day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮಕ್ಕಳಿಗೆ ನಮ್ಮ ಸಂಸ್ಕೃತಿಗಳ ಪರಿಚಯವಾಗಬೇಕು ನಮ್ಮ ತಂದೆ ಮತ್ತು ತಾಯಿ ನಮಗೆ ರೋಲ್ ಮಾಡೆಲ್ ಆಗಬೇಕೆ#avintvcom – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ಮಕ್ಕಳಿಗೆ ನಮ್ಮ ಸಂಸ್ಕೃತಿಗಳ ಪರಿಚಯವಾಗಬೇಕು ನಮ್ಮ ತಂದೆ ಮತ್ತು ತಾಯಿ ನಮಗೆ ರೋಲ್ ಮಾಡೆಲ್ ಆಗಬೇಕೆ#avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಚಿಕ್ಕಮಗಳೂರು: *ಮಕ್ಕಳಿಗೆ ನಮ್ಮ ಸಂಸ್ಕೃತಿಗಳ ಪರಿಚಯವಾಗಬೇಕು ನಮ್ಮ ತಂದೆ ಮತ್ತು ತಾಯಿ ನಮಗೆ ರೋಲ್ ಮಾಡೆಲ್ ಆಗಬೇಕೆ ವಿನಃ ಬೇರೆಯವರು ಅಲ್ಲ. ಅವರ ಅದರ್ಶಗಳು ಮತ್ತು ಉತ್ತಮ ಚಿಂತನೆಗಳು ನಮಗೆ ದಾರಿ ದೀಪವಾಗುತ್ತದೆ ಎಂದು ಉಪನ್ಯಾಸಕಿ ಗಿರಿಜಾ ಮಾಲಿ ಪಾಟೀಲ ತಿಳಿಸಿದರು*

ಯುವ ವಾಗ್ಮಿಗಳ ಬಳಗ ಆಯೋಜಿಸಿದ್ದ ರಾಜ್ಯ ಮಟ್ಟದ ಚರ್ಚಾಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲರಲ್ಲೂ ಒಳ್ಳೆಯತನ ಇರುತ್ತದೆ ಅಂತಹ ಒಳ್ಳೆಯ ತನಗಳನ್ನು ನಾವು ಅಯ್ಕೆ ಮಾಡಿಕೊಳ್ಳಬೇಕು ಗುರು ಹಿರಿಯರಿಗೆ ಗೌರವವನ್ನು ನೀಡಬೇಕು, ಶಾಲೆಗಳಲ್ಲಿ ಸಮಯಕ್ಕೆ ಹೆಚ್ಚು ಮಹತ್ವ ಕೊಡಬೇಕು. ಪ್ರತಿಯೊಬ್ಬರೂ ಮುಂದಿನ ಗುರಿ ಇರಿಸಿಕೊಂಡು ಕರ್ಮ ಯೋಗಿಗಳಾಗಬೇಕು ಆಗ ಮಾತ್ರ ಉನ್ನತವಾದ ಸ್ಥಾನ ಅಲಂಕರಿಸಲು ಸಾಧ್ಯ. ಯಾವ ಕಾರಣಕ್ಕೂ ಇನ್ನೊಬ್ಬರನ್ನು ನೋಡಿ ಅಸೂಯೆ ಪಡಬಾರದು ಬದಲಿಗೆ ನಾವು ಅವರಂತಾಗಬೇಕು ಎಂಬ ಛಲವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಆಗ ನಮ್ಮ ಗುರಿಯನ್ನು ಮುಟ್ಟಲು ಸಾಧ್ಯ ಎಂದು ತಿಳಿಸಿದರು.

