ಶಿವರಾತ್ರಿ ಪ್ರಯುಕ್ತ ಪಾದಯಾತ್ರೆ ಆರಂಭ: ತಯಾರಾಗದ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ
1 min read
ಶಿವರಾತ್ರಿ ಪ್ರಯುಕ್ತ ಪಾದಯಾತ್ರೆ ಆರಂಭ: ತಯಾರಾಗದ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಶಿವರಾತ್ರಿ ಸಂದರ್ಭ ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರ ಹಲವು ತಂಡಗಳು ಈಗಾಗಲೇ ತಮ್ಮ ಪಾದಯಾತ್ರೆಯನ್ನು ಆರಂಭಿಸಿವೆ.
ಈ ಬಾರಿ ಫೆ.26ರಂದು ಮಹಾಶಿವರಾತ್ರಿ ನಡೆಯಲಿದೆ. ಬೆಂಗಳೂರು ಸಹಿತ ರಾಜ್ಯದ ನಾನಾ ಜಿಲ್ಲೆಗಳಿಂದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಧರ್ಮಸ್ಥಳಕ್ಕೆ ಚಾರ್ಮಾಡಿ, ಕಕ್ಕಿಂಜೆ ಮೂಲಕ ಕಾಲ್ನಡಿಗೆಯಲ್ಲಿ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ.
ಪಾದಯಾತ್ರೆ ಮೂಲಕ ಆಗಮಿಸುವ ತಂಡಗಳಿಗೆ ಮಹಾಶಿವರಾತ್ರಿ ಪಾದಯಾತ್ರೆ ಆರಂಭವಾದರೂ ಸೂಚನೆಗಳನ್ನು ನೀಡುವ ಫಲಕಗಳನ್ನು ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಿಂದ ಘಾಟಿ ಪ್ರದೇಶದಲ್ಲಿ ಎಲ್ಲಿಯೂ ಕೂಡ ಸೂಚನ ಫಲಕ ಕಾಣುವಂತಿಲ್ಲ. ಇದಕ್ಕೆ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾ ಆಡಳಿತ ಮುಂದಾಗಬೇಕು.
ಸಂಘ ಸಂಸ್ಥೆಗಳ ವತಿಯಿಂದ ಮುಂದಿನ ದಿನಗಳಲ್ಲಿ ಪಾನೀಯ ಇತ್ಯಾದಿ ಕೌಂಟರ್ ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಈ ಪಾದಯಾತ್ರೆಯಲ್ಲಿ ಶ್ರೀಮಂತ, ಬಡವ ಭೇದಭಾವವಿಲ್ಲದೆ ಜನರು ಆಗಮಿಸುತ್ತಾರೆ. ಹೆಚ್ಚಿನ ಸಂಖ್ಯೆ ಯುವಜನರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ಧರ್ಮಸ್ಥಳದಲ್ಲಿ ದೇವಸ್ಥಾನದ ಮಹಾದ್ವಾರದ ಎದುರುಗಡೆ ಉಚಿತ ಪಾನೀಯ ವ್ಯವಸ್ಥೆ, ಸೂಚನೆ ನೀಡಲು ವಿಚಾರಣೆ ಕಚೇರಿ ಇತ್ಯಾದಿ ವ್ಯವಸ್ಥೆ ಇರುತ್ತದೆ.
ಆಗಮಿಸುವ ಪಾದಯಾತ್ರಿಗಳಿಗೆ ಆರೋಗ್ಯ ಅನುಕೂಲಕ್ಕಾಗಿ ತುರ್ತು ಚಿಕಿತ್ಸಾ ಘಟಕವನ್ನು ಕೊಟ್ಟಿಗೆಹಾರ, ಬಣಕಲ್, ಬಿದ್ರಹಳ್ಳಿ ಇಂತಹ ಕಡೆ ತೆರಿಯಬೇಕು. ಪಾದಯಾತ್ರಿಗಳು ಸಾಗಿ ಬರುವ ವೇಳೆ ಚಾರ್ಮಾಡಿಯಿಂದ ಧರ್ಮಸ್ಥಳ ತನಕ ಸ್ಥಳೀಯ ಸಂಘ ಸಂಸ್ಥೆಗಳಲ್ಲದೆ ವೈಯಕ್ತಿಕವಾಗಿ ಪಾನೀಯ, ಮಜ್ಜಿಗೆ, ಕಲ್ಲಂಗಡಿ, ಶರಬತ್ತು ಇನ್ನಿತರ ಅನುಕೂಲವನ್ನು ಉಚಿತವಾಗಿ ಕಲ್ಪಿಸುತ್ತಾರೆ. ಈಗಾಗಲೇ ಹೆಚ್ಚಿನ ತಂಡಗಳು ಹೊರಟಿದ್ದು, ಇನ್ನೇನು ಮೂರ್ನಾಲಕ್ಕೂ ದಿನಗಳಲ್ಲಿ ಪಾದಯಾತ್ರಿಗಳು ಕೊಟ್ಟಿಗೆಹಾರದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
ಪಾದಯಾತ್ರಿಗಳು ಸಂಚರಿಸುವ ರಸ್ತೆಯುದ್ದಕ್ಕೂ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಊಟದ ತಟ್ಟೆ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಅಲ್ಲಲ್ಲಿ ಎಸೆಯಬಾರದು. ಈ ಬಗ್ಗೆ ಶಿವರಾತ್ರಿ ಪಾದಯಾತ್ರೆಯ ಮಂದಿ ಸ್ವಚ್ಛತೆಗಾಗಿ ಹೆಚ್ಚಿನ ಮುತುವರ್ಜಿ ನೀಡಬೇಕು.
ಘಾಟಿ ರಸ್ತೆಯಲ್ಲಿ ವಾಹನದಟ್ಟಣೆ ಅಧಿಕ ಇರುವುದರಿಂದ ನಿಧಾನವಾಗಿ ರಸ್ತೆ ಬದಿ ಚಲಿಸಬೇಕು. ತಾಲ್ಲೂಕು ಆಡಳಿತ ಕೆಲವು ಪಂಚಾಯಿತಿ ಯಲ್ಲಿರುವ ಕಸದ ವಾಹನಗಳು ಕೊಟ್ಟಿಗೆಹಾರ, ಬಣಕಲ್ ಹಾಗೂ ಚಾರ್ಮಾಡಿ ಘಾಟ್ʼನ ರಸ್ತೆ ಬದಿ ಊಟದ ತಟ್ಟೆ, ನೀರಿನ ಬಾಟಲಿಗಳು ಬೀಳದಂತೆ ಕಸದ ವಾಹನ ಸೌಕರ್ಯ ಮಾಡಿಕೊಡಬೇಕು.
ಸಾವಿರಾರು ಪಾದಯಾತ್ರಿಗಳು ಕೊಟ್ಟಿಗೆಹಾರದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಯಾವುದೇ ಯಾತ್ರಿಗಳಿಗೆ ತೊಂದರೆ ಆಗದ ರೀತಿ ಮುಂಜಾಗ್ರತೆಯಾಗಿ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅರೋಗ್ಯ ಇಲಾಖೆ ಸೂಕ್ತ ನೀಗಾ ವಹಿಸಬೇಕಿದೆ.