लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
24/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಜಿ.ರಂಜಿತ್ ನೇಮಕ.”

1 min read

ಮೂಡಿಗೆರೆ: ತಾಲ್ಲೂಕಿನ ದಾರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾಜಿ ಅಧ್ಯಕ್ಷ ದಿವಂಗತ ಗೋಪಾಲಗೌಡ ಡಿ, ಎಂ, ಅವರ ಸುಪುತ್ರ ಡಿ. ಜಿ. ರಂಜಿತ್ ಹಾಗೂ ಉಪಾಧ್ಯಕ್ಷರಾಗಿ ಧಾರ್ಮಿಕ ದಿನೇಶ್ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ಡಿ.ಜಿ.ರಂಜಿತ್ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಲು ಕಾರಣರಾದ ಎಲ್ಲಾ ನಿರ್ದೇಶಕರು ಹಾಗೂ ಮುಖಂಡರಿಗೂ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಅವಧಿಯಲ್ಲಿ ಸಹಕಾರ ಕ್ಷೇತ್ರದಲ್ಲಿ ರೈತರಿಗೆ ನ್ಯಾಯ ಒದಗಿಸಲು ಶ್ರಮಿಸುವುದಾಗಿ ಶ್ರಮಿಸುತ್ತೇನೆ. ಕೃಷಿ ಸಹಕಾರ ಸಂಘವನ್ನು ಅಭಿವೃದ್ಧಿ ಪಡಿಸುತ್ತೇನೆ ಹಾಗೂ ಸರ್ಕಾರದಿಂದ ಬರುವ ಸವಲತ್ತುಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.

 

ಈ ವೇಳೆ ನೂತನ ಅಧ್ಯಕ್ಷರಿಗೆ ಮಾತೃಶ್ರೀ ಎ.ಕೆ. ಲೀಲಾವತಿ,ಮಡದಿ ರಕ್ಷಿಣಿ,ಸಹೋದರ ರೋಹಿತ್, ಮತ್ತು ಕುಟುಂಬಸ್ಥರು,ಹಾಗೂ ಹಿರಿಯ ಮುಖಂಡರಾದ ಅಶೋಕ್ ಡಿ. ಬಿ. ಕಾಫಿ ಬೆಳೆಗಾರರಾದ ಮಹೇಂದ್ರ ಗೌಡ, ರಮೇಶ್ ಗೌಡ. ರಾಜೀವ್ ಗೌಡ,ಹಿರಿಯ ಪತ್ರಕರ್ತರಾದ ರಾಘವೇಂದ್ರ ಕೆಸವಳಲು,ಮೂಡಿಗೆರೆ ರೋಟರಿ ಕ್ಲಬ್ ಕಾರ್ಯದರ್ಶಿ ಸಂತೋಷ್ ಹಂಡಗುಳಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು, ಸಿಬ್ಬಂದಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಗ್ರಾಮದ ಮುಖಂಡರು ಸ್ಥಳೀಯರು ಹಾಗೂ ಅಭಿಮಾನಿಗಳು ಅಭಿನಂದನೆ ತಿಳಿಸಿದರು

ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ರಂಜನ್ ಅಜಿತ್ ಕುಮಾರ್,ದೀಪಕ್ ಕಡಿದಾಳು,ರವಿ ಹಾಲೂರು, ಸಿದ್ದೇಶ್ ಕೆಸವಳಲು,ಆನಂದ್ ಆಚಾರಿ ಹಂಡಗುಳಿ,ಸುನೀತಾ ಕೆಸವಳಲು,ಕೆ. ಎಸ್. ರಂಜಿತ್ ಕೆಸವಳಲು,ವಿಕ್ರಂ ದಾರದಹಳ್ಳಿ,ಸೀನಾ ಮಗ್ಗಲಮಕ್ಕಿ, ಅರುಣಕ್ಷಮ್ಮ ಅಬಚೂರು, ಸೇರಿದಂತೆ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಪತ್ ಕುಮಾರ್, ಸಿಬ್ಬಂದಿಗಳಾದ ಸ್ಮಿತಾ, ವಿಘ್ನೇಶ್, ಶ್ರೀಮಂತ್,ಆನಂದ್, ಅಶ್ವಥ್, ಗ್ರಾಮಸ್ಥರು ಉಪಸ್ಥಿತರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

More Stories

Leave a Reply

Your email address will not be published. Required fields are marked *

You may have missed