ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ “ಡಾ.ಬಿ.ಆರ್.ಅಂಬೇಡ್ಕರ್.” ಫೋಟೋ ಕೊಡುಗೆ.
1 min read
*ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸಮಾಜ ಸೇವಾ ಸಂಘ (ರಿ).ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) ಚಿಕ್ಕಮಗಳೂರು ಜಿಲ್ಲೆ

ಬಾಳೂರು ಹೋಬಳಿ ಆದಿದ್ರಾವಿಡ ಸಮಾಜ ಸೇವಾ ಸಮಿತಿ ಮೂಡಿಗೆರೆ ತಾ ॥ ವತಿಯಿಂದ ಇಂದು ನಿಡುವಾಳೆಯ ಸುಮಾರು 1929 ರಲ್ಲಿ ಸ್ಥಾಪನೆಯಾದ ಉರುವಿನಖಾನ್ ಮಂಜೇಗೌಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಭೇಡ್ಕರ್ ರವರ ಭಾವಚಿತ್ರ ನೀಡಲಾಯಿತು .
ಈ ಸಂಧರ್ಭ ವೈದ್ಯರಾದ ಡಾ॥ ಎಂ ಎಂ ಭಗವಾನ್ , ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೃಷ್ಣಪ್ಪ ಜಾವಳಿ , ರಾಜ್ಯ ಸಹ ಕಾರ್ಯದರ್ಶಿ ಲೋಕೇಶ್ ಹಡ್ತಾಳು, ಸ್ಥಳಿಯರಾದ ನಟೇಶ್ ಎಂ.ಎಂ ರಾಜ್ಯ ಮಾಜಿ ಉಪಾಧ್ಯಕ್ಷರಾದ ಎ ಎಸ್ ಮೋನಪ್ಪ ಹಡ್ತಾಳು, ಜಿಲ್ಲಾ ಆದಿದ್ರಾವಿಡ ಸಮಾಜ ಉಪಾಧ್ಯಕ್ಷರಾದ ತನಿಯಪ್ಪ , ಜಿಲ್ಲಾ ಪದಾಧಿಕಾರಿ ವಿಶ್ವ ಆಟೋ ನಿಡುವಾಳೆ, ರಾಜು ಗಬ್ಬಲ್ , ಬಾಳೂರು ಹೋಬಳಿ ಅಧ್ಯಕ್ಷರಾದ ಸದಾಶಿವ ಅರೆಕೊಡಿಗೆ, ಕಾರ್ಯದರ್ಶಿ ಶಂಕರ್ ಹೇಮಾವತಿ, ಉಪಾಧ್ಯಕ್ಷರಾದ ಶಿವಪ್ಪ ಉರುವಿನಖಾನ್ , ಆನಂದ ಗಬ್ಗಲ್ , ನಿಡುವಾಳೆ ಘಟಕಾಧ್ಯಕ್ಷರಾದ ಸುರೇಶ್ ಕಲ್ಮನೆ, ಉರುವಿನಖಾನ್ ಘಟಕಾಧ್ಯಕ್ಷರಾದ ಪ್ರವೀಣ್ ಮಾಸ್ಟರ್ , ಗಬ್ಗಲ್ ಘಟಕಾಧ್ಯಕ್ಷರಾದ ಗೋಪಾಲ್ ಅಮ್ತಿ , ವಿಠ್ಠಲ್ ಕೆಳಮರ್ಕಲ್ , ಸುನೀಲ್ ಮಾಲಿಗನಾಡು ಮತ್ತಿತರರು ಉಪಸ್ಥಿತರಿದ್ದರು.