ಹಿಂದೆದಿಗಿಂತಲೂ ಇತ್ತೀಚೆಗೆ ಶೈಕ್ಷಣಿಕವಾಗಿ ಅತಿಹೆಚ್ಚು ಪೈಪೋಟಿ ನಿರಂತರವಾಗಿ ನಡೆಯುತ್ತಲೆ ಬರುತ್ತಿದೆ. ವಿದ್ಯಾರ್ಥಿಗಳು ಓದಿನ ಆಸಕ್ತಿ ತೋರುವ ಮೂಲಕ ರ‍್ಯಾಂಕ್ ಪಟ್ಟವನ್ನು ತಮ್ಮ ಕಿಸೆಯಲ್ಲಿ ಭದ್ರಪಡಿಸಿಕೊಳ್ಳುತ್ತಿದ್ದಾರೆ. ನಾವೆಲ್ಲರು ಸ್ಪರ್ಧಾತ್ಮಕ ಯುಗದಲ್ಲಿ ಇರುವುದರಿಂದ ದ್ವಿತೀಯ ಪಿಯುಸಿ ಪರೀಕ್ಷೆಯು ಅನೇಕ ಉದ್ಯೋಗಗಳ ಪ್ರವೇಶಾತಿಯ ಮೂಲವಾಗಿದೆ. ಎಲ್ಲರನ್ನೂ ಉತೀರ್ಣಗೊಳಿಸಿರುವುದು ಸದ್ಯದ ಪರಿಸ್ಥಿತಿಗೆ ಸರಿಯೆನಿಸಿದರು ಮುಂದಿನ ದಿನಗಳಲ್ಲಿ ಹೆಚ್ಚು ನಿರುದ್ಯೋಗದ ಸಮಸ್ಯೆಯನ್ನು ಎದುರಿಸಲು ರಾಜ್ಯ ಮತ್ತು ರಾಷ್ಟ್ರ ಸರ್ಕಾರಗಳು ಈಗಿನಿಂದಲೇ ಸಿದ್ಧತೆ ನಡೆಸಬೇಕಾಗಿದೆ ಎಂದು ಪ್ರಾಧ್ಯಾಪಕ ನವೀನ್ ಕುಮಾರ್ ಕೆ. ಎಸ್. ಅಭಿಪ್ರಾಯ ವ್ಯಕ್ತಪಡಿಸಿದರು.

ಜೀವನದಲ್ಲಿ ಸೋಲು ಆಯಿತೆನ್ನುವ ಹಿಂಜರಿಕೆ ಬೇಡ. ಇಂದು ಅವಕಾಶ ಕೈತಪ್ಪಿದೆ ಎಂದು ಕೊರಗಿ ಕೂರುವ ಮೂಲಕ ಮಾನಸಿಕ ಸಮಸ್ಯೆಗಳೇ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಸಾಧಕನಾಗಲು, ಸೋಲನ್ನು ಗೆಲುವಾಗಿ ಪರಿವರ್ತತಿಸುವ ಕೆಲ ಸಾಧಕರ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದರ ಜತೆಗೆ ಗೆಲುವ ಮತ್ತು ಸೋಲಿನ ಪಾಠಗಳನ್ನು ಕಲಿಸಲು ಕೊರೋನದಂತಹ ಸಂದಿಗ್ದ ಪರಿಸ್ಥಿತಿ ಸಹಕಾರಿಯಾಗಿದೆ ಎಂದು ಚಲನಚಿತ್ರ ನಟಿ ಅಜ್ಜಂಪುರ ಎಸ್. ಶೃತಿ ತಿಳಿಸಿದರು.

ಕೋವಿಡ್-19 ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆ ನಮ್ಮ ದೇಶದ ಮುಂದಿನ ಪ್ರತಿಭಾವಂತ ಮಕ್ಕಳ ಜೀವ ರಕ್ಷಣೆಯ ಸಲುವಾಗಿ ಸಧ್ಯದ ಪರಿಸ್ಥಿಯ ಅನುಗುಣವಾಗಿ ಶೈಕ್ಷಣಿಕ ಉತ್ತೀರ್ಣದ ಮಾರ್ಗವನ್ನು ಸರ್ಕಾರ ಕೈಗೊಂಡಿದೆ. ಜೀವ ಇದ್ದರೆ ಜೀವನ ಸಾಗಿಸಲು ಸಾಧ್ಯವೆಂದು ತೀರ್ಪುಗಾರ ಎಸ್. ಪಿ. ಕ್ಯಾತೇಗೌಡ ತಿಳಿಸಿದರು.

