ಮಹಾದೇವಿ ಜನ್ಮ ದಿನಾಚರಣೆ
1 min read
ಮಹಾದೇವಿ ಜನ್ಮ ದಿನಾಚರಣೆ
*ತರೀಕೆರೆ೧೩:* ಮಹಿಳಾ ದಿನಾಚರಣೆ ಅಂಗವಾಗಿ ಶರಣ ಸಾಹಿತ್ಯದ ವಚನಗಾತಿ೯ಯರ ಸಂಸ್ಮರಣೆ ಮತ್ತು ಮಾತೆ ಮಹಾದೇವಿ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ತಾಲೂಕು ಘಟಕದ ವತಿಯಿಂದ ಗುರುವಾದಂದು ಹಾದಿಕೆರೆ ಗ್ರಾಮದ ಗೌರಮ್ಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು
ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಗಂಗಾಧರಪ್ಪ ಮಾತನಾಡಿ ಬಸವಣ್ಣನವರ ವಚನಗಳನ್ನು ತಿದ್ದುವ ತಪ್ಪು ನಡೆಯುತ್ತಿದೆ. ಬಸವತತ್ವ ದೂರ ಇರುವವರನ್ನು ಸಂಪರ್ಕಕ್ಕೆ ತರುತ್ತದೆ.ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕೆಲಸವಾಗಬೇಕು ಎಂದು ಹೇಳಿದರು.
ಗೌಪ್ಯ ವಚನಗಾತಿ೯ಯರ ಕುರಿತು ಮಾತನಾಡಿದ ಶಿಕ್ಷಕ ಚೇತನ್ ಗೌಡ ಶೋಷಣೆ, ಕಂದಾಚಾರ ಮತ್ತು ಮೌಡ್ಯಗಳ ತೊಲಗಿಸಲು ಬಸವಣ್ಣ ಸೇರಿದಂತೆ ಇತರೇ ಶರಣರು ಹುಟ್ಟ ಬೇಕಾಯಿತು.
12 ನೇ ಶತಮಾನ ಮಹಿಳೆಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಕೆಲಸಮಾಡಿದೆ ಶ್ರೀ ಗುರು ಸಿದ್ದರಾಮೇಶ್ವರರು ವಚನಗಳ ಮೂಲಕ ಮಹಿಳೆಯರನ್ನು ಗೌರವಿಸಿದವರಲ್ಲಿ ಮೊದಲಿಗರು. ಶರಣೆ ಸತ್ಯಕ್ಕ, ಹಾದರ ಕಾಯಕದ ಗಂಗಮ್ಮ, ಕಾಳವ್ವೆ, ಸೂಳೆ ಸಂಕವ್ವೆ ಸೇರಿದಂತೆ ಬಹಳಷ್ಟು ವಚನಗಾತಿ೯ಯರು ಸಮಾಜದ ಮುಖ್ಯ ನೆಲೆಯಲ್ಲಿ ಬಂದು ವಚನ ಪರಂಪರೆಯನ್ನು ಕಟ್ಟಿದ್ದಾಗಿ ಸ್ಮರಿಸಿದರು
ಶಿಕ್ಷಕ ಟಿ.ಎಸ್.ನಾಗರಾಜ್ ಆಯ್ದಕ್ಕಿ ಲಕ್ಕಮ್ಮ ಕುರಿತು ಮಾತನಾಡಿ ನಾಳೆಯ ಚಿಂತೆ ಬಿಟ್ಟರೆ ನಾವು ಇಂದು ಸುಖವಾಗಿ ಬಾಳಬಹುದು. ಶರಣರು ಬಡತನವನ್ನು ಪ್ರೀತಿಸಿದರು . ಆಯ್ದಕ್ಕಿ ಲಕ್ಕಮ್ಮನವರು ಕಾಯಕನಿಷ್ಠೆ ,ಆತ್ಮ ಗೌರವ, ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ತನ್ನ ವಚನಗಳ ಮೂಲಕ ಆಸೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಗತ್ಯಇರುವಷ್ಟು ಮಾತ್ರ ಸಂಗ್ರಹಿಸುವುದು. ದೇವರ ಒಲುಮೆಗೆ ಬಡತನವು ಅಡ್ಡಿ ಉಂಟಾಗುವುದಿಲ್ಲ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸಗಳನ್ನು ವಚನಕಾರರು ಮಾಡಿದ್ದಾರೆಂದು ತಿಳಿಸಿದರು
ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಗೌರವಾಧ್ಯಕ್ಷ ನಾಗೇನಹಳ್ಳಿ ತಿಮ್ಮಯ್ಯ ಮಾತನಾಡಿ ಸಮಾಜದಲ್ಲಿ ಬಸವ ತತ್ವ ಹೆಚ್ಚು ಪಸರಿಸಿ ನಾಡಿನಲ್ಲಿ ಮತ್ತೆ ಕಲ್ಯಾಣವಾಗಲಿ ಎಂದು ಆಶಿಸಿದರು.
ಪರಿಷತ್ತಿನ ಸಾಂಸ್ಕೃತಿಕ ಕಾಯ೯ದಶಿ೯ ಟಿ.ಜಿ.ಸದಾನಂದ್ ವಚನಗಳ ಹಾಡಿದರು
ಲೇಖಕ ಮನಸುಳಿ ಮೋಹನ್, ಕಲಾವಿದೆ ವಿಜಯಕುಮಾರಿ, ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಚಂದ್ರಪ್ಪ,, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಮತಾ ರಮೇಶ್ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ದಾದಾಪೀರ್ ಮಾತನಾಡಿದರು.