लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಐಟಿಯುಸಿ ಕಾರ್ಯಕರ್ತೆಯರಿಗೆ ಸೀರೆ ಬದಲು ಗೌರವಧನಕ್ಕೆ ಮನವಿ….

1 min read

ಎಐಟಿಯುಸಿ ಕಾರ್ಯಕರ್ತೆಯರಿಗೆ ಸೀರೆ ಬದಲು ಗೌರವಧನಕ್ಕೆ ಮನವಿ
‎
‎ಚಿಕ್ಕಮಗಳೂರು: ಅಂಗನವಾಡಿ
‎ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೀರೆ ನೀಡುವ ಬದಲು. 15000 ರೂ.ಗಳು ಗೌರವಧನ ಹೆಚ್ಚಿಸಬೇಕು ಎಂದು ಓತ್ತಾಯಿಸಿ  ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
‎
‎ಈ ವೇಳೆ ಎಐಟಿಯುಸಿ ಜಿಲ್ಲಾಧ್ಯಕ್ಷೆ ಗೆಟ್ಟಾ ಫರ್ನಾಂಡೀಸ್ ಮಾತನಾಡಿ ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೌರವಧನ ಹೆಚ್ಚಿಸದೇ ನಿರಾಸೆಯುನ್ನು ಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಚುನಾವಣಾ ಪ್ರಣಾಳಿಕೆಯ ಭರವಸೆಯಂತೆ ಆರನೇ ಗ್ಯಾರಂಟಿಯಾಗಿ ಪ್ರಿಯಾಂಕಾಗಾಂಧಿ ಘೋಷಿಸಿರುವಂತೆ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆ ರಯರಿಗೆ ಗೌರವಧನ ಹೆಚ್ಚಿಸುವ ಪ್ರಸ್ತಾವನೆ
‎ಮಾಡಿದ್ದರು ಎಂದರು.
‎ಸರ್ಕಾರ ಒಂದು ಮೂರು ವರ್ಷಗಳು ಕಳೆದರೂ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವ ಮತ್ತು ಇಡುಗಂಟು ನೀಡುವ ಭರವಸೆ ಈಡೇ ರಿಸಿಲ್ಲ. ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವ
‎ದ ಬಿಜೆಪಿ ಸರ್ಕಾರ ತನ್ನ ಕೊನೆಯ ಬಜೆಟ್‌ ನಲ್ಲಿ ಸಾವಿರ ರೂ. ಹೆಚ್ಚಿಸುವುದಾಗಿ ಘೋಷಿಸಿತು. ಆದರೆ ಈ ಘೋಷಣೆ ಅನುಷ್ಠಾನಕ್ಕೆ ಬಂದಿಲ್ಲ. ಈಗಿನ ಸರ್ಕಾರವು ಬಜೆಟ್ ನಲ್ಲಿ ಒಂದು ರೂ. ಗೌರವ ಹೆಚ್ಚಿಸಿಲ್ಲ ಎಂದು ತಿಳಿಸಿದರು ಚೆಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ ಬಸವರಾಜ್ ಮಾತನಾಡಿ
‎
‎2011ನೇ ಸಾಲಿನಿಂದ ಅಂಗನವಾಡಿ ಗಳಲ್ಲಿ ದುಡಿದು ನಿವೃತ್ತರಾಗಿರುವ ವಯೋವೃದ್ಧ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ಜಾರಿ ಮಾಡಿಲ್ಲ. ಆನಂತರ ನಿವೃತ್ತಿಯಾದವರಿಗೆ ಅನ್ವಯವಾಗುವಂತೆ ಗ್ರಾಚ್ಯುಟಿ ಜಾರಿಗೊಳಿಸುತ್ತೀರಿ. ಇದರಿಂದಾಗಿ ಸುಮಾರು 15 ರಿಂದ 20 ಸಾವಿರದಷ್ಟು ನಿವೃತ್ತ ವಯೋವೃದ್ಧ ಕಾರ್ಯಕರ್ತೆಯರು, ಸಹಾಯಕರಿಗೆ ಬದ್ಧ ಗ್ರಾಚ್ಯುಟಿ ಸೌಲಭ್ಯ ಒದಗಿಸಬೇಕು ಎಂದರು.
‎
‎ಎಐಟಿಯುಸಿ ಕಾರ್ಯಕರ್ತೆಯರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವ ಸಂಭಾವನೆಯನ್ನು ಹೆಚ್ಚಳ ಮಾಡ ದೇ ಸೀರೆಯನ್ನು ನೀಡುವುದಾಗಿ ಘೋಷಿಸುವ ಮೂಲಕ ನಮ್ಮ ದುಡಿಮೆಗೆ ತಕ್ಕ ಪ್ರತಿಫಲ ನೀಡುತ್ತಿಲ್ಲ. ಮಹಿಳಾ ಕಾರ್ಮಿಕರಿಗೆ ಕನಿಷ್ಠ ವೇತನದ ನಿರಾಕರಣೆ ಮಾಡಿದಂತಾಗಿದೆ. ಕೂಡಲೇ ಮುಖ್ಯಮಂತ್ರಿಗಳು ಸೀರೆ ನೀಡುವ ಬದಲು, ಅನುದಾನದಲ್ಲಿ ಗೌರವಧನವಾಗಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
‎
‎ಈ ಸಂದರ್ಭದಲ್ಲಿ ಎಐಟಿಯುಸಿ ತಾಲ್ಲೂಕು ಅಧ್ಯಕ್ಷೆ ಶೈಲಾ ಬಸವರಾಜ್, ಕಡೂರು ಅಧ್ಯಕ್ಷೆ ಪಾರ್ವ ತಿ, ಮೂಡಿಗೆರೆ ಅಧ್ಯಕ್ಷೆ ಕೆ.ಆರ್.ಶೈಲಾ, ಸದಸ್ಯರಾದ ವಸಂತ ಧರ್ಮೇಗೌಡ, ವನಜಾಕ್ಷಿ, ದೀಪಿಕಾ, ಸುಕನ್ಯ ಮತ್ತಿತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *

You may have missed