लाइव कैलेंडर

October 2026
M T W T F S S
 1234
567891011
12131415161718
19202122232425
262728293031  
27/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಗುಂಪುಗಳ ಜಗಳ | ‎ಬ್ಲಾಕ್ ಅಧ್ಯಕ್ಷರ ನೇಮಕ ಪ್ರಕ್ರಿಯೆ….

1 min read

ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಗುಂಪುಗಳ ಜಗಳ |
‎ಬ್ಲಾಕ್ ಅಧ್ಯಕ್ಷರ ನೇಮಕ ಪ್ರಕ್ರಿಯೆ
ವೀಕ್ಷಕರ ಎದುರೇ ಹೊಯ್‌ಕೈ
‎ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಿಸುವ ಸಲುವಾಗಿ ಉಭಯ ಬಣಗಳಿಂದ ಆಕಾಂಕ್ಷಿಗಳ ಪಟ್ಟಿಯನ್ನು ಕೆಪಿಸಿಸಿಗೆ ಕೊಂಡೊಯ್ಯಲು ಶನಿವಾರ ಕಾಂಗ್ರೆಸ್ ಕಚೇರಿಯಲ್ಲಿ ವೀಕ್ಷಕರು ನಡೆಸಿದ ಸಭೆಯಲ್ಲೇ ಎರಡು ಗುಂಪುಗಳ ನಡುವೆ ಹೊಯ್ ಕೈ ನಡೆದಿದ್ದು ಹಿರಿಯರು ಸಮಾಧಾನಪಡಿಸಿದರು.
‎

‎ವೀಕ್ಷಕರಾಗಿ ಆಗಮಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಕೆಪಿಸಿಸಿ ಕಾರ್ಯದರ್ಶಿಗಳಾದ ಮೋಹನ್, ಉಸ್ಮಾನ್ ನೇತೃತ್ವದಲ್ಲಿ ಸಭೆ ನಡೆಯಿತು.
‎
‎ಬಣಕಲ್ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ನಯನಾ ಮೋಟಮ್ಮ ಆ ಅವರು ಶಾಸಕಿಯಾದ ಬಳಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಮಹಾಪರ್ವವೇ ನಡೆದಿದೆ. ಕ್ಷೇತ್ರದ ಜನ ಶಾಸಕರ ಪರವಾಗಿದ್ದಾರೆ. ಹಿರಿಯರ ಬಣದಲ್ಲಿ ಗುರುತಿಸಿಕೊಂಡವರು ಆಡಳಿತವನ್ನು ಅವರ ಹಿಡಿತಕ್ಕೆ ತೆಗೆದುಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ. ಇದನ್ನು ಶಾಸಕರು ತಿರಸ್ಕರಿಸಿದ್ದರಿಂದ ಪ್ರತ್ಯೇಕ ಬಣ ರಚಿಸಿಕೊಂಡಿದ್ದಾರೆ. ಸಮನ್ವಯ ಸಮಿತಿ ರಚಿಸುವಂತೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಪಕ್ಷದಲ್ಲಿ ಒಡಕು ಉಂಟಾಗಿದೆ ಎಂದು ವೀಕ್ಷಕರ ಗಮನಕ್ಕೆ ತಂದರು.
‎
‎ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಜಿ.ಸುರೇಂದ್ರ ಮಾತನಾಡಿ, ಒಂದು ವಾರದಲ್ಲಿ ಉತ್ತರ ನೀಡುವಂತೆ ನನಗೆ ಕೆಪಿಸಿಸಿಯಿಂದ ಶೋಕಾಸ್ ನೋಟಿಸ್ ನೀಡಿದ ದಿನವೇ ನನ್ನನ್ನು ವಜಾಗೊಳಿಸಿ ಬೇರೊಬ್ಬರನ್ನು ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದ್ದು ಸರಿಯಲ್ಲ. ಇದರ ಹಿಂದೆ ಶಾಸಕರ ಕೈವಾಡವಿದೆ. ನನ್ನನ್ನು ವಜಾಗೊಳಿಸಿದಂತೆ ಈಗಿನ ಹಂಗಾಮಿ ಅಧ್ಯಕ್ಷರನ್ನೂ ಒಂದೂವರೆ ತಿಂಗಳಲ್ಲೇ ವಜಾಗೊಳಿಸಿ ಮತ್ತೊಬ್ಬರನ್ನು ನೇಮಿಸಿದರೆ, ನನಗೆ ಅನ್ಯಾಯ ಮಾಡಿದಂತೆ ಹಂಗಾಮಿ ಅಧ್ಯಕ್ಷರಿಗೂ ಅನ್ಯಾಯವಾಗುತ್ತದೆ ಎಂದು ತಿಳಿಸುತ್ತಿದಂತೆ ಸಭೆಯಲ್ಲಿ ಗಲಾಟೆ ಆರಂಭವಾಯಿತು.
‎
‎ತಾಲೂಕು ಗ್ಯಾಂಟಿ ಯೋಜನೆ ಅನುಷ್ಠಾನ ಸಮಿತಿ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಮ್ ಮಾತನಾಡಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲದ ನನ್ನನ್ನು ನೇಮಕ ಮಾಡಲಾಗಿತ್ತು. ಏಕಾಏಕಿ ವಜಾಗೊಳಿಸಲಾಗಿದೆ. ನಂತರ ಕಿಕ್ ಔಟ್ ಮಾಡಲಾಗಿದೆ. ಪಕ್ಷದಿಂದಲೇ ನಮಗೆಲ್ಲ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
‎
‎ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಪಿ.ಮನು ಮಾತನಾಡಿ, ನಾವೆಲ್ಲ ಕಟ್ಟಿ ಬೆಳೆಸಿದ ಕಾಂಗ್ರೆಸ್‌ ಇನ್ನೊಂದು ಗುಂಪಿನಿಂದ ನಿರಂತರವಾಗಿ ಕಿರುಕುಳ ಅನುಭವಿಸುತ್ತಿರುವುದರಿಂದ ಕೆಪಿಸಿಸಿಗೆ ದೂರು ನೀಡಿದ್ದೇವೆ. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾಸ್ ಅವರು ಉಭಯ ಬಣದ ಸಭೆ ನಡೆಸಿ ಸಮನ್ವಯ ಸಮಿತಿ ರಚಿಸುವಂತೆ ಸೂಚಿಸಿದ್ದಾರೆ. ಇದುವರೆಗೂ ಸಮನ್ವಯ ಸಮಿತಿ ರಚಿಸಿಲ್ಲ. ನಾವು ನೀಡಿರುವ ದೂರನ್ನು ಕೆಪಿಸಿಸಿಯಿಂದ ಬಗೆಹರಿಸುವ ಮುನ್ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಮಾಡುವುದಾದರೂ ಯಾಕೆ? ನಮ್ಮ ಸಮಸ್ಯೆ ಬಗೆಹರಿದ ಬಳಿಕ ಅಧ್ಯಕ್ಷರ ನೇಮಕಾತಿ ಮಾಡಿ ಎಂದು ಒತ್ತಾಯಿಸಿದರು.
‎
‎ಹೀಗೆ ಸಭೆಯಲ್ಲಿ ಎರಡೂ ಗುಂಪಿನ ನಡುವೆ ಆರೋಪ-ಪತ್ಯಾರೋಪ ನಡೆದು ಶಾಸಕಿ ನಯನಾ ಮೋಟಮ್ಮ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರ ಬಣದವರಿಗೆ ನಾಲೈದು ಬಾರಿ ಹೊಯ್ ಕೈ ನಡೆಯಿತು.
‎

‎
‎ಮೂಡಿಗೆರೆ ಕಾಂಗ್ರೆಸ್ ಕಚೇರಿಯಲ್ಲಿ ಉಭಯ ಬಣಗಳ ಸಭೆ ನಡೆಯಿತು. ವೀಕ್ಷಕರಾದ ಗಪೂ‌ರ್, ಮೋಹನ್, ಉಸ್ಮಾನ್, ಮಂಜೇಗೌಡ, ಬಿ.ಬಿ.ನಿಂಗಯ್ಯ, ಎಂ.ಪಿ.ಕುಮಾರಸ್ವಾಮಿ, ಎಂ.ಪಿ.ಮನು, ಬಿ.ಎಸ್.ಜಯರಾಮ್, ಎಚ್.ಜಿ.ಸುರೇಂದ್ರ, ಮರಗುಂದ ಪ್ರಸನ್ನ ಇತರರಿದ್ದರು.
‎
‎ಪಕ್ಷದ ಗೆಲುವು ಗುರಿಯಾಗಲಿ
‎ಇನ್ನುಮುಂದೆ ಸಾಲು ಸಾಲಾಗಿ ಚುನಾವಣೆ ಎದುರಿಸ ಬೇಕಾಗಿದೆ. ಇದಕ್ಕೆ ಕಾರ್ಯಕರ್ತರು ಅಭಿಪ್ರಾಯ ಭೇದ ಮರೆತು ಪಕ್ಷವನ್ನು ಗೆಲ್ಲಿಸಲು ಸಜ್ಜಾಗಬೇಕು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ದೃಷ್ಟಿಯಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಗಾಗಿ ಕೆಪಿಸಿಸಿಯಿಂದ ಆದೇಶ ಬಂದಿರುವ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗುವವರು 40ರಿಂದ 60 ವರ್ಷ ವಯಸ್ಸಿನವರಾಗಬೇಕು. ಪಕ್ಷದಲ್ಲಿ ಗುಂಪುಗಾರಿಕೆ ಬೇಡ. 8 ಆಕಾಂಕ್ಷಿಗಳ ಹೆಸರನ್ನು ಪಟ್ಟಿ ಮಾಡಿ ವೀಕ್ಷಕರಿಗೆ ಕೊಡಿ. ಕೆಪಿಸಿಸಿ ಮುಖ್ಯಸ್ಥರು ತೀರ್ಮಾನಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ತಿಳಿಸಿದರು.

