ಹುರುಡಿಯಲ್ಲಿ ದ್ವಿತೀಯ ವರ್ಷದ ಜಪದಕಲ್ಲು ಟ್ರೋಫಿ 2025
1 min read
ಹುರುಡಿಯಲ್ಲಿ ದ್ವಿತೀಯ ವರ್ಷದ ಜಪದಕಲ್ಲು ಟ್ರೋಫಿ 2025
ಸಕಲೇಶಪುರ : ಹಾನುಬಾಳು ಹೋಬಳಿಯ ಹುರುಡಿಯಲ್ಲಿ ಏರ್ಪಡಿಸಿದ್ದ ದೇಸಿ ಹಾಗೂ ಗ್ರಾಮೀಣ ಕ್ರೀಡೆಯಾದ ಹೊನಲು ಬೆಳಕಿನ ಪುರುಷರ ಕಬ್ಬಡಿ ಪಂದ್ಯವನ್ನು ಚಕ್ಕುಡಿಗೆ ದಿ|| ಮೊಗಣ್ಣಗೌಡರ ಸ್ಮಾರಣಾರ್ತಕವಾಗಿ ಜಪ್ಪದಕಲ್ಲು ಪ್ರಯೋಜತ್ವದಲ್ಲಿ ದ್ವಿತೀಯ ವರ್ಷದ ಜಪ್ಪದಕಲ್ಲು ಟ್ರೋಫಿ 2025 ಆಯೋಜನೆ ಮಾಡಿದ್ದು ಪಂದ್ಯಕ್ಕೆ ಜಪದಕಲ್ಲು ಮಾಲೀಕರಾದ ಸಿ ಅರ್ ನೇಮಿರಾಜ್ ಮತ್ತು ಸ್ಥಳೀಯ ಹಿರಿಯರಾದ ಯು. ಕೆ ರಾಮೇಗೌಡ ಅವರು ಉದ್ಘಾಟಿಸುವ ಮೂಲಕ ಕಬ್ಬಡಿ ಆಟಕ್ಕೆ ಚಾಲನೆ ನೀಡಿದರು.
ಸೆವೆನ್ ಸ್ಟಾರ್ ಹುರುಡಿ ಮತ್ತು ಹೆಗ್ಗರವಳ್ಳಿ ಹಾಗೂ ಚಕ್ಕುಡಿಗೆ ಯುವಕರ ಸಂಯುಕ್ತ ಆಶ್ರಯದಲ್ಲಿ ಆಯೋಜನೆ ಮಾಡಿದ್ದ ಕಬ್ಬಡಿ ಪಂದ್ಯದ ಸಮರೂಪ ಸಮಾರಂಭದಲ್ಲಿ ಜಪದಕಲ್ಲು ಮಾಲೀಕರಾದ ಸಿ ಅರ್ ನೇಮಿರಾಜ್ ಮಾತನಾಡಿ ದೇಸಿ ಹಾಗೂ ಗ್ರಾಮೀಣ ಕ್ರೀಡೆಯಾದ ಕಬ್ಬಡಿಗೆ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲು ಮುಂದಾಗಬೇಕು ಕಬ್ಬಡಿ ಕ್ರೀಡೆ ಗ್ರಾಮೀಣ ಮಟ್ಟದಲ್ಲಿ ಬೆಳೆದು ಬಂದು ಇಂದು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗಮನ ಸೆಳೆಯುತ್ತಿದೆ. ಇತ್ತೀಚಿನ ದಿನದಲ್ಲಿ ರಾಜಕೀಯ ಕ್ರೀಡಾ ಕ್ಷೇತ್ರದಲ್ಲೂ ಹಸ್ತ ಕ್ಷೇಪ ಆಗುತ್ತಿರುವದರಿಂದ ನೈಜ ಪ್ರತಿಭೆಗಳು ಅವಕಾಶ ವಂಚಿತರಗುತ್ತಿದ್ದಾರೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಕಬ್ಬಡಿ ಪಂದ್ಯಕ್ಕೆ ಪ್ರೋತ್ಸಾಹ ನೀಡಿದ ಹುರುಡಿ ಹೆಚ್ ಎಸ್ ಪ್ರಸನ್ನ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಇಂತಹ ಕ್ರೀಡೆಗಳು ಆಯೋಜನೆ ಮಾಡುವದರಿಂದ ಪರಸ್ಪರ ಸೌಹಾರ್ದತೆ ಯುವಕರಲ್ಲಿ ಮೂಡುತ್ತದೆ.
ಕ್ರೀಡಾಪಟುಗಳು ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಸಾದಿಸಲು ಸಾದ್ಯ ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇಂತ ಕ್ರೀಡೆಗಳು ಆಯೋಜನೆ ಮಡುವದರಿಂದ ಒಗ್ಗಟ್ಟು ಮೂಡುತ್ತದೆ ಎಂದರು.
ಜಪದಕಲ್ಲು ಟ್ರೋಫಿಯನ್ನು ಅರೇಹಳ್ಳಿ ಅಟ್ಯಾಕರ್ಸ್ ತನ್ನ ಮೂಡಿಗೆರಿಸಿಕೊಂಡರೆ. ದ್ವಿತೀಯ ಸ್ಥಾನವನ್ನು ಹುರುಡಿ ಅವಿನಾಶ್ ನೇತೃತ್ವದ ಎ ಎಸ್ ವಿ ಅಟ್ಯಾಕರ್ಸ್ ಹಾಗೂ ತೃತೀಯ ಸ್ಥಾನವನ್ನು 7ಸ್ಟಾರ್ ಹುರುಡಿ -ಹೆಗ್ಗರವಳ್ಳಿ ಆಯೋಜಕ ತಂಡದ ಪಲಾದರೆ ಚತುರ್ಥ ಬಹುಮಾನವನ್ನು ರಾಜೇಂದ್ರಪುರ ಈಗಲ್ಸ್ ಬಾಳ್ಳುಪೇಟೆ ತಂಡ ಪಡೆದುಕೊಂಡಿತು.
ಜಪದಕಲ್ಲು ಟ್ರೋಫಿ ಕಬ್ಬಡಿ ಕ್ರೀಡಾಕೂಟದಲ್ಲಿ ಗ್ರಾಮ ಪಂಚಾಂಯ್ತಿ ಸದಸ್ಯರಾದ ಹುರುಡಿ ಕೇಶವಮೂರ್ತಿ, ಶೈಲಾ ರುದ್ರೇಶ್ ಹಾಗೂ ಪಂದ್ಯ ಅಯೋಕೆಕರಾದ ನಂದನ್, ಸುದೀಪ್, ಸುಚ್ಚಿನ್, ಮದು ಮತ್ತು ಸಹಸ್ರಾರು ಸಂಖ್ಯಯ ಸುತ್ತ ಮುತ್ತಲಿನ ಗ್ರಾಮಸ್ಥರು ಕಬ್ಬಡಿ ಪಂದ್ಯ ವೀಕ್ಷಿಸಿ ಕಣ್ಣುಂಬಿ ಕೊಂಡರು.
<
<