ವೇದಿಕೆಯನ್ನು ಸೃಷ್ಟಿ ಮಾಡಿಕೊಡುವ ಒಂದು ಪ್ರಯತ್ನವೇ ಜಿಲ್ಲಾ ಮಟ್ಟದ ಯುವಜನ ಮೇಳ-2025.
1 min read
ವೇದಿಕೆಯನ್ನು ಸೃಷ್ಟಿ ಮಾಡಿಕೊಡುವ ಒಂದು ಪ್ರಯತ್ನವೇ ಜಿಲ್ಲಾ ಮಟ್ಟದ ಯುವಜನ ಮೇಳ-2025.
ಜಿಲ್ಲಾ ಯುವಜನ ಮೇಳಕ್ಕೆ ಚಾಲನೆ ಕೊಟ್ಟ ಡಾ. ಮೋಟಮ್ಮ.
ಕರ್ನಾಟಕ ಜನಪದ ಕಲಾ ಪ್ರಕಾರಗಳ ಅನಾವರಣಗೊಳಿಸುವ ಸರ್ಕಾರದ ಒಂದು ಕಾರ್ಯಕ್ರಮ ಯುವಜನ ಮೇಳ…
ಕಳೆದ 6- 7ವರ್ಷಗಳಿಂದ ರದ್ದು ಪಡಿಸಿರುವ ಹಿನ್ನಲೆಯಲ್ಲಿ ಹವ್ಯಾಸಿ ಹಾಗೂ ವೃತ್ತಿ ಕಲಾವಿದರಿಗೆ ವೇದಿಕೆ ಇಲ್ಲದಂತಾಗಿದ್ದು ಮುಂದಿನ ಪೀಳಿಗೆಗೆ ಜನಪದ ಕಲಾ ಪ್ರಕಾರಗಳ ತಲುಪಿಸುವ ದಾರಿಯೆ ಇಲ್ಲದಾಗಿರುವುದು ಒಂದು ವಿಪರ್ಯಾಸ ,
ಹೀಗಿರುವಾಗ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿ ಕಳೆದ ಸುಮಾರು 30ವರ್ಷಗಳಿಂದ ಕಲಾ ಸೇವೆ ಮಾಡಿಕೊಂಡು ಬಂದಿರುವ ಮಿತ್ರ ಜಾನಪದ ಕಲಾ ಸಂಘ ಮೂಡಿಗೆರೆ ಇವರುಗಳು ಜಿಲ್ಲೆಯ ಎಲ್ಲ ತಾಲ್ಲೂಕಿನ ಜನಪದ ಕಲಾವಿದರನ್ನು ಒಟ್ಟು ಸೇರಿಸಿ ತಮ್ಮಲ್ಲಿರುವ ಜನಪದ ಕಲೆಯನ್ನು ಪ್ರಸ್ತುತ ಪಡಿಸಲು ವೇದಿಕೆಯನ್ನು ಸೃಷ್ಟಿ ಮಾಡಿಕೊಡುವ ಒಂದು ಪ್ರಯತ್ನವೇ ಜಿಲ್ಲಾ ಮಟ್ಟದ ಯುವಜನ ಮೇಳ-2025 ಸಂಘಟಿಸಿದೆ ಆ ಒಂದು ಕಾರ್ಯಕ್ರಮದ ಅಧಿಕೃತ ಚಾಲನೆಯನ್ನು ದಿನಾಂಕ -18-02-2025ರಂದು ಮಾಜಿ ಸಚಿವರು, ಸಾಂಸ್ಕೃತಿಕ ರಾಯಭಾರಿಗಳು ಆದ ಶ್ರೀಮತಿ ಮೋಟಮ್ಮ ಯುವಜನ ಮೇಳದ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ದಾನಿಗಳು ಆದ ರಂಜನ್ ಅಜಿತ್ ಕುಮಾರ್ ಇದ್ದು ಶುಭ ಕೋರಿದರು.
ಈ ಸಂದರ್ಭದಲ್ಲಿ…..
ಸಿದ್ದೇಶ್ ಕೇಶವಳಲು,ಬಕ್ಕಿ ಮಂಜುನಾಥ್, ಸುಬ್ರಮಣ್ಯಹಾಲೂರು.,ಚಂದ್ರಶೇಖರ್,ಕೆ.ಸಿ. ಜೈಪಾಲ್,ಹೊಸಹಳ್ಳಿ.. ರವೀಂದ್ರ,ಬಕ್ಕಿ…ನವೀನ್, ಶಶಿ, ಸಂದೇಶ್,ಮಗ್ಗಲಮಕ್ಕಿ.ಮುಂತಾದವರು ಇದ್ದರು .