‎ಅನಗತ್ಯ ಗೊಂದಲ ಬೇಡ ಎಸ್‌ಐಆ‌ರ್ ಪ್ರಕ್ರಿಯೆಯಲ್ಲಿ ಉಂಟಾದ ಗೊಂದಲ,
‎
‎ವಿಪಕ್ಷಗಳಿಂದ ಕಾಂಗ್ರೆಸ್‌ ಮತ್ತು ಸರ್ಕಾರದ ವಿರುದ್ಧ ಅನಗತ್ಯ ಅರ್ಭಟದ ವಿರುದ್ಧ ಪಕ್ಷದ ಕಾರ್ಯಕರ್ತರು ಹೋರಾಟ ನಡೆಸಬೇಕು. ಅದನ್ನು ಬಿಟ್ಟು ಪಕ್ಷದಲ್ಲಿ ಗೊಂದಲ ಸೃಷ್ಟಿಸಿ ಜಗಳಕ್ಕಿಳಿಯಬಾರದು. ಇಂದಿರಾ ಗಾಂಧಿ ಅವರನ್ನು ಗೆಲ್ಲಿಸಿದ ಈ ಜಿಲ್ಲೆಯಲ್ಲಿ ಕಾಂಗ್ರೆಸ್‌ನಲ್ಲಿ ಒಡಕು ಇರಬಾರದು. ನ.15ರೊಳಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ವರಿಷ್ಠರು ನೇಮಿಸಲಿದ್ದಾರೆ. ಇಲ್ಲಿನ ಪ್ರಸ್ತುತ ಬೆಳವಣಿಗೆ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ವರದಿ ನೀಡಲಾಗುವುದು. ಅವರು ಗೊಂದಲ ಸರಿಪಡಿಸಲಿದ್ದಾರೆ ಎಂದು ವೀಕ್ಷಕ ಎಂ.ಎ.ಗಪೂರ್ ತಿಳಿಸಿದರು.
ಆಕಾಂಕ್ಷಿಗಳ ಪಟ್ಟಿ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ” ಹಿರಿಯರ ಬಣದಿಂದ ಕೆಂಜಿಗೆವಿನಯ್‌ ಕುಮಾ‌ರ್, ಮರಗುಂದ ಪ್ರಸನ್ನ, ಸುಂದರೇಶ್‌, ಕೆ.ಕೆ.ರಾಮಯ್ಯ, ಇರ್ಫಾನ್, ಶಾಸಕರ ಬಣದಿಂದ ಕುನ್ನಳ್ಳಿ ರವಿ, ಎಂ.ಎನ್. ಅಶ್ವತ್, ಎ.ಜಿ.ಸುಬ್ರಾಯ ಗೌಡ, ಸುಧೀರ್ ಚಕ್ರಮಣಿ ಅವರ ಹೆಸರನ್ನು ವೀಕ್ಷಕರಿಗೆ ನೀಡಲಾಯಿತು.

‎ಮಾಜಿ ಸಚಿವರಾದ ಮೋಟಮ್ಮ,  ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಎಂ.ಎಂ.ಲಕ್ಷಣ ಗೌಡ, ವಿನಯ್‌ಕುಮಾರ್, ಜಯರಾಮ್, ಸುರೇಂದ್ರ, ಮನು, ಮರಗುಂದ ಪ್ರಸನ್ನ, ಎ.ಜಿ.ಸುಬ್ರಾಯಗೌಡ, ಹೊಸಕೆರೆ ರಮೇಶ್, ಸುಬ್ರಹ್ಮಣ್ಯ, ಸುರೇಂದ್ರಉಗ್ಗೆಹಳ್ಳಿ, ಯು.ಎಚ್.ಹೇಮಶೇಖರ್,
ಕುನ್ನಳ್ಳಿ ರವಿ, ಜಿ.ಎಚ್.ಹಾಲಪ್ಪಗೌಡ,ನಿಶಾಂತ್ ಪಟೇಲ್, ಎಂ.ಎನ್.ಅಶ್ವತ್, ಎಂ.ಎ.ಹಂಝ, ಸಬ್ಲಿದೇವರಾಜ್, ದೀಕ್ಷಿತ್ ಕಣಚೂರು, ಸುಧೀರ್ ಚಕ್ರಮಣಿ, ಅಜ್ಜಲ್, ಯು.ಪಿ.ಜಗದೀಶ್, ಇರ್ಫಾನ್, ಸಿ.ಬಿ.ಶಂಕರ್, ಅಜೀಜ್ ಕೊಟ್ಟಿಗೆಹಾರ ಇತರರಿದ್ದರು.

About Author

Leave a Reply

Your email address will not be published. Required fields are marked *

You may have missed