ಮೊದಲ ಸುತ್ತಿನ ಚರ್ಚಾಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ನಿರೂಪಣೆ, ಭಾಷಾ ಶೈಲಿ, ಸ್ಪಷ್ಟತೆ ಮತ್ತು ಭಾಷಾ ಶುದ್ಧತೆಯ ಆಧಾರದ ಮೇಲೆ ಅಂತಿಮ ಸುತ್ತಿಗೆ 10 ಜನರನ್ನು ಆಯ್ಕೆಮಾಡಿ ಅವರಲ್ಲಿ ವಿಷಯದ ನಿಖರತೆಯ ಕುರಿತಾಗಿ ತೀರ್ಪುಗಾರರು ಅವರ ಚರ್ಚಾವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೋತ್ತರ ನಡೆಸುವ ಮೂಲಕ ನವೀನ ಆರ್. ಭಟ್, ನಂದನ್ ಎಸ್. ಭಟ್ ಮತ್ತು ಸಾದಿಕ್ ಅಹಮದ್ ಎಂ ನದಾಫ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಸಿದರು. ಪ್ರಗತಿ ಶೃಂಗೇರಿ ಹಾಗು ಸೌಂದರ್ಯ ಆರ್ ಎಂ. ಸಮಾಧಾನಕರ ಸ್ಥಾನಕ್ಕೆ ತೀರ್ಪುಗಾರರ ತಂಡವು ಆಯ್ಕೆಮಾಡಿದರು.

ಪ್ರಾಸ್ತಾವಿಕ ನುಡಿಗಳನ್ನು ಆಯೋಜಕ ದೀಕ್ಷಿತ್ ನಾಯರ್ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಮೇಘನಾ ಎಂ. ಅವರು ಸ್ಪರ್ಧಿಗಳಿಗೆ ಕಾರ್ಯಾಗಾರ ನಡೆಸುವ ಮೂಲಕ ಯಶಸ್ವಿ ಚರ್ಚಾಪುಟವಿನ ಲಕ್ಷಣಗಳನ್ನು ತಿಳಿಸಿದರು. ಆನಂದ್ ಎಂ. ಚೇತನ ವಿ ರಾಜ್ ಮತ್ತಿತರರಿದ್ದರು. ತೇಜಸ್ವಿನಿ ಎಂ. ಎಸ್. ಅವರು ಪ್ರಾರ್ಥಿಸಿ, ಪೂಜಾ ಎಂ. ಪಿ. ವಂದಿಸಿ, ಏಕತಾ ಭಟ್ ಅವರು ನಿರೂಪಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಗೆ ಹೊಸ ಮೈಲಿಗಲ್ಲು
ನವೀನ ಆರ್. ಭಟ್. ಪ್ರಥಮ ಬಹುಮಾನ ವಿಜೇತ.

“ರಾಷ್ಟ್ರದ ಅಭಿವೃದ್ಧಿಯನ್ನು ಅಳೆಯೋದು ಬೆಳ್ಳಿ ಬಂಗಾರದಿಂದಲ್ಲ, ಅಲ್ಲಿನ ಉತ್ತಮ ನಾಗರೀಕರಿಂದ. ಅವರನ್ನು ರೂಪಿಸಬಲ್ಲ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ. ಶಿಕ್ಷಣ ವ್ಯಕ್ತಿಯ ಸಮತೋಲನವನ್ನು ಕಾಪಾಡುವಲ್ಲಿ ಜ್ಞಾನದ ಜತೆಗೆ ಸ್ವಾವಲಂಭಿಯಾಗಿಸುವಲ್ಲಿ ಯಶಸ್ವಿಯಾಗುತ್ತದೆ. ಅಂಕಪಟ್ಟಿಯು ವಿದ್ಯಾರ್ಥಿಯ ಅಂತಿಮ ಮಾನದಂಡವಲ್ಲ. ಪ್ರಸ್ತುತ ಪರೀಕ್ಷೆಯನ್ನು ರದ್ದು ಪಡಿಸಿರುವುದು ರಾಷ್ಟ್ರೀಯ ನೂತನ ಶಿಕ್ಷಣ ನೀತಿಗೆ ಒಂದು ಹೊಸ ಮೈಲಿಗಲ್ಲಾಗುತ್ತದೆ.”

ಬದುಕಿಗಾಗಿ ಶಿಕ್ಷಣವೇ ಹೊರತು; ಶಿಕ್ಷಣವೇ ಬದುಕಲ್ಲ:
ಸಾದಿಕ್ ಅಹಮದ್ ಎಂ ನದಾಫ್. ತೃತೀಯ ಬಹುಮಾನ ವಿಜೇತ.

