लाइव कैलेंडर

October 2026
M T W T F S S
 1234
567891011
12131415161718
19202122232425
262728293031  
25/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ತಾಲೂಕಿನಲ್ಲಿ ಹಸಿರು ಫೌಂಡೇಶನ್ ರಿ ವತಿಯಿಂದ ನಡೆದ ಪರಿಸರ ಜಾಗೃತಿ ಹಸಿರು ವಾಕಾಥಾನ್ -2026 ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು…..

1 min read

ಮೂಡಿಗೆರೆ ತಾಲೂಕಿನಲ್ಲಿ ಹಸಿರು ಫೌಂಡೇಶನ್ ರಿ ವತಿಯಿಂದ ನಡೆದ ಪರಿಸರ ಜಾಗೃತಿ ಹಸಿರು ವಾಕಾಥಾನ್ -2026 ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಪರಿಸರ ಆಸಕ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು..
ವಿ ಜಿ ಸಿದ್ದಾರ್ಥ ಹೆಗಡೆಯವರ ಪ್ರತಿಮೆಗೆ ಹೂವಿನ ಹಾರ ಹಾಕುವುದರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಸ್ತಾವಿಕ ನುಡಿಗಳನ್ನು ಹಸಿರು ಫೌಂಡೇಶನ್ ಅಧ್ಯಕ್ಷರು ರತನ್ ಊರುಬಗೆ ಮಾತನಾಡಿದರು
ಮುಖ್ಯ ಅಥಿತಿಗಳಾಗಿ ಮಾಜಿ ಉಪಾಸಭಾಪತಿ ಎಂ ಕೆ ಪ್ರಾಣೇಶ್ ರವರು ಭಾಗವಸಿ ವಾಕಾಥಾನ್ -2026 ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು..
ಹಸಿರು ಫೌಂಡೇಶನ್ ನಡೆಸಿಕೊಂಡು ಬರುತ್ತಿರುವ ಪರಿಸರ ಜಾಗೃತಿ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.
ಯಾವುದೇ ಅಡ್ಡದಾರಿ ಹಿಡಿಯದೆ ಪರಿಸರವೇ ಉಸಿರು ಎಂದು ಮುಂದುವರೆದರೆ ಮುಂದೊಂದು ದಿನ ಹಸಿರು ಫೌಂಡೇಶನ್ ಸಂಸ್ಥೆ ದೊಡ್ಡ ಹೆಸರನ್ನು ಗಳಿಸುವುದು ನಿಶ್ಚಿತ ಎಂದು ಶ್ಲಾಘೀಸಿದರು, ಕಾರ್ಯಕ್ರಮ ಚಾಲನೆ ನೀಡಿ ಸ್ಪರ್ದಿಗಳು ಉತ್ಸಾಹದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದರು ಕಾರ್ಯಕ್ರಮದ ಕೊನೆಯ ಹಂತ ಬಡವನ ದಿಣ್ಣೆ ಗದ್ದೆ ಬೈಲು ಪ್ರವೇಶಿಸಿ ಪ್ರಥಮ ಬಹುಮಾನ ತಾರೇಶ್ ಕೊಡದಿಣ್ಣೆರವರು ಪಡೆದರು (ನಗದು ಬಹುಮಾನ 15000 ಹಾಗೂ ಮೆಡಲ್ ).
ದ್ವಿತೀಯ ಬಹುಮಾನ ಪ್ರಜ್ವಲ್ ರೋಡ್ರಿಗಸ್ ಪಡೆದರು (ನಗದು ಬಹುಮಾನ 10000 ಹಾಗೂ ಮೆಡಲ್ )
ತೃತೀಯ ಬಹುಮಾನ ಹರ್ಷ ಎಚ್ ವಿ ಹಾಂದಿ ಪಡೆದರು.. (ನಗದು ಬಹುಮಾನ 5000 ಹಾಗೂ ಮೆಡಲ್ )
ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳು ಭಾಗವಹಿಸಿದ್ದರಿಂದ ಸಮಾಧಾನ ಕರ ಬಹುಮಾನವಾಗಿ ಪ್ರಥಮ ಬಹುಮಾನ ಸುಚಿತ್ರ, ದ್ವಿತೀಯ ಬಹುಮಾನ ಅಂಕಿತ ಎಂ ಎ ತೃತೀಯ ಬಹುಮಾನ ನಿತ್ಯಾ ಬಿ ಪಡೆದರು. ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ದಿಗಳಿಗೂ ಪ್ರಶಸ್ತಿ ಪತ್ರ ನೀಡಲಾಯಿತು. ಮುಕ್ತಾಯ ಸಮಾರೋಪ ಸಮಾರಂಭ ಮಾಡಲಾಯಿತು..
ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡಿದವರು ಲೈಫ್ ಲೈನ್ಸ್ ಚಿಕನ್, ಕೆಲಚಂದ್ರ ಕಾಫಿ, ಪ್ರಸನ್ನ ಕೃಷ್ಣಪ್ಪ, ವಿಭಾ ಸುಷ್ಮಾ, ಕೆರೆಕಾಡ್ ಹೋಂ ಸ್ಟೇ, ಫ್ಲೆಮ್ ಬ್ಯಾಕ್, ವಿಜಯ್ ಕುಮಾರ್, ಕೆಪಿ ವೆಂಕಟೇಶ್, ರೋಡ್ರಿಗಸ್ ಕಾಫಿ ಎಸ್ಟೇಟ್,
ಕಾರ್ಯಕ್ರಮದಲ್ಲಿ ವಿಜಿ ಸಿದ್ದಾರ್ಥ ಹೆಗಡೆ ಅಭಿಮಾನಿ ಸಂಘದ ಅಧ್ಯಕ್ಷರು ಹಾಲಪ್ಪ ಗೌಡ್ರು, ಕೆಂಪೇಗೌಡ ಸಂಘದ ತಾಲೋಕು ಅಧ್ಯಕ್ಷ ಕಡಿದಾಳು ಬ್ರಿಜೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೋಕು ಅಧ್ಯಕ್ಷ ಡಿ ಕೆ ಲಕ್ಷಣ ಗೌಡ್ರು, ಶ್ರೀರಾಮಸೇನೆಯ ತಾಲೋಕು ಅಧ್ಯಕ್ಷ ಅರುಣ್ ಕುಂಬಾರಡಿ, ಪರೀಕ್ಷಿತ್ ಜಾವಳಿ, ತಿಲಕ್ ಸತ್ತಿಗನಹಳ್ಳಿ, ಸಂದೇಶ್ ಹೆಸಗೂಡು, ಪ್ರಸಾದ್ ಬಕ್ಕಿ, ಸುದೀಪ್, ಪಿಕೆ ರಾಜು, ಹಸಿರು ಫೌಂಡೇಶನ್ ಉಪಾಧ್ಯಕ್ಷ ವಿನುಪ್ರಸಾದ್, ಕಾರ್ಯದರ್ಶಿ ಅಭಿಜಿತ್ ಹೆಡದಾಳು, ಪ್ರದೀಪ್ ಊರುಬಗೆ, ಸಚಿನ್ ದುರ್ಗದಹಳ್ಳಿ, ಶೋದನ್ ಹೊಸಕೆರೆ, ಪೂರ್ಣೇಶ್ ಹೆಬ್ರಿಗೆ, ಅದೀಪ್ ಊರುಬಗೆ, ಸುಮಂತ್ ಸತ್ತಿಗನಹಳ್ಳಿ, ಹಾಗೂ ಎಲ್ಲಾ ಸ್ವಯಂ ಸೇವಕರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *