लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮೂಡಿಗೆರೆ ಜೇಸಿಐ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಫಿ ಬೆಳೆಗಾರರಾದ ಶ್ರೀಎಂ.ಡಿ. ಗೋಪಾಲ್(79 ವರ್ಷ) ಮಾಕೋನಹಳ್ಳಿ ಇಂದು ದಿನಾಂಕ : 11-03-2026 ರ ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಅವರು ಚಿಕ್ಕಮಗಳೂರು ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

‎ಎಂ.ಡಿ. ಗೋಪಾಲ್‌ ಅವರು ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದವರು, ಮೂಡಿಗೆರೆ ಸಮೀಪದ ನಡುವಿನ ಮಾಡ್ಕಲ್ ಗ್ರಾಮದ ಸೋಮೇಶ್ವರ ಎಸ್ಟೇಟ್ ಮಾಲೀಕರಾಗಿದ್ದರು. ಉತ್ತಮ ಕಾಫಿ ಬೆಳೆಗಾರರಾಗಿ ಹೆಸರು ಮಾಡಿದ್ದರು.
‎
‎ಕೃಷಿಯೊಂದಿಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೂಡಿಗೆರೆ ಜೇಸಿಐ ಸಂಸ್ಥೆಯ ಪದಾಧಿಕಾರಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಸುಧಾ, ಪುತ್ರರಾದ ವಿಕಾಶ್ ಮತ್ತು ವರುಣ್‌, ಅಪಾರ ಬಂಧುಗಳನ್ನು ಅಗಲಿದ್ದಾರೆ.
‎
‎ಮೃತರ ಅಂತ್ಯ ಸಂಸ್ಕಾರವು ಇಂದು ಬುಧವಾರ ಸಂಜೆ 4 ಗಂಟೆಗೆ ನಡುವಿನ ಮಾಡ್ಕಲ್ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ
‎

About Author

Leave a Reply

Your email address will not be published. Required fields are marked *

You may have missed