“ನಾವು ಆರೋಗ್ಯವಾಗಿದ್ದರೆ ಭವಿಷ್ಯದಲ್ಲಿ ಇಂತಹ ಅನೇಕ ಪರೀಕ್ಷೆಗಳನ್ನು ಎದುರಿಸಬಹುದು. ನಮ್ಮ ಪ್ರತಿಭೆ ಮತ್ತು ಕೌಶಲ್ಯಕ್ಕೆ ಒಂದು ನೆಲೆಸಿಗುತ್ತದೆ. ಜೀವವೇ ಇಲ್ಲದಿದ್ದಾಗ ಎಲ್ಲಿ ಸಾಧ್ಯ. ಸರ್ಕಾರವು ಸಮಂಜಸವಾದ ನಿರ್ಧಾರವನ್ನು ತೆಗೆದುಕೊಂಡಿದ್ದು. ರೋಗಕ್ಕೆ ಒಂದು ಜೀವ ಮಾತ್ರ, ಸರ್ಕಾರಕ್ಕೆ ನಾವು ಒಂದು ಸಂಖ್ಯೆ ಮಾತ್ರ; ನಮ್ಮ ಕುಟುಂಬಕ್ಕೆ ನಾವೇ ಆಧಾರಸ್ತಂಭವಾಗಿರುವಾಗ ಮುಂದಿನ ಪರಿಸ್ಥಿಯ ಏನು ಎಂಬುದರ ಕುರಿತು ಸೂಕ್ಷ್ಮವಾಗಿ ಪ್ರಶ್ನೆ ಮೂಡುತ್ತದೆ.”

ವಿದ್ಯಾರ್ಥಿಗಳ ಭವಿಷ್ಯದ ಕುರಿತು ಗೊಂದಲ:
ಪ್ರಗತಿ ಶೃಂಗೇರಿ. ಸಮಾಧಾಕರ ಬಹುಮಾನ ವಿಜೇತೆ.

“ಒಳ್ಳೆಯ ಅಂಕಗಳಿಸಿ ಉತ್ತಮ ಕಾಲೇಜನ್ನು ಆಯ್ಕೆ ಮಾಡಿಕೊಳ್ಳವ ಹಂಬಲದಲ್ಲಿರುವ ವಿದ್ಯಾರ್ಥಿಗಳು, ಪ್ರಥಮ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಲು ಸಾಧ್ಯವಾಗದಿದ್ದಾಗ ಇದೊಂದು ಸಮಸ್ಯೆಯ ಘಟ್ಟವಾಗಿ ಪರಿಣಮಿಸುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದಲ್ಲಿ ಗೊಂದಲ ಸೃಷ್ಟಿಯಾಗಿರುವುದರಿಂದ ಮಾನಸಿಕವಾಗಿ ದಿನೇ ದಿನೇ ಕುಗ್ಗುತಿದ್ದಾರೆ. ಸರ್ಕಾರಿಯ ವಿವಿಧ ಹುದ್ದೆಗಳನ್ನು ಅರಸುವ ಆಕಾಂಕ್ಷಿಗಳನ್ನು ಯಾವ ಆಧಾರದ ಮೇಲೆ ಪರಿಗಣಿಸಲಾಗುತ್ತದೆಯೆಂದು ಈಗಷ್ಟೆ ಕಾದು ನೋಡಬೇಕಿದೆ.”

ಏನಿದು ವಾಗ್ಮಿಗಳ ಬಳಗ: ಕೋರೊನ ಸಂದಿಗ್ಧ ಪರಿಸ್ಥಿತಿಯು ಸ್ಪೂರ್ತಿಯಾಗಿ, ಕೆಲ ಆಸ್ತಕ ಯುವಕರು ಸೇರಿಕೊಂಡು ಕಲೆ, ಸಾಹಿತ್ಯದಂತಹ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಮನಸ್ಸಿನ ತಲ್ಲಣಗಳಿಗೆ ಕೊಂಚ ವಿರಾಮ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದು, ರಾಜ್ಯಮಟ್ಟದ ಕವಿಗೋಷ್ಠಿ, ಗೀತ ಗಾನಯಾನ ಕಾರ್ಯಕ್ರಮವನ್ನು ಆಯೋಜಿಸುವ ಪರಿಕಲ್ಪನೆ ದೀಕ್ಷಿತ್ ನಾಯರ್ ಮತ್ತು ಆತನ ಸ್ನೇಹಿತರದ್ದು.

ಬರಹ ಕೃಪೆ.
ಪೃಥ್ವಿ ಸೂರಿ, ಚಿಕ್ಕಮಗಳೂರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author