ಶಾಲೆಯ ಮಕ್ಕಳಿಗೆ ಸಮವಸ್ತ್ರ.
1 min read


ಶಾಲೆಯ ಮಕ್ಕಳಿಗೆ ಸಮವಸ್ತ್ರ
ದಿನಾಂಕ 14/11/2025 ನೇ ಶುಕ್ರವಾರದಂದು ಹಿರಿಯ ಪ್ರಾಥಮಿಕ ಪಾಠ ಶಾಲೆ ಜಿ ಹೊಸಹಳ್ಳಿಯಲ್ಲಿ ಮಕ್ಕಳದಿನಾಚರಣೆ ಹಾಗೂ ಪೋಷಕರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದೆ ಸಂದರ್ಭದಲ್ಲಿ ಸುಮಾರು 60 ರಿಂದ 70 ಸಾವಿರ ವೆಚ್ಚದಲ್ಲಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ನೀಡಿದ ಜಿ ಹೊಸಹಳ್ಳಿಯ ಹಿರಿಯ ಕಾಫಿ ಬೆಳೆಗಾರರದ ಶ್ರೀ H S ರಾಜೇಗೌಡರನ್ನು ಶಾಲಾ ಪೋಷಕರು ಸನ್ಮಾನಿಸಿದರು. ಹಾಗೂ ಎಲ್ಲ ಮಕ್ಕಳಿಗೂ ಸಮವಸ್ತ್ರ ವಿತರಣೆ ಮಾಡಲಾಯಿತು. ಹಾಗೂ ನವ ಚೇತನ ಗೆಳೆಯರ ಬಳಗದ ಯುವಕರು ಮಕ್ಕಳಿಗೆ ಟೈ, ಐಡಿ ಕಾರ್ಡ್ ಹಾಗೂ ಬೆಲ್ಟ್ ವಿತರಿಸಿದರು ಈ ಸಂದರ್ಭದಲ್ಲಿ ಶಾಲಾ SDMC ಅಧ್ಯಕ್ಷರಾದ ರವಿ, ರಾಜೇಗೌಡರ ಮಗರಾದ ಯೋಗೇಶ್ ಕುಮಾರ್, ಜೆಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ಅಧ್ಯಕ್ಷರು ಅದ ಜಗತ್, ಶಾಲಾ ಹಳೆ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರ ದ ರಂಜಿತ್, ಗ್ರಾಮ ಪಂಚಾಯತ್ ಸದಸ್ಯರು ಅದ ರಘು, ಹಳೆ ವಿದ್ಯಾರ್ಥಿ ಸಂಘ ದ ಕಾರ್ಯದರ್ಶಿ ವಿಠಲ್, ಶಾಲಾ ಮುಕ್ಯೋಪಾಧ್ಯಾಯರಾದ ರಂಗಸ್ವಾಮಿ, ಪೋಷಕರಾದ ಪ್ರಕಾಶ್, ಉಮೇಶ್, ಮಹೇಶ್, ಪ್ರವೀಣ್,ಶಾಲಾ ಶಿಕ್ಷಕರು, ಪೋಷಕರು, ಶಾಲಾ ಮಕ್ಕಳು, ಗ್ರಾಮಸ್ಥರು, ಮತ್ತಿತರರು ಭಾಗವಹಿಸಿದ್ದರು.

