लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಣಕಲ್ ಠಾಣಾ ಪಿ.ಎಸ್‌.ಐ.ರೇಣುಕಾ ವರ್ಗಾವಣೆ: ಯುವಕರಿಂದ ಆತ್ಮೀಯ ಬೀಳ್ಕೊಡುಗೆ*….

1 min read

*ಬಣಕಲ್ ಠಾಣಾ ಪಿ.ಎಸ್‌.ಐ.ರೇಣುಕಾ ವರ್ಗಾವಣೆ: ಯುವಕರಿಂದ ಆತ್ಮೀಯ ಬೀಳ್ಕೊಡುಗೆ*
ಮೂಡಿಗೆರೆ : ಬಣಕಲ್ ನ ನೆಚ್ಚಿನ ‘ಜನಸ್ನೇಹಿ’ ಪೊಲೀಸ್ ಅಧಿಕಾರಿ, ಬಣಕಲ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಡಿ.ವಿ ರೇಣುಕಾ ಅವರು ಚಿಕ್ಕಮಗಳೂರಿಗೆ ವರ್ಗಾವಣೆಗೊಂಡಿದ್ದಾರೆ
. ಕಳೆದ ಎರಡು ವರ್ಷಗಳಿಂದ ನಗರದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಅಕ್ರಮ ಚಟುವಟಿಕೆಗಳಿಗೆ ಕಡೀವಾಣ ಹಾಕಿದ್ದರು.
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ.ಕಳ್ಳತನ ಮತ್ತಿತರ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಗೂ
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರೇಣುಕಾ ಅವರು ಪ್ರಮುಖ ಪಾತ್ರವಹಿಸಿದ್ದರು. ಠಾಣೆ ಮೆಟ್ಟಿಲೇರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು.
ಬಣಕಲ್ ಠಾಣಾ ಸರಹದ್ದಿನಲ್ಲಿ ನಡೆಯುವ ಗಣಪತಿ ವಿಸರ್ಜನಾ ಮೆರವಣಿಗೆ, ಈದ್ ಮಿಲಾದ್,ಚರ್ಚ್ ಉತ್ಸವದ ಮೆರವಣಿಗೆ ಹೀಗೆ ಬಣಕಲ್ ನಲ್ಲಿ ನಡೆದ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುವಲ್ಲಿ ಪಿಎಸ್‌ಐ ರೇಣುಕಾ ಅವರ ಶ್ರಮ ಅಪಾರ. ಅಚ್ಚುಕಟ್ಟಾದ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಹಗಲು-ರಾತ್ರಿ ಎನ್ನದೆ ಪೊಲೀಸ್ ಸಿಬ್ಬಂದಿಯನ್ನು ಸಮನ್ವಯಗೊಳಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯನಿರ್ವಹಿಸಿದ್ದರು.ಇವರ ಕಾರ್ಯ ಸಾಧನೆಗೆ ಗ್ರಾಮದ ಯುವಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿ ಶುಭಾಶಯ ಕೋರಿ ಬೀಳ್ಕೊಡುಗೆ ನೀಡಲಾಯಿತು
ಸಂದರ್ಭದಲ್ಲಿ ಬಣಕಲ್ ನ್ಯೂಸ್ ತಂಡದ ಸದಸ್ಯರಾದ ಸೂರಿ, ಅರುಣ್ ಪೂಜಾರಿ, ರಂಗನಾಥ್,,ಆಟೋ ಚಾಲಕರದ ಹರೀಶ್,ಕೀರ್ತಿ, ಗಣೇಶ್, ಶಶಿ,ನವೀನ್ ಇದ್ದರು.

 

ವರದಿ….

ಅನಿಲ್ ಮಂತೆರೊ.

About Author

Leave a Reply

Your email address will not be published. Required fields are marked *

You may have missed