ಉಚಿತ ಆರೊಗ್ಯ ಶಿಬಿರದಲ್ಲಿ ಗೊಂದಲ…..
1 min read
ಉಚಿತ ಆರೊಗ್ಯ ಶಿಬಿರದಲ್ಲಿ ಗೊಂದಲ…..
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ನಾರಾಯಣ ಹೆಲ್ತ್ ಇವರಿಂದ ಮೂಡಿಗೆರೆ ಎಂ. ಜಿ. ಎಂ. ಆಸ್ಪತ್ರೆ ಯಲ್ಲಿ ಉಚಿತ ಹೃದಯ ಸಂಬಂಧೀ ತೊಂದರೆ ತಪಾಸಣೆ ಮತ್ತು ಕ್ಯಾನ್ಸರ್ ಸಂಬಂಧಿತ ತಪಾಸಣೆ ನಡೆದಿದ್ದು ರೋಗಿಗಳಿಗೆ ಸರಿಯಾದ ವ್ಯವಸ್ಥೆ ಇಲ್ಲದೇ ಸಂತೆ ಮಾರುಕಟ್ಟೆಯಲ್ಲಿ ಸಾಮಾನುಗಳನ್ನು ತೆಗೆದು ಕೊಳ್ಳಲು ನೋಕು ನುಗ್ಗಲಿನಂತೆ ರೋಗಿಗಳು ನಿಂತು ತಪಾಸಣೆ ಮಾಡಿಸಿಕೊಳ್ಳುವ ಸ್ಥಿತಿ ನಿರ್ಮಾಣ ಆಗಿತ್ತು.
ದೂರದ ಪ್ರತಿಷ್ಠಿತ ಆಸ್ಪತ್ರೆ ಡಾಕ್ಟರ್ ಉತ್ತಮ ಸೇವೆ ಮಾಡಿದ್ದು ಸಂಜೆ 5-10 ಆಗುತ್ತ ಇದ್ದಂತೆ ಮೂಡಿಗೆರೆ ಆಸ್ಪತ್ರೆ ಸಿಬ್ಬಂದಿ ನಮಗೆ ಟೈಮ್ ಆಯ್ತು ಅಂತ ಹಾಕಿದ್ದ ಟೇಬಲ್. ಚೇರ್ ಗಳನ್ನು ತೆಗೆದು ಹೋಗಿದ್ದು ನಾರಾಯಣ ಆಸ್ಪತ್ರೆ ಡಾಕ್ಟರ್ ಮತ್ತು ಸಿಬ್ಬಂದಿಗಳು ನಿಂತುಕೊಂಡು ಸುಮಾರು 6.30. ರವರೆಗೆ ಹೃದಯ ಸಂಬಂಧೀ ತಪಾಸಣೆ ಮಾಡುತ್ತಾ ನಿಂತುಕೊಂಡೆ ರಿಪೋರ್ಟ್ ನೋಡಿ ಕಳಿಸಿದ ದೃಶ್ಯ ನಿಜಕ್ಕೂ ಮೂಡಿಗೆರೆ ಜನತೆ ತಲೆ ತಗ್ಗಿಸುವಂತಿತ್ತು. ನಾನು ಹೃದಯ ಸಂಬಂಧೀ ತಪಾಸಣೆಗೆ ಹೋಗಿ ನಾ ಕಂಡ ದೃಶ್ಯಗಳು
ಲೋಕೇಶ್ ಬೆಟ್ಟಗೆರೆ

