ಚಿನ್ನ ಕದ್ದವರು ಚಿಕ್ಕಮಗಳೂರಿನವರಾ .
1 min read
ಚಿನ್ನ ಕದ್ದವರು ಚಿಕ್ಕಮಗಳೂರಿನವರಾ ..
ಚಿಕ್ಕಮಗಳೂರು: ದುಬೈನಿಂದ ಬೆಂಗಳೂರಿಗೆ ಚಿನ್ನ ಕದ್ದು ಸಾಗಿಸುವಾಗ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಕೊಂಡಿರುವ ಅನನ್ಯರಾವ್ ಕಾಫಿನಾಡಿನವರು ಎಂದು ತಿಳಿದುಬಂದಿದೆ.
18 kg ಚಿನ್ನವನ್ನು ಕದ್ದು ಸಾಗಿಸುವಾಗ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿರುವ ಅನನ್ಯ ರಾವ್ ತಾಯಿ ರೋಹಿಣಿ ಚಿಕ್ಕಮಗಳೂರಿನ ಕೈ ಮರದವರು .
ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಧಿಕಾರಿಯಾಗಿದ್ದ ರಾಮ್ ಚಂದ್ರರಾವ್ ರೈಫಲ್ ಟ್ರೈನಿಂಗ್ ಗೆ ಬಂದಿದ್ದ ರೋಹಿಣಿ ಎಂಬ ಮಹಿಳೆ ಎಂಬುವರನ್ನು ಬುಟ್ಟಿಗೆ ಹಾಕಿಕೊಂಡು ಅಧಿಕೃತವಾಗಿ ಮದುವೆಯಾಗಿ ಬಾಳು ನೀಡಿದವರಿಗೆ ಈ ರೀತಿಯ ಘಟನೆ ಅರಗಿಸಿಕೊಳ್ಳುವಂತೆ ಮಾಡಿದೆ.
ರೋಹಿಣಿಯ ಮಗಳು ಅನನ್ಯ ರಾವ್ ಎಂದು ತಿಳಿದು ಬಂದಿದ್ದು ಇವಳು ಸಣ್ಣ ಪುಟ್ಟ ಧಾರವಾಹಿಗಳಲ್ಲಿ ನಟಿಸಿದ್ದು ಮಾಣಿಕ್ಯ ಚಲನಚಿತ್ರದಲ್ಲಿ ನಟಿಸಿದ್ದಳು ಎಂದು ತಿಳಿದು ಬಂದಿದೆ.
ಅನನ್ಯ ರಾವ್ ಇದೇ ಮೊದಲ ಸಲ ಕಳ್ಳತನ ಮಾಡಿರಲು ಸಾಧ್ಯವಿಲ್ಲ. ಹಲವಾರು ಬಾರಿ ಕಳ್ಳತನ ಮಾಡಿರುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.ಪೊಲೀಸ್ ಉನ್ನತ ಅಧಿಕಾರಿಯ ಮನೆಯಲ್ಲಿ ದುಬೈನಿಂದ ಚಿನ್ನ ಸಾಗಟ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆದಿದೆ.