*ಕಳಸಕ್ಕೆ ಕೊವಿಡ್ ಕೇರ್ ಸೆಂಟರ್*ಸಮುದಾಯ ಆರೋಗ್ಯ ಕೇಂದ್ರ #avintvcom
1 min read![Featured Video Play Icon](https://avintv.com/wp-content/plugins/featured-video-plus/img/playicon.png)
*ಕಳಸಕ್ಕೆ ಕೊವಿಡ್ ಕೇರ್ ಸೆಂಟರ್*
ಕಳಸ ಜನರ ಬೇಡಿಕೆಯಾದ ಕೋವಿಡ್ ಕೇರ್ ಸೆಂಟರ್ ಸೋಮವಾರದಿಂದ ಇಲ್ಲಿನ ಸಮುದಾಯ ಆರೋಗ್ಯ
ಕೇಂದ್ರದಲ್ಲಿ ಕಾರ್ಯಾರಂಭಿಸಲಿದೆ.
ಕಳಸದಲ್ಲಿ ಕಡಿಮೆ ಪ್ರಮಾಣದ ಸೋಂಕಿಗೆ ಒಳಗಾದ ರೋಗಿಗಳು ಮತ್ತು ಮನೆಯಲ್ಲಿ
ಪ್ರತ್ಯೇಕವಾಗಿ ಇರಲಾರದ ರೋಗಿಗಳ ಅನುಕೂಲಕ್ಕೆಂದು ಕೋವಿಡ್ ಕೇರ್ ಸೆಂಟರ್
ಆರಂಭಿಸಲಾಗುತ್ತಿದೆ ಎಂದು ತಾಲ್ಲೂಕು ಕೋವಿಡ್ ಅಧಿಕಾರಿ ಡಾ.ಮಧುಸೂಧನ್ ಮಾಹಿತಿ
ನೀಡಿದ್ದಾರೆ.
10 ಆಕ್ಸಿಜನ್ ಬೆಡ್‍ಗಳು ಮತ್ತು 20 ಸಾಮಾನ್ಯ ಬೆಡ್‍ಗಳು ಇರುವ ಈ ಆಸ್ಪತ್ರೆಗೆ
ದಾಖಲಾಗಲು ಬಯಸುವ ರೋಗಿಗಳು ತಮ್ಮ ಬೆಡ್‍ಶೀಟ್, ತಟ್ಟೆ, ಲೋಟ, ಸೋಪು,ಟೂತ್ ಬ್ರಶ್
ಮತ್ತು ಅವರು ಈಗ ಬಳಸುತ್ತಿರುವ ಔಷಧಿ ತರಬೇಕು.ಆಸ್ಪತ್ರೆಯ ಒಳಗೆ ರೋಗಿಯ ಕಡೆಯವರಿಗೆ
ಪ್ರವೇಶ ಇರುವುದಿಲ್ಲ ಎಂದು ವೈದ್ಯಾಧಿಕಾರಿ ಅನುಗೌರಿ ಮಾಹಿತಿ ನೀಡಿದ್ದಾರೆ.
ಕೋವಿಡ್ ಕೇರ್ ಸೆಂಟರ್‍ನಲ್ಲಿ ಮೂರು ಪಾಳಿಗಳಲ್ಲಿ ದಿನದ 24 ಗಂಟೆಯೂ ವೈದ್ಯರು ಮತ್ತು
ಸಿಬ್ಬಂದಿ ರೋಗಿಗಳ ಮೇಲೆ ನಿಗಾ ಇಡುತ್ತಾರೆ.ಇದೇ ಕಾರಣಕ್ಕಾಗಿ ಕಳಸ ಆಸ್ಪತ್ರೆಗೆ
ನಿಡುವಾಳೆ, ಸುಂಕಸಾಲೆ, ಬಾಳೆಹೊಳೆ ಮತ್ತು ಹಿರೇಬೈಲು ವೈದ್ಯರನ್ನೂ ನಿಯೋಜಿಸಲಾಗಿದೆ.
ಕೋವಿಡ್ ರೋಗಿಗಳಿಗೆ ಸ್ಥಳೀಯ ದಾನಿಗಳ ನೆರವಿನಿಂದ ಮೂರು ಹೊತ್ತು ಊಟ, ತಿಂಡಿ..ಕಾಫಿ, ಟೀ
ಮತ್ತು ಬಿಸಿ ನೀರು ಪೂರೈಸಲು ಯೋಜನೆ ಸಿದ್ಧವಾಗುತ್ತಿದೆ.ಲಸಿಕೆ ಹಾಕುವ ಕೆಲಸವನ್ನು
ಪಕ್ಕದ ಪ್ರವಾಸಿ ಮಂದಿರ ಮತ್ತು ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ವರ್ಗಾವಣೆ
ಮಾಡಲಾಗುತ್ತದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.