳೆದುಕೊಳ್ಳುವುದು – ಔಷಧಿ ತೆಗೆದುಕೊಳ್ಳುವುದು,
‎
‎ಹೊಡೆದಾಟ ಮಾಡಿಕೊಳ್ಳುವುದು – ಜಾಮೀನು ಪಡೆಯುವುದು,
‎
‎ಹಾದಿ ಬೀದಿ ರಂಪ ಮಾಡುವುದು – ನಾಯಕರಾಗುವುದು,
‎
‎ಹಣ ಮಾಡುವುದು – ಚುನಾವಣೆಗೆ ಸ್ಪರ್ಧಿಸುವುದು,
‎
‎ಹಣ ಹಂಚುವುದು – ಮತ ಪಡೆಯುವುದು,
‎
‎ಅಧಿಕಾರ ಹಿಡಿಯುವುದು – ಮಜಾ ಉಡಾಯಿಸುವುದು.
‎
‎ಕೇವಲ ಈ ಗೊಂದಲಗಳಲ್ಲೇ ನಾವು ಕಾಲ ಕಳೆದರೆ,
‎ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಂಡು ಅದ್ಭುತ ಸಾಧನೆಗಳನ್ನು ಮಾಡುವುದೆಂದು,
‎
‎ಸಿನಿಮಾ ಕ್ಷೇತ್ರದಲ್ಲಿ ಆಸ್ಕರ್ ಪ್ರಶಸ್ತಿ,
‎ಕ್ರೀಡೆಗಳಲ್ಲಿ ಒಲಿಂಪಿಕ್ ಪ್ರಶಸ್ತಿ,
‎ಸಾಹಿತ್ಯ, ವಿಜ್ಞಾನ, ಶಾಂತಿ ಕ್ಷೇತ್ರಗಳಲ್ಲಿ ನೊಬೆಲ್ ಪ್ರಶಸ್ತಿ
‎ಪಡೆಯುವುದು ಯಾವಾಗ.
‎
‎ಅಥವಾ,
‎
‎ಇರುವ ನಾಲ್ಕು ಧಾರವಾಹಿಗಳಲ್ಲಿ ಜೀ ಕುಟುಂಬ ಅವಾರ್ಡ್ಸ್, ಸುವರ್ಣ ಟಿವಿ ಅವಾರ್ಡ್ಸ್, ಕಲರ್ಸ್ ಕನ್ನಡ ಅವಾರ್ಡ್ಸ್, ಸಿನಿಮಾ ಕ್ಷೇತ್ರದ ಚಿತ್ರ ರಸಿಕರ ಅವಾರ್ಡ್ಸ್,
‎ಸಾಹಿತ್ಯದ ಅಕಾಡೆಮಿ ಅವಾರ್ಡ್ಸ್ ಅಥವಾ ರಾಜಕೀಯ ದೊಂಬರಾಟದ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಇತ್ಯಾದಿಗಳು ಸಾಕೇ.
‎
‎ಇದೀಗ 10 ರಿಂದ 20 ವರ್ಷದ ಬಾಲ್ಯ – ಪ್ರೌಢಾವಸ್ಥೆಯತ್ತ ಸಾಗುತ್ತಿರುವ ನಮ್ಮ ಯುವ ಪೀಳಿಗೆಗೆ ಯಾವ ರೀತಿಯ ಮಾರ್ಗದರ್ಶನ ಮಾಡುವುದು.
‎ಹೇಗೆ ಅವರಲ್ಲಿ ಸತ್ಯ ಶೋಧನೆಯ ಚಿಂತನಾ ಮನೋಭಾವ ಬೆಳೆಸುವುದು.
