ಟಿಎಪಿಸಿಎಂಎಸ್ ಆಡಳಿತ ಮಂಡಳಿ….
1 min read
ಟಿಎಪಿಸಿಎಂಎಸ್ ಆಡಳಿತ ಮಂಡಳಿ
ನೂತನ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಆಯ್ಕೆ
ಮೂಡಿಗೆರೆ: ಇಲ್ಲಿನ ಟಿಎಪಿಸಿಎಂಸ್ ಆಡಳಿತ ಮಂಡಳಿಯ
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಪಟ್ಟಣದ ರೈತಭವನದಲ್ಲಿ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಎಂ.ಎನ್. ಕಲ್ಲೇಶ್, ಉಪಾಧ್ಯಕ್ಷರಾಗಿ ಕೆ.ಬಿ.ಗಣೇಶ್ ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಎ.ಎಂ.ಜ್ಯೋತಿಲಕ್ಷ್ಮಿ ಕರ್ತವ್ಯ ನಿರ್ವಹಿಸಿದರು.
ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಜಗದೀಶ್ ಮಾತನಾಡಿ, ಕಳೆದ ಅವಧಿಯಲ್ಲಿ ರೈತರು ಬಿಜೆಪಿಗೆ ಅಧಿಕಾರ ಕೊಟ್ಟಿದ್ದರು. ಉತ್ತಮ ಆಡಳಿತ ನೀಡಿದ್ದರಿಂದ ಹಾಗೂ ಎನ್ಡಿಎ ಯನ್ನು ಬೆಂಬಲಿಸುವ ಸಲುವಾಗಿ ಮತ್ತೆ ಅಧಿಕಾರ ಕೊಟ್ಟಿದ್ದಾರೆ. ಮುಂದಿನ ಅವದಿಯಲ್ಲಿ ಕೂಡ ನಮ್ಮದೇ ಆಡಳಿತ ಬರಬೇಕು. ಇದಕ್ಕೆ ರೈತರಿಗೆ ಬೇಕಾದ ಅಗತ್ಯ ಕಾರ್ಯವನ್ನು ಸಂಸ್ಥೆಯಿಂದ ಮಾಡಬೇಕೆಂದು ಸಲಹೆ ನೀಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಾಳೂರು ಲಕ್ಷ್ಮಣ್ಗೌಡ ಮಾತನಾಡಿ,ನೂತನ ಅಧ್ಯಕ್ಷ ಎಂ.ಎನ್.ಕಲ್ಲೇಶ್ ಮಾತನಾಡಿದರು ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಸಂಸ್ಥೆ ನಿರ್ದೇಶಕರಾದ ವಿ.ಕೆ.ಶಿವೇಗೌಡ, ಜಿ.ಎಂ.ಪ್ರಸನ್ನಕುಮಾರ್, ಟಿ.ಎಂ. ಗಜೇಂದ್ರ, ಪಿ.ಜಿ.ಅನುಕುಮಾರ್, ಎಂ.ಎಸ್.ಪ್ರಸನ್ನ, ರಂಜನ್ ಅಜಿತ್ಕುಮಾರ್, ಟಿ.ಎ.ಶೇಕರ್ ಬಂಗೇರ, ಎಂ.ಕೆ.ಚಂದ್ರೇಶ್, ರಮೇಶ್, ಬಿ.ಎಲ್.ವಿದ್ಯಾ, ಎಸ್.ಸಿ.ಪುಟ್ಟಮ್ಮ, ನಾಮ ನಿದೇರ್ಶನ ಸದಸ್ಯ ಈಶ್ವರ್ಗೌಡ ಸೇರಿದಂತೆ ವಿವಿಧ ಪಕ್ಷ ಹಾಗೂ ರೈತ ಸಂಘಟನೆ ಮುಖಂಡರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು

