ಪ್ರಶಂಸೆ ಮತ್ತು ವಿಮರ್ಶೆ ಈ ಎರಡೂ ಮಗ್ಗಲುಗಳಿಂದಲೂ ನಮ್ಮ ನಮ್ಮ ಬದುಕಿನ ನಿರೂಪಣೆಗಳು*
1 min read
ಅವಿನ್ ಟಿವಿ ಸುದ್ದಿಜಾಲ ✒️:
*ಪ್ರಶಂಸೆ ಮತ್ತು ವಿಮರ್ಶೆ ಈ ಎರಡೂ ಮಗ್ಗಲುಗಳಿಂದಲೂ ನಮ್ಮ ನಮ್ಮ ಬದುಕಿನ ನಿರೂಪಣೆಗಳು*
*ವಿನ್ಯಾಸಗೊಳ್ಳುತ್ತಾ ಸಾಗಬೇಕು…*
ವಿದ್ಯಾರ್ಥಿಗಳೋಳಗೆ ಇಂತಹ ವಿನ್ಯಾಸದ ನೆಯ್ಗೆಯನ್ನು ನೆಯ್ಯುವ ಗುರುತರ ಜವಾಬ್ದಾರಿ ಕೇವಲ ಶಿಕ್ಷಕರ ಮೇಲೆ ಮಾತ್ರವಲ್ಲ, ಪೋಷಕರು ಮತ್ತು ಸಮಾಜದ ಹೊಣೆಗಾರಿಕೆಯು ಆಗಿರುತ್ತದೆ.
ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ರೂಪಿಸುವಲ್ಲಿ ಶಿಕ್ಷಕ, ಸಮಾಜ, ಪೋಷಕ ಈ ಮೂವರು ಪರಸ್ಪರ ಒಬ್ಬರ ಕೈಯ್ಯನ್ನೊಬ್ಬರು ಹಿಡಿದುಕೊಂಡು ಸಾಗಬೇಕು,
ಸಮಾಜದ ಆಲೋಚನೆಗಳು ರೋಗಗ್ರಸ್ತವಾಗಿರುವ ಈ ಸಮಯದಲ್ಲಿ , ರೋಗಮುಕ್ತವಾದ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿ ಯುವಜನರ ಪಾತ್ರ ಮಹತ್ವವಾಗಿದೆ.
ವಿದ್ಯಾರ್ಥಿಗಳು ಪರೀಕ್ಷಾ ದೃಷ್ಟಿಯಿಂದ ನೂರಕ್ಕೆ ನೂರು ಅಂಕವನ್ನು ಪಡೆದರೆ ಸಾಲದು, ಬದುಕು ಮತ್ತು ಭಾಷೆಯ ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ನಮ್ಮ ಮಾತೃಭಾಷೆಗಳು ನಮ್ಮ ನಿತ್ಯ ಬದುಕಿನಲ್ಲಿ ಒಂದು ಗಟ್ಟಿಯಾದ ಕಸುವಿನೊಂದಿಗೆ ಬಳಕೆಯಾಗಬೇಕು.
ಕನ್ನಡಕ್ಕೆ ಬರುವ ಅನ್ಯ ಭಾಷೆಯ ಹೊಸ ಹೊಸ ಪದಗಳು ನಮ್ಮ ಕನ್ನಡದ ಸೊಬಗನ್ನು ಹೆಚ್ಚಿಸಬೇಕೆ ವಿನಃ ಈ ಕನ್ನಡ ಪದಗಳ ಸೊಗಸನ್ನು ಕುಗ್ಗಿಸಬಾರದು, ಈ ನಿಟ್ಟಿನಲ್ಲಿ ಭಾಷೆಯ ಸೊಗಸಿನ ಸೌಂದರ್ಯವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾ, ಕಳೆದುಹೋಗುತ್ತಿರುವ ಕನ್ನಡ ಪದಗಳನ್ನು ಮರುಬಳಕೆ ಮಾಡುತ್ತಾ, ಈ ನಿಟ್ಟಿನಲ್ಲಿ ನಮ್ಮ ಆಲೋಚನೆಗಳು ಆರೋಗ್ಯವಂತವಾಗಿ ರೂಪಗೊಳ್ಳಲಿ ಎಂದು ಕನ್ನಡ ಭಾಷಾ ವಿಷಯದಲ್ಲಿ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ ನೂರಕ್ಕೆ ನೂರು ಅಂಕಗಳನ್ನು ಪಡೆದ ಚಿಕ್ಕಮಗಳೂರು ತಾಲೂಕಿನ ಆಯ್ದ ಶಾಲಾ ಕಾಲೇಜುಗಳ ಒಂದು ನೂರಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ, ಚಿಕ್ಕಮಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಭಾ ಪುರಸ್ಕಾರ ನೀಡಿ ಇತ್ತೀಚಿಗೆ ಗೌರವಿಸಿತು.
ಚಿಕ್ಕಮಗಳೂರು ಆದಿಚುಂಚನಗಿರಿ ಮಹಾವಿದ್ಯಾಲಯದ ಬಿಜಿಯೆಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳೊಟ್ಟಿಗೆ, ಸಮಾಜಮುಖಿಯಾಗಿ ದುಡಿಯುತ್ತಿರುವ ಅನೇಕ ಸಾಧಕರನ್ನು ಹಾಗೂ ಮಹಾಪ್ರಬಂಧ ಮಂಡಿಸಿ ಪಿಎಚ್ ಡಿ ಪದವಿ ಪಡೆದು ಉಪನ್ಯಾಸಕ ವೃತ್ತಿ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾಗಿ ದುಡಿಯುತ್ತಿರುವ ಅನೇಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಚಿಕ್ಕಮಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜನೆ ಮಾಡಿದ್ದ ಈ ಸಮಾರಂಭದಲ್ಲಿ,ಕುಲಪತಿಗಳು. ಪ್ರಾಂಶುಪಾಲರು. ಜನಪದ ವಿದ್ವಾಂಸರು. ವೈದ್ಯರು. ಉಪನ್ಯಾಸಕರು. ಲೇಖಕರು. ಸಾಹಿತಿಗಳು. ಕವಿಗಳು. ವಿದ್ಯಾರ್ಥಿಗಳ ಪೋಷಕರು ಹಾಗೂ ವಿವಿಧ ಸಂಘಟನೆಯ ಮುಖ್ಯಸ್ಥರು ಒಂದು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾರೈಸಿದರು.
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ✒️
ಚಿಕ್ಕಮಗಳೂರು