‎
‎ಅಥವಾ,
‎
‎Wheeling ಮಾಡಿಕೊಂಡು, Bar ಗಳಲ್ಲಿ Enjoy ಮಾಡಿಕೊಂಡು, Call Center ಗಳಲ್ಲಿ Job ಮಾಡಿಕೊಂಡು ಕಾಲಕಳೆಯುತ್ತಾ, drug addict ಗಳಾಗಿ ಹೇಗೋ ಆಗಿದ್ದು ಆಗಲಿ ಎಲ್ಲಾ ದೇವರು ನೋಡಿಕೊಳ್ಳುತ್ತಾನೆ ಎಂದು ದೇವರ ಮೇಲೆ ಭಾರ ಹಾಕಿ ಬಿಟ್ಟುಬಿಡೋಣವೇ.
‎
‎ನಾಗರೀಕತೆ ಮತ್ತು ಜನಸಂಖ್ಯೆ ಹೆಚ್ಚಳದಿಂದ ಆದ ಬದಲಾವಣೆ ಗಮನಿಸೋಣ,
‎
‎ಬಡತನ ಹೆಚ್ಚು ಮಾಡುವುದು ನಂತರ ಅದರ ನಿರ್ಮೂಲನೆಗೆ ಪ್ರಯತ್ನಿಸುವುದು,
‎
‎ವೃದ್ಧರನ್ನು ಮನೆಯಾಚೆ ಹಾಕುವುದು ವೃದ್ದಾಶ್ರಮಗಳನ್ನು ಹೆಚ್ಚಿಸುವುದು,
‎
‎ನಿರ್ಗತಿಕರನ್ನು ಹೆಚ್ಚಿಸುವುದು
‎ಅನಾಥಾಶ್ರಮಗಳನ್ನು ಸ್ಥಾಪಿಸುವುದು,
‎
‎ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು
‎ಅವರಿಗಾಗಿ ರಕ್ಷಣಾ ವ್ಯವಸ್ಥೆ ರೂಪಿಸುವುದು,
‎
‎ವೇಶ್ಯಾವಾಟಿಕೆ ಹೆಚ್ಚುವಂತೆ ಮಾಡುವುದು
‎ನಂತರ ಅವರಿಗೆ ಪುನರ್ ವಸತಿ ಕಲ್ಪಿಸುವುದು,
‎
‎ಭಷ್ಟಾಚಾರ ಹೆಚ್ಚಾಗಲು ಬಿಡುವುದು
‎ಆಮೇಲೆ ಅದರ ನಿಯಂತ್ರಣಕ್ಕೆ ಮತ್ತೊಂದು ಸಂಸ್ಥೆ ಹುಟ್ಟು ಹಾಕುವುದು,
‎
‎ಅನಾರೋಗ್ಯಕಾರಿ ವ್ಯವಸ್ಥೆ ಸೃಷ್ಟಿಸುವುದು
‎ನಂತರ ಆಸ್ಪತ್ರೆಗಳನ್ನು  ಹೆಚ್ಚಿಸುವುದು,
‎
‎ಕಳ್ಳತನ, ವಂಚನೆಗಳು ಹೆಚ್ಚಾಗುವಂತೆ ನಡೆದುಕೊಳ್ಳುವುದು,
‎ಪೋಲೀಸ್ ಸ್ಟೇಷನ್ ಗಳನ್ನು ಹೆಚ್ಚಿಸುವುದು,
‎
‎ಕೆರೆಗಳನ್ನು ನಾಶ ಮಾಡುವುದು
‎ನಂತರ ಕೆರೆ ನಿಯಂತ್ರಣ ಪ್ರಾಧಿಕಾರ ರಚಿಸುವುದು,
‎
‎ಅಂದರೆ ಶಾಸ್ತ್ರ ಹೇಳೋಕೆ ಬದನೆಕಾಯಿ ತಿನ್ನೋಕೆ ಎಂಬುದು ವಾಸ್ತವವೇ?
‎
‎ಇದೇನು ಮಕ್ಕಳಾಟವೇ?
