ಸರ್ಕಾರಿ ಆಸ್ತಿಯನ್ನು ಸರ್ಕಾರಕ್ಕೆ.ಮರಳಿ ದಕ್ಕಿಸಿಕೊಟ್ಟ. ನಿಷ್ಟಾವಂತ ಸರ್ಕಾರಿ ನೌಕರ..
1 min read
ಸರ್ಕಾರಿ ಆಸ್ತಿಯನ್ನು ಸರ್ಕಾರಕ್ಕೆ.ಮರಳಿ ದಕ್ಕಿಸಿಕೊಟ್ಟ.
ನಿಷ್ಟಾವಂತ ಸರ್ಕಾರಿ ನೌಕರ..
*ಅತಿಕ್ರಮಣವಾಗಿದ್ದ ಗ್ರಾಮ ಪಂಚಾಯಿತಿಯ 10 ಕೋಟಿ ರೂ. ಮೌಲ್ಯದ ಜಾಗ*
*ಪಿಡಿಓ ಕಾಳಜಿಯಿಂದ ಮರಳಿ ಗ್ರಾಮ ಪಂಚಾಯಿತಿ ವಶಕ್ಕೆ*
ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಿಸಿದ್ದ ಅಂದಾಜು 10 ಕೋಟಿ ರೂ. ಗಿಂತಲೂ ಅಧಿಕ ಮೌಲ್ಯದ ಜಾಗ ಸಕಲೇಶಪುರ ತಾಲ್ಲೂಕು ಆನೆಮಹಲ್ ಗ್ರಾಮ ಪಂಚಾಯಿತಿ ಪಿಡಿಒ ವೇಣುಗೋಪಾಲ್ ಅವರ ಕಾಳಜಿಯಿಂದಾಗಿ ಮರಳಿ ಗ್ರಾಮ ಪಂಚಾಯತಿಯ ಸುಪರ್ದಿಗೆ ಸೇರಿದೆ.
ಈ ಹಿಂದೆ ಆನೆ ಮಹಲ್ ನ ಕೆಂಪೇಗೌಡ ಪ್ರತಿಮೆ ಹಿಂಭಾಗದಲ್ಲಿದ್ದ ಜಾಗವನ್ನು
ವಿನಯ್ ಎಂಬುವರು ಸೈಟ್ ಗಳನ್ನು ಮಾಡಿದ್ದಾಗ ಅದು ಗ್ರಾಮ ಪಂಚಾಯಿತಿಗೆ ಸೇರಿದ ಸಿ.ಎ. ಸೈಟಾಗಿತ್ತು. ಆದರೆ ಈ ಜಾಗದಲ್ಲಿ ಖಾಸಗಿ ವ್ಯಕ್ತಿಯೊರ್ವರು ಸರ್ವಿಸ್ ಸ್ಟೇಷನ್ ಹಾಗೂ ವೇ ಬ್ರಿಡ್ಜ್ ನಿರ್ಮಿಸಿದ್ದರು. ಈ ವಿಚಾರ ಗುಪ್ತ್… ಗುಪ್ತ್… ಆಗಿಯೇ ಉಳಿದಿತ್ತು.
ಗುಮಾನಿ ಮೇರೆಗೆ ಪಿಡಿಓ ವೇಣುಗೋಪಾಲ್ ಅವರು ಜಾಗಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿದಾಗ
ನಿಜಾಂಶ ಬಯಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ವೇಣುಗೋಪಾಲ್ ಅವರು
ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಗ್ರಾಮ ಪಂಚಾಯಿತಿಯ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭ ಆನೆಮಹಲ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಹೈರ ಸಲೀಂ ಹಾಗೂ ಇತರ ಸದಸ್ಯರು ಹಾಜರಿದ್ದರು.
ವೇಣುಗೋಪಾಲ್ ಅವರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಇವರು ಈ ಹಿಂದೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿಯೂ ಪಿ.ಡಿ.ಓ. ಆಗಿ ಕರ್ತವ್ಯ ನಿರ್ವಹಿಸಿದ್ದರು.