लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಣಕ್ಕಾಗಿ ಅಧಿಕಾರಿಯಿಂದ ಆಮಿಷ ಅರಣ್ಯ ಇಲಾಖೆಯಿಂದ ತನಿಖೆಗೆ ಆದೇಶ…..

1 min read

ಹಣಕ್ಕಾಗಿ ಅಧಿಕಾರಿಯಿಂದ ಆಮಿಷ ಅರಣ್ಯ ಇಲಾಖೆಯಿಂದ ತನಿಖೆಗೆ ಆದೇಶ

ಆಲ್ದೂರು: ಅರಣ್ಯ ಇಲಾಖೆಯ ಕಣತಿ ಶಾಖೆಯ ವ್ಯಾಪ್ತಿಯಲ್ಲಿ ಮೋಜಣಿದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆಲ್ದೂರು ವಲಯ ಅರಣ್ಯ ಇಲಾಖೆ ಉಪವಲಯ ಅರಣ್ಯಾಧಿಕಾರಿ
ವೀರಭದ್ರ ನಾಯಕ್, ಕಾಫಿ ಬೆಳೆಗಾರರು ಮತ್ತು ರೈತರಿಗೆ ವನ್ಯಜೀವಿಗಳಿಂದ ಉಂಟಾಗುವ ಬೆಳೆ ಹಾನಿ ನಷ್ಟವನ್ನು ಯೋಜಿಸುವಾಗ
ಗಿಡಗಳ ಬೆಳೆಗಳ ಸಂಖ್ಯೆಯನ್ನು ನಮೂದಿಸಬೇಕಾದರೆ ಖರ್ಚಿಗೆ ಹಣ ನೀಡಬೇಕೆಂದು ಆಮಿಷ ಒಡ್ಡಿರುವ ವಿಡಿಯೋ ತುಣುಕು ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿದಾಡಿದ್ದು, ಅಧಿಕಾರಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿ ಬಂದಿದೆ, ಇದೇ ಅಧಿಕಾರಿಯ ವಿರುದ್ಧ ಈ ಹಿಂದೆ ಅರೇನೂರು ಗ್ರಾಮದ ಬೆಳೆಗಾರ ರೈತರಿಂದ ಇದೇ ರೀತಿಯಲ್ಲಿ ದೂರುಗಳು ಬಂದಿದ್ದು ಆದರೆ ಈ ಬಾರಿ ನೇರವಾಗಿ ಹಣಕ್ಕಾಗಿ ಬೇಡಿಕೆ ಇಡುತ್ತಿರುವ ವಿಡಿಯೋ ಎಲ್ಲೆಡೆ ಸಂಚಲನ ಮೂಡಿಸಿದೆ.
ಈ ಕುರಿತು ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬುರವರು ಉಪವಲಯ ಅರಣ್ಯ ಅಧಿಕಾರಿ ವೀರಭದ್ರ ನಾಯಕ್ ರವರನ್ನು ಮೂಡಿಗೆರೆ ಉಪ ವಿಭಾಗ ವ್ಯಾಪ್ತಿಗೆ ವರ್ಗಾಯಿಸಿ ಆದೇಶಿಸಿದ್ದು, ಗ್ರಾಮಸ್ಥರು ಇದುವರೆಗೆ ನೀಡಿರುವ ದೂರಿನ ಎಲ್ಲಾ ಅಂಶಗಳು ಮತ್ತು ವಿಡಿಯೋ ತುಣುಕಿನ ಸತ್ಯಾಸತ್ಯತೆ ಬಗ್ಗೆ ಸ್ಥಳ ಪರಿಶೀಲಿಸಿ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಂಡು ಹಿಂಬರಹ ನೀಡುವಂತೆ ಆದೇಶಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed