ಪರಮಾಣು ಬಾಂಬಿನ ಸ್ಪೋಟಕ್ಕೆ ಮೊದಲು………
1 min read
ಪರಮಾಣು ಬಾಂಬಿನ ಸ್ಪೋಟಕ್ಕೆ ಮೊದಲು………
ವಿಶ್ವದ ಜನ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಕೊರತೆಯ ಬಗ್ಗೆ ಪಡುತ್ತಿರುವ ಆತಂಕ, ಭಯ, ಮುಂದಾಲೋಚನೆಯಿಂದ ಮಾಡುತ್ತಿರುವ ಸಂಗ್ರಹ, ಅದಕ್ಕಾಗಿ ಪಡುತ್ತಿರುವ ಶ್ರಮದ ಸ್ವಲ್ಪ ಭಾಗವನ್ನು ಈ ಜಗತ್ತು ಮಿಸೈಲ್ ಗಳಿಂದ, ಅಣುಬಾಂಬಿನಿಂದ, ಆಗುತ್ತಿರುವ ನಾಶ ತಡೆಯಲು,
ಜನರ ಜೀವ ಉಳಿಸಲು ತಮ್ಮ ನೆಲೆಯಲ್ಲಿಯೇ ಒಂದಷ್ಟು ಸಂಘಟಿತ ಪ್ರಯತ್ನ ಮಾಡಿದ್ದರೆ ಅವರ ಬದುಕು ನಿರಾತಂಕವಾಗುತ್ತಿತ್ತು, ಸಾರ್ಥಕವಾಗುತ್ತಿತ್ತು.
ಜನರು ಸ್ವಾರ್ಥಿಗಳಾಗಿ, ಸಂಕುಚಿತ ಮನಸ್ಸಿನವರಾಗಿ, ತಮ್ಮ ವೈಯಕ್ತಿಕ ರಕ್ಷಣೆಗೆ ಮಹತ್ವ ನೀಡಿದ ಪರಿಣಾಮವೇ ವಿಶ್ವದ ಇಂದಿನ ವಿನಾಶಕಾರಿ ನಾಯಕರ ಉಗಮ ಮತ್ತು ದುರಾಡಳಿತ. ಎಚ್ಚೆತ್ತುಕೊಳ್ಳಬೇಕಾಗಿರುವುದು ಪ್ರಜೆಗಳು, ಎಚ್ಚರಿಸಬೇಕಾಗಿರುವವರೂ ಪ್ರಜೆಗಳೇ. ನಾಯಕರುಗಳು ಸುಖವಾಗಿದ್ದಾರೆ. ನಾಶವಾಗುತ್ತಿರುವುದು ಜನಸಾಮಾನ್ಯರೇ….
ಈ ಭೂಮಿ ಉಳಿಸಲು ಶಾಂತಿಯ ಪರವಾಗಿ ಧ್ವನಿ ಎತ್ತೋಣ. ಇದು ಯಾರೋ ಕೆಲವೇ ವ್ಯಕ್ತಿಗಳಿಗೆ ಸೇರಿದ ಭೂಮಿಯಲ್ಲ. ಇದು ನಮ್ಮೆಲ್ಲರದು ಅದನ್ನು ರಕ್ಷಿಸೋಣ.
ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಇಡೀ ಜಗತ್ತಿನ ಜನ ದೊಡ್ಡ ಧ್ವನಿಯಲ್ಲಿ ದುಷ್ಟರ ವಿರುದ್ಧ ಧ್ವನಿ ಎತ್ತೋಣ…
ಯಾವುದೋ ಒಂದು ಸಿನಿಮಾದ ಟ್ರೈಲರ್ ಗೆ ಕೋಟಿ ಕೋಟಿ ವೀಕ್ಷಕರು ಪ್ರೋತ್ಸಾಹಿಸುವ ಮನಸ್ಥಿತಿಯ ನಾವು, ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗಿರುವಾಗ ಶಾಂತಿಯ ಪರವಾಗಿ ಧ್ವನಿ ಎತ್ತಧ ಸೀಡ್ಲೆಸ್ ಗಳು, ನರಸತ್ತವರು, ಅಸಹಾಯಕರಾಗದಿರೋಣ….
ಧನ್ಯವಾದಗಳು,
ವಿವೇಕಾನಂದ. ಎಚ್. ಕೆ.
ಮನಸ್ಸುಗಳ ಅಂತರಂಗದ ಚಳವಳಿ 9844013068

