“ನೀಟ್ ಅಕ್ರಮ ಖಂಡಿಸಿ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಆಗ್ರಹ : ಚಿಕ್ಕಮಗಳೂರಿನಲ್ಲಿ ದಲಿತ–ಪ್ರಗತಿಪರ ಸಂಘಟನೆಗಳ ಪ್ರತಿಭಟನೆ.”
1 min read
ಚಿಕ್ಕಮಗಳೂರು : ದಿನಾಂಕ 20/07/2026ರಂದು ಚಿಕ್ಕಮಗಳೂರು ಜಿಲ್ಲೆಯ ದಲಿತ,ಪ್ರಗತಿಪರ ಸಂಘಟನೆಗಳ ವೇದಿಕೆ ವತಿಯಿಂದ ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ನೀಟ್ ಮತ್ತು ಇತರೆ ಪರೀಕ್ಷೆಗಳಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿರುವ ಅಕ್ರಮ ಖಂಡಿಸಿ,ಯೂನಿಯನ್ ಸರ್ಕಾರ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ವಿದ್ಯಾರ್ಥಿ ಯುವಜನರ ಹೋರಾಟಗಳನ್ನು ಕಡೆಗಣಿಸುವುದು,ಧಮನಿಸುವದನ್ನು ನಿಲ್ಲಿಸಬೇಕು,ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರ ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು. ಉಪವಾಸ ಸತ್ಯಾಗ್ರಹ ನಿರತ ವಿದ್ಯಾರ್ಥಿಗಳಾದ ನೆಹಬೋರ,ಮನೀಶ್,ಅಮೀನ್,ಅಭಿಜಿತ್ ದೀಪ್ಕೆ ಇತರರು ಸೇರಿದಂತೆ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ರವರ ಪ್ರಾಣ ರಕ್ಷಿಸುವುದರ ಜೊತೆಗೆ ಅವರ ಬೇಡಿಕೆಗೆ ಮನ್ನಣೆ ನೀಡಲು ಯೂನಿಯನ್ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಷ್ಟ್ರಪತಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಪ್ರತಿಭಟನಾ ನಿರತ ಸಂಘಟನೆಗಳು ಮನವಿ ಪತ್ರ ಸಲ್ಲಿಸಿದವು.
ಪ್ರತಿಭಟನೆಯಲ್ಲಿ ಕರ್ನಾಟಕ ಅಂಬೇಡ್ಕರ್ ವೈಚಾರಿಕ ವೇದಿಕೆ,ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ,ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಸ್ಥಾಪಿತ ಬಣ,ದ.ಸಂ.ಸ ನಾಗವರಬಣ,ದ.ಸಂ.ಸ ಸಾಗರ ಬಣ,ದ.ಸಂ.ಸ ಗುರುಪ್ರಸಾದ್ ಬಣ,ಕರ್ನಾಟಕ ಪ್ರಗತಿಪರ ಸಂಘಟನೆ,ಛಲಾವಾದಿ ಮಹಾಸಭಾ,ಎದ್ದೇಳು ಕರ್ನಾಟಕ,ಎಸ್.ಡಿ.ಪಿ.ಐ.,ಮಧುಕರ ಶೆಟ್ಟಿ ಯುವಕ ಬಳಗ ಈ ಸಂಘಟನೆಗಳು ಮಳೆಯ ನಡುವೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.
✍🏻ಬರಹ ಕೃಪೆ.✍🏻

ರತ್ನ ನಾಗೇಶ್.
ಚಿಕ್ಕಮಗಳೂರು
ನ್ಯೂಸ್ ಬ್ಯೂರೋ,ಅವಿನ್ ಟಿವಿ
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