‎
‎147 ಕೋಟಿ ಜನಗಳು ಚುನಾಯಿಸಿದ ಸರ್ಕಾರಗಳಿಗೆ ಜವಾಬ್ದಾರಿ ಇಲ್ಲವೇ?
‎
‎ಜನರಲ್ಲಿ ಮೌಲ್ಯಯುತ ಜೀವನಮಟ್ಟ ಕಾಪಾಡಿಕೊಳ್ಳಲು ನಮ್ಮನ್ನಾಳುವ ಸರ್ಕಾರಕ್ಕೆ ಇಲ್ಲವೇ?
‎
‎ನಾವು ಮತದಾನ ಮಾಡುವುದು ನಿರರ್ಥಕವೇ?
‎ಅಥವಾ
‎ಕೆಲವೇ ಜನಗಳ ಸುಖಕ್ಕಾಗಿ ರೂಪಿಸಿದ ಪ್ರಜಾಪ್ರಭುತ್ವದ ನಾಟಕವೇ ಇದು?
‎
‎ಯಾವುದೋ ಕುಂಟುನೆಪ, ಅನುಕೂಲಸಿಂಧು ಸಮರ್ಥನೆ, ಸಿನಿಕತನಗಳಿಗೆ ಇಳಿಯದೆ,
‎ಆತ್ಮಗಳನ್ನು ಮುಟ್ಟಿಕೊಂಡು ಯೋಚಿಸೋಣ,
‎
‎ಬದಲಾವಣೆಗೆ ಮುನ್ನುಡಿ ಬರೆಯೋಣ,
‎
‎ಖಂಡಿತವ ಇದು ಅಸಾಧ್ಯವಲ್ಲ,, ಕನಸಲ್ಲ,
‎
‎ಆ ಸಾಮರ್ಥ್ಯ ಈ ದೇಶದ ನಾಗರೀಕರಿಗೆ ಇದೆ.
‎
‎ಹಾಗಾದರೆ ಮುಂದೇನು ?,
‎
‎ಈ ಸಮಸ್ಯೆಗಳು ನಿಜವೇ ಆಗಿದ್ದಲ್ಲಿ ಪರಿಹಾರವನ್ನೂ ನಾವೇ ಮಾಡಿಕೊಳ್ಳಬೇಕು,
‎ನಮ್ಮನ್ನಾಳುವ ಸರ್ಕಾರವನ್ನು ನಾವೇ ಆಯ್ಕೆ ಮಾಡಿಕೊಳ್ಳೋಣ,
‎
‎ಈಗ ಆಗುತ್ತಿರುವುದು ಹಣ, ಹೆಂಡ, ಜಾತಿ, ಧರ್ಮ, ಭಾಷೆ, ಸುಳ್ಳು ಭರವಸೆ,
‎ಜನರನ್ನು ಮೋಡಿಮಾಡುವ ನವರಂಗಿ ಮಾತುಗಳು ನಮ್ಮನ್ನಾಳುತ್ತಿವೆ,
‎ನಮ್ಮ ಸಮಸ್ಯೆಗೆ ನಾವೇ ಹೊಣೆಗಾರರು,
‎
‎ಮನ ಪರಿವರ್ತನೆ, ಮನೆ ಪರಿವರ್ತನೆ, ಮತ ಪರಿವರ್ತನೆ,
‎ನಮ್ಮಲ್ಲೂ ಬದಲಾವಣೆ ತರಬಹುದು.
‎ನಮ್ಮ ಜೀವನ ಮಟ್ಟ ಹೆಚ್ಚಿಸಬಹುದು.
‎
‎ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
‎ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
‎ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
‎ಮನಸ್ಸುಗಳ ಅಂತರಂಗದ ಚಳವಳಿ,
‎ವಿವೇಕಾನಂದ. ಎಚ್. ಕೆ.
‎9663750451…….
‎9844013068…….

About Author

Leave a Reply

Your email address will not be published. Required fields are marked *

You may have missed