लाइव कैलेंडर

October 2026
M T W T F S S
 1234
567891011
12131415161718
19202122232425
262728293031  
29/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲಾ ಸಮಿತಿ ವತಿಯಿಂದ ಮೂಡಿಗೆರೆಯಲ್ಲಿ ಮಾದಕ ವಸ್ತು ಹಾಗೂ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಬ್ರಹತ್ ಮೆರವಣಿಗೆ ಮತ್ತು ಸಾರ್ವಜನಿಕ ಸಮಾವೇಶವು ಯಶಸ್ವಿಯಾಗಿ ಜರುಗಿತು…..

1 min read

ಮೂಡಿಗೆರೆ: ಎಸ್‌ಕೆಎಸ್‌ಎಸ್‌ಎಫ್ (SKSSF) ವಿಖಾಯ ಚಿಕ್ಕಮಗಳೂರು ಜಿಲ್ಲಾ ಸಮಿತಿ ವತಿಯಿಂದ ಮೂಡಿಗೆರೆಯಲ್ಲಿ ಮಾದಕ ವಸ್ತು ಹಾಗೂ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಬ್ರಹತ್ ಮೆರವಣಿಗೆ ಮತ್ತು ಸಾರ್ವಜನಿಕ ಸಮಾವೇಶವು ಯಶಸ್ವಿಯಾಗಿ ಜರುಗಿತು.
ಮೂಡಿಗೆರೆಯ ವಿವಿಧ ರಸ್ತೆಗಳ ಮೂಲಕ ಸಾಗಿದ ಮೆರವಣಿಗೆಯು ಪಟ್ಟಣದ ಲಯನ್ಸ್ ವೃತ್ತದ ಬಳಿ ತಲುಪಿ ಬೃಹತ್ ಸಮಾವೇಶವಾಗಿ ರೂಪುಗೊಂಡಿತು. ಕಾರ್ಯಕ್ರಮದಲ್ಲಿ ಮಾದಕ ವ್ಯಸನದಿಂದ ಯುವಜನತೆ ಮತ್ತು ಸಮಾಜಕ್ಕಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಬಿಳಗುಳ ಖತೀಬರಾದ ಸಲೀಮ್ ಅರ್ಶದಿ ಅವರು ದುವಾ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜಿಲ್ಲಾ ಕಾರ್ಯದರ್ಶಿ ಝೈದ್ ಫೈಝಿ ಖಲಂದರಿ ಸ್ವಾಗತ ಕೋರಿದರು,
ಮೂಡಿಗೆರೆ ಕೇಂದ್ರ ಖತೀಬರಾದ ಮುಸ್ತಫ ಯಾಮನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷರಾದ ಸ್ವಾದಿಕ್ ಅಝ್ಹರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಿನಾನ್ ಫೈಝಿ ಖಲಂದರಿ ಅವರು ನೆರೆದಿದ್ದವರಿಗೆ ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞೆ ಬೋಧಿಸಿದರು.
ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಅವರು ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುತ್ತಾ ಮುಖ್ಯ ಭಾಷಣ ಮಾಡಿದರು.
ಶಶಿ ಕುಮಾರ್ ಟಿ.ಸಿ. ಅವರು ಆರೋಗ್ಯ ಶಿಬಿರದ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಜಿಲ್ಲಾ ಸಂಘಟನ ಕಾರ್ಯದರ್ಶಿ ಯಾಸೀರ್ ಚಕಮಕ್ಕಿ ವಂದನಾರ್ಪಣೆಗೈದರು ಮತ್ತು ವಿಖಾಯ ನಾಯಕ ರಹೀಮ್ ಅಝ್ಹರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾವೇಶದಲ್ಲಿ ಕರ್ನಾಟಕ ವಿಖಾಯ ಚೇರ್ಮನ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಕೇಂದ್ರ ವಿದ್ಯಾಭ್ಯಾಸ ಸದಸ್ಯರಾದ ಸಿ.ಕೆ. ಇಬ್ರಾಹಿಂ ಹಾಜಿ, ಪ್ರಮುಖರಾದ ಎ.ಸಿ. ಅಯೂಬ್ ಹಾಜಿ, ಜಂಇಯತುಲ್ ಮುಅಲ್ಲಿಮೀನ್ ಜಿಲ್ಲಾ ಕಾರ್ಯದರ್ಶಿ ಬದುರುದೀನ್ ದಾರಿಮಿ ಸಕಲೇಶಪುರ, ಎಸ್‌ಕೆಎಸ್‌ಎಸ್‌ಎಫ್ ವಲಯ ಅಧ್ಯಕ್ಷರಾದ ಶರೀಫ್ ಬಿಳಗುಳ, ಕಾರ್ಯದರ್ಶಿ ನಿಯಾಝ್ ಮೂಡಿಗೆರೆ, ಜಿಲ್ಲಾ ಮಾಜಿ ಅಧ್ಯಕ್ಷರಾದ ಅಝೀಝ್ ಅರಬಿ, ಜಿಲ್ಲಾ ಕೋಶಾಧಿಕಾರಿ ವಾಹಿದ್ ಮೂಡಿಗೆರೆ ಹಾಸನ ವಿಖಾಯ ನಾಯಕರು ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ವರದಿ….ಬಾರತಿಉಮೇಶ್ ರಾಜ್ ಅರಸು..

ಚಿಕ್ಕಮಗಳೂರು.

About Author

More Stories

Leave a Reply

Your email address will not be published. Required fields are marked *

You may have missed