*ಪ್ರಜ್ವಲಿತೋ ಜ್ಞಾನಮಯ ಪ್ರದೀಪಃ*
1 min read
ಬರಹ.

ಕವಿಯತ್ರಿ ಶೋಭಾ ಶ್ರೀಕಾಂತ್ ಪಾಟೀಲ್.
ದಾಂಡೇಲಿ,ಉತ್ತರ ಕನ್ನಡ.
ತನ್ನ ಸೊಬಗಿನಿಂದ ಝಗಝಗಿಸುತ ಕೈಗಳನ್ನು ಚಾಚಿಕೊಂಡು ಎಲ್ಲರನು ನಮ್ಮವರೆನುತ ಭಾವಿಸಿದ ದಿನಗಳಲಿ ಊಹಿಸಲಾರದ ಪಾಶ್ಚಾತ್ಯರ ಆಗಮನ ದೇಶದ ಇತಿಹಾಸಕ್ಕೊಂದು ದುರಂತ ತಿರುವು .

ವಾಣಿಜ್ಯ ವಹಿವಾಟೆಂದು ಈಸ್ಟ್ ಇಂಡಿಯಾ ಎಂಬ ಕಂಪನಿಗಳು ರೂಪ ತಾಳಿ ಭೂತಾಯಿಯ ಬಸಿರಿನಲಿ ಬಿರಿತ ಬೀಜಗಳನು ಗುಲಾಮರನ್ನಾಗಿಸಿ ಸಂಚೊಂದು ಹೂಡಿ ಅವನಿಯನ್ನಾಳುವೆವೆನುತ ರಕ್ಕಸರ ಛಾಯೆ ಮೂಡಿತು.
ಸ್ವಾತಂತ್ರ್ಯದ ಕಿಚ್ಚು ಹುಚ್ಚೆದ್ದು ಕುಣಿಯಿತು ದೇಶಪ್ರೇಮಿಗಳ ಕಣ್ಗಳಲಿ ರೋಷವು ಪ್ರಜ್ವಲಿಸಿತು ಬೆಂಕಿಯ ಕಿಡಿಗಳಂತೆ ಜಲಿಯನ್ ವಾಲಾಬಾಗಿನಿಂದ ರಾಷ್ಟ್ರೀಯ ಚಳುವಳಿ ತನಕ ಹೇಳಲಸಾಧ್ಯವಾದ ಯುದ್ಧ ತಾಳಿದವು ಬಿರುಗಾಳಿಯಂತೆ.

ರಾಯಣ್ಣ,ನೇತಾಜಿ,ಭಗತ್ ಸಿಂಗ್,ರಾಣಿಚೆನ್ನಮ್ಮ,ಅಬ್ಬಕ್ಕ,ಟಿಪ್ಪು,ಅಹಿಂಸಾವಾದಿ ಮಹಾತ್ಮಗಾಂಧಿ,ವಲ್ಲಭಭಾಯಿ ಅನೇಕರು ಒಂದೊಂದು ಹೆಸರಿನೊಳಗೊಂದೊಂದು ಲಕ್ಷವೀರರು ಪ್ರಾಣತೆತ್ತರು ಸ್ವಾತಂತ್ರ್ಯವ ತಂದುಕೊಡಲು.
ರಾಯಣ್ಣನ ನುಡಿಯಂತೆ,ದಕ್ಕಿತು ಸ್ವಾತಂತ್ರ್ಯ ಅತ್ತಿ ಹಣ್ಣಿನಲ್ಲಿರುವ ಹುಳುಗಳನು ತೆಗೆದಂತೆ .ಈಗ,ಅದೆಲ್ಲಿಂದಲೋ ಸುತ್ತುವರಿದಿವೆ,ಮೈಮರೆಸಿವೆ ಪಾರತಂತ್ರ್ಯದ ಹಗ್ಗಗಳು ಒಂದಲ್ಲ ಎರಡಲ್ಲ ಸಾವಿರ ಸಾವಿರ ಹಗ್ಗಗಳು..
ಪುನಃ ಪ್ರಾರಂಭಿಸಬೇಕೇ ಯುದ್ಧವನು? ಬದುಕಲು,ಬದುಕಿಸಲು.
ಎಲ್ಲಿದೆ ಸ್ವಾತಂತ್ರ್ಯ?
ಎಲ್ಲಿದೆ ಸ್ವಾತಂತ್ರ್ಯ?
ಅರಿವಿಗೆ ಬಂದೂಬರದ
ಹಾಗೆ ಜಾರುತಿದೆ.
ಸ್ವಾತಂತ್ರ್ಯದ ಕಿಚ್ಚು ಬೆಳಗಬೇಕಿದೆ. ಅದಕೀಗ,
ನಮ್ಮ ನೆತ್ತರ ಎಣ್ಣೆ ಬೇಕಿದೆ.
ನಮ್ಮನ್ನು ನಾವು ಅರಿಯಬೇಕಿದೆ
ಭಾರತ ನವನವೋನ್ಮೇಶವಾಗಿ
ಪ್ರಜ್ವಲಿಸಲು..
ಪ್ರಜ್ವಲಿತೋ ಜ್ಞಾನಮಯ ಪ್ರದೀಪಃ.
ಸಂಗ್ರಹ.

ಸಿದ್ದಿಕ್ ಚಕ್ಕಮಕ್ಕಿ.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

