लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕ್ಯಾತನಬೀಡು ಪ್ರತಿಷ್ಠಾನದ ವತಿಯಿಂದ ಹೊನ್ನ ಬಿತ್ತೇವು ಹೊಲಕೆಲ್ಲ ~ ಚಿಂತನ ಮಂಥನ……

1 min read

ಅವಿನ್ ಟಿವಿ ಸುದ್ದಿಜಾಲ ✒️:
ಕ್ಯಾತನಬೀಡು ಪ್ರತಿಷ್ಠಾನದ ವತಿಯಿಂದ ಹೊನ್ನ ಬಿತ್ತೇವು ಹೊಲಕೆಲ್ಲ ~ ಚಿಂತನ ಮಂಥನ.

“ಭೂಮಿ ಜನ್ಯವಿದ್ದಾಗ ಮಾತ್ರ ಜೀವಸಂಕುಲ ಸಂತಸದಿಂದಿರಲು ಸಾಧ್ಯ”

ರೈತ ಕೂಡ ನಿಜಕ್ಕೂ ಒಬ್ಬ ದೊಡ್ಡ ವಿಜ್ಞಾನಿಯೇ ಹೌದು, ಭೂಮಿ ಅಥವಾ ಬಯಲು ರೈತನ ಪ್ರಯೋಗ ಶಾಲೆ, ಒಂದು ಕಡೆ ವಿಜ್ಞಾನಿಗಳು ಲ್ಯಾಬೋರೇಟರಿಗಳ ಗಾಜಿನ ಬಟ್ಟಲುಗಳಲ್ಲಿ ಮಣ್ಣನ್ನು ಪರೀಕ್ಷೆಗೋಳಪಡಿಸಿದರೆ, ನಮ್ಮಹಳ್ಳಿಯ ರೈತ ಅದೇ ಮಣ್ಣನ್ನು ತನ್ನ ಬಾಯೊಳಗಿಟ್ಟು ಜಗಿದು ನೋಡಿ ಈ ಮಣ್ಣು ಇಂಥ ಬೆಳೆಗೆ ಸೂಕ್ತವಾಗಿದೆ ಎಂದು ಹೇಳಬಲ್ಲ ಪರೀಣಿತನಾಗಿದ್ದಾನೆ, ಆ ಮಟ್ಟದ ಮಣ್ಣಿನ ಜ್ಞಾನ ಹಳ್ಳಿಯ ಅನಕ್ಷರಸ್ಥ ರೈತನ ಬಾಯೊಳಗೆ ಇದೆ,ಈ ಮಟ್ಟದ ಮಣ್ಣಿನ ಜ್ಞಾನ ನಮ್ಮ ರೈತಾಪಿ ವರ್ಗದಲ್ಲಿ ಇಂದಿಗೂ ಇದೆ, ಈ ರೀತಿ ಮಣ್ಣನ್ನು ಬಾಯಲ್ಲಿ ಜಗಿದು ಅದರ ಫಲವತ್ತತೆಯನ್ನು ತಿಳಿಸುವ ರೈತಾಪಿ ವರ್ಗ ಇಂದಿಗೂ ನಮ್ಮ ನಡುವೆ ಇದ್ದಾರೆ.

ರೈತಾಪಿ ವರ್ಗದಲ್ಲಿದ್ದ ಇಂತಹ ಹಲವಷ್ಟು ಹಳ್ಳಿಯ ಕೃಷಿ ಜ್ಞಾನಗಳು ಆಧುನಿಕತೆಯ ಹೆಸರಿನಲ್ಲಿ ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಾ ಸಾಗುತ್ತಿವೆ, ಪಾರಂಪರಿಕ ಕೃಷಿ ಪದ್ಧತಿ, ಆ ಪಾರಂಪರಿಕ ಕೃಷಿ ಪದ್ಧತಿಯೊಳಗಿದ್ದ ಹಲವು ಜ್ಞಾನದ ಶಾಖೆಗಳು ಇಂದು ತಮ್ಮ ನೆಲೆಯನ್ನು ಕಳೆದುಕೊಂಡಿದ್ದಾವೆ.

ಮನುಷ್ಯನ ಆರೋಗ್ಯ ಮಣ್ಣಿನ ಆರೋಗ್ಯದೊಳಗಿದೆ, ಮಣ್ಣಿನ ಆರೋಗ್ಯ ಹದಗೆಟ್ಟರೆ ಮನುಷ್ಯನ ಆರೋಗ್ಯ ಮತ್ತು ಆಯಸ್ಸಿನ ಮೇಲೆ ಯಾವ ಮಟ್ಟದ ದುಷ್ಪರಿಣಾಮ ಬೀರುತ್ತದೆ ಎಂಬ ಸತ್ಯವನ್ನು ಅರಿಯಬೇಕಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಕೊಡ ಅದು ವಿವೇಕ ಮತ್ತು ಅವಿವೇಕ ಈ ಎರಡು ಮಗ್ಗಲುಗಳ ಜೊತೆ ಜೊತೆಯೇ ಬೆಳೆಯುತ್ತಿದೆ, ಈ ವಿಜ್ಞಾನ ಇಂದು ಮಂಗಳನ ಅಂಗಳಕ್ಕೆ ಕಾಲಿಟ್ಟು ಚಂದ್ರನ ಮೇಲು ಸುತ್ತಾಡಿ, ಅ ಸುತ್ತಾಡಿದ ಜಾಗಕ್ಕೊಂದು ಹೆಸರಿಟ್ಟು ಬಂದಿದೆ. ವಿಜ್ಞಾನ ಹೀಗೆ ಅದು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಕೂಡ ಜಗತ್ತಿನ ಎಲ್ಲ ವಿಜ್ಞಾನಗಳ ತಾಯಿ ಕೃಷಿಯೇ ಅಗಿದೆ, ಕೃಷಿಯನ್ನು ಬಿಟ್ಟು ಯಾವ ವಿಜ್ಞಾನವು ಆವಿಷ್ಕಾರವಾಗಿಲ್ಲ. ಸಂಶೋಧನೆಗೊಳಪಟ್ಟಿಲ್ಲ.

ಇಂತಹ ಸಮೃದ್ಧವಾದ ಕೃಷಿ ಕ್ಷೇತ್ರದ ಕಡೆ ಬೆನ್ನು ಮಾಡಿ, ನಗರದ ಕಡೆ ಮುಖ ಮಾಡಿರುವ ಯುವ ಜನತೆಯನ್ನು ಮರಳಿ ಮಣ್ಣಿನ ಹತ್ತಿರಕ್ಕೆ ಕರೆತರಬೇಕಾಗಿದೆ. ದೇಶದ ಜನಸಂಖ್ಯೆಯಲ್ಲಿ ಯುವಜನತೆಯೇ ಸಿಂಹಪಾಲು ಇರುವುದರಿಂದ, ಅ ಯುವ ಜನತೆಯ ಅಂಗೈ ಮೇಲೆ ಮಣ್ಣನ್ನಿಟ್ಟು, ಈ ಮಣ್ಣಿಗೆ ತನ್ನ ಬೆವರನ್ನು ಸುರಿಸುವ ಬಗೆಯನ್ನು ತಿಳಿಸಬೇಕಾಗಿದೆ. ಮಣ್ಣು ಮತ್ತು ಬೆವರಿನೊಟ್ಟಿಗೆ ಮನುಷ್ಯನ ಆರೋಗ್ಯ ಮತ್ತು ಸ್ವಸ್ಥ ಸಮಾಜದ ಕಡೆ ಹೆಜ್ಜೆ ಇಟ್ಟು, ಕೃಷಿ ಕ್ಷೇತ್ರವನ್ನು ಖುಷಿಯಾದ ಕ್ಷೇತ್ರವನ್ನಾಗಿ ಮಾಡಬೇಕಿದೆ.

ಭೂಮಿ ಬರಡಾದರೆ ಮನುಷ್ಯನ ಸಂತತಿ ಅಂತ್ಯವಾಗುತ್ತದೆ, ರೈತ ಹಾಳಾದರೆ ಸಮಾಜ ಹದಗೆಡುತ್ತದೆ, ಕೃಷಿಯಲ್ಲಿ ಖುಷಿಯಿದೆ ಎಂಬುವ ನಿಟ್ಟಿನಲ್ಲಿ, ಚಿಕ್ಕಮಗಳೂರಿನ ಕ್ಯಾತನಬೀಡು ಪ್ರತಿಷ್ಠಾನ, ಲಕ್ಯಾ ಹೋಬಳಿ ಚಿಕ್ಕಗೌಜ ಗ್ರಾಮದ ಮಾದರಿ ಕೃಷಿಕ ದೊಡ್ಮನೆ ಮಾಸ್ತೇಗೌಡ ಅವರ ಮನೆಯಂಗಳದಲ್ಲಿ ಭೂಮಿ ಮತ್ತು ಬೆವರನ್ನು ಕುರಿತು ರೈತಾಪಿ ವರ್ಗದೊಂದಿಗೆ ಚಿಂತನ ಮಂಥನ ನಡೆಸಲಾಯಿತು.

ಈ ಸಭೆಯಲ್ಲಿ, ರೈತ ಮುಖಂಡರು, ಕೃಷಿ ತಜ್ಞರು, ವಿವಿಧ ರಾಜಕೀಯ ಪಕ್ಷದ ಪ್ರಮುಖರು, ನೀರಾವರಿ ಹೋರಾಟಗಾರರು, ಮಾಧ್ಯಮದ ಸ್ನೇಹಿತರು, ರೈತಾಪಿ ವರ್ಗ ಮುಂತಾದವರು ಉಪಸ್ಥಿತರಿದ್ದರು.
••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ.. ✒